ಕಾಸರಗೋಡು: ಖಾಸಗಿ ಬಸ್ ಪ್ರಯಾಣದರ ಏರಿಕೆಗೆ ಒತ್ತಾಯ
ಕಾಸರಗೋಡು, ಜೂ.17: ಖಾಸಗಿ ಬಸ್ ಪ್ರಯಾಣದ ಕನಿಷ್ಠ ದರವನ್ನು 8 ರೂ.ಗೆ ಏರಿಕೆ ಮಾಡಬೇಕೆಂದು ಬಸ್ ಮಾಲಕರ ಸಂಘದ ರಾಜ್ಯ ಸಮಿತಿ ಒತ್ತಾಯಿಸಿದೆ.
ಇಂಧನ ಮತ್ತು ಬಿಡಿ ಭಾಗಗಳ ಬೆಲೆ, ವಿಮಾ ಮೊತ್ತ ಹೆಚ್ಚಳವಾಗಿದ್ದು ಭಾರೀ ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣ ದರವನ್ನು ಕನಿಷ್ಟ ಏಳು ರೂ.ಗಳಿಂದ ಎಂಟು ರೂ.ಗೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದ್ದು, ಈ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲು ಮಾಲಕರು ತೀರ್ಮಾನಿಸಿದ್ದಾರೆ.
Next Story





