ಉತ್ತರ ಪ್ರದೇಶದಲ್ಲಿ ಬಜರಂಗದಳಕ್ಕೆ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ಇದೆ , ನನಗೆ ಮಾತನಾಡಲು ಇಲ್ಲ !
ಅಸದುದ್ದೀನ್ ಉವೈಸಿ

ಹೈದರಾಬಾದ್ , ಜೂ. 17 : " ಉತ್ತರ ಪ್ರದೇಶದಲ್ಲಿ ಮೌಲಾನ ನರೇಂದ್ರ ಮೋದಿ ಹಾಗು ಮೌಲಾನ ಮುಲಾಯಂ ಸಿಂಗ್ ಯಾದವ್ ಅವರ ನಡುವೆ ನಾವು ಸಿಕ್ಕಿ ಹಾಕಿಕೊಂಡಿ ರುವುದಾಗಿ ಹೈದರಾಬಾದ್ ಸಂಸದ ಹಾಗು ಎ ಐ ಎಂ ಐ ಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಹೇಳಿದ್ದಾರೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಉವೈಸಿ ಅವರಲ್ಲಿ " ಮೌಲಾನ ಮುಲಾಯಮ್ ಅವರನ್ನು ಹೇಗೆ ಎದುರಿಸಿತ್ತೀರಿ " ಎಂದು ಪತ್ರಕರ್ತರು ಕೇಳಿದಾಗ ಈ ಉತ್ತರ ನೀಡಿದ್ದಾರೆ.
" ನಿಜವಾಗಿ ನಾನು ಮೌಲಾನ ನರೇಂದ್ರ ಮೋದಿ ಹಾಗು ಮೌಲಾನ ಮುಲಾಯಂ ಸಿಂಗ್ ಯಾದವ್ ಅವರ ನಡುವೆ ನಾವು ಸಿಕ್ಕಿ ಹಾಕಿಕೊಂಡಿದ್ದೇನೆ. ಮೋದಿಜಿ ತನ್ನನ್ನು ತಾನು ಸೂಫಿ ವಿಚಾರಧಾರೆಯವನು ಎಂದು ಹೇಳಿಕೊಳ್ಳುತ್ತಾರೆ. ನಾವು ಜನರ ಬಳಿ ಮುಸ್ಲಿಮರು ಹಾಗು ದಲಿತರ ಅಭಿವೃದ್ಧಿಯ ವಿಷಯ ತೆಗೆದುಕೊಂಡು ಹೋಗುತ್ತಿದ್ದೇವೆ. ಸುಳ್ಳು ಆರೋಪದ ಮೇಲೆ ಬಂಧಿತ ಅಮಾಯಕರನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ ಸಮಾಜವಾದಿ ಪಕ್ಷದ ಬಂಡವಾಳವನ್ನು ನಾವು ಬಯಲು ಮಾಡುತ್ತೇವೆ " ಎಂದವರು ಹೇಳಿದ್ದಾರೆ.
" ಎಸ್ಪಿ ಹಾಗು ಬಿಜೆಪಿಯ ಪರಸ್ಪರ ಮೈತ್ರಿ ಈಗಲೂ ಮುಂದುವರೆದಿದೆ. ಎಸ್ಪಿ ಸರಕಾರ ಬಜರಂಗದಳ ಹಾಗು ಹಿಂದೂ ಯುವವಾಹಿನಿಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡುತ್ತದೆ. ಆದರೆ ನನಗೆ ನೀಡುವುದಿಲ್ಲ. ಯಾರು ಯಾರ ಪರ ಇದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ . ಇಲ್ಲಿ ಮೋದಿ ಹಾಗು ಅಮಿತ್ ಶಾ ಸಾರ್ವಜನಿಕ ಸಭೆಗಳನ್ನು ನಡೆಸಬಹುದು, ಆದರೆ ನಾನು ನಡೆಸುವಂತಿಲ್ಲ. ಬಜರಂಗದಳಕ್ಕೆ ಶಸ್ತ್ರಾಸ್ತ್ರ ತರಬೇತಿ ನಡೆಸಲು ಅವಕಾಶ ಇದೆ ಆದರೆ ನನಗೆ ಮಾತನಾಡಲು ಅವಕಾಶ ಇಲ್ಲ " ಎಂದು ಉವೈಸಿ ದೂರಿದ್ದಾರೆ.







