ಹಾಜಿ ಎ.ಎಂ. ಮೊಗ್ರಾಲ್

ಕಾಸರಗೋಡು, ಜೂ.17: ಅನಾರೋಗ್ಯದಿಂದಾಗಿ ಕೆಲ ದಿನಗಳ ಹಿಂದೆ ಕಾಸರಗೋಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಜಿ ಎ.ಎಂ. ಮೊಗ್ರಾಲ್ (74 ) ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಮೊಗ್ರಾಲ್ ಅವರು ಕಾಂಗ್ರೆಸ್ (ಎಸ್)ನ ಜಿಲ್ಲಾ ಕಾರ್ಯದರ್ಶಿ, ಜನತಾ ದಳದ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಕುಂಬಳೆ ಸಂಯುಕ್ತ ಜಮಾಅತ್‌ನ ಉಪಾಧ್ಯಕ್ಷ ಸೇರಿದಂತೆ ಹಲವು ಹುದೆಗಳನ್ನು ನಿರ್ವಹಿಸಿದ್ದರು.
ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
Next Story





