ಮಾನವರಿಂದ ತಪ್ಪಿಸಿಕೊಂಡು ರಸ್ತೆಗಿಳಿದ ರೋಬಟ್!

ಮಾಸ್ಕೊ, ಜೂ. 17: ರಶ್ಯದ ಪರ್ಮ್ ಎಂಬ ನಗರದ ಪ್ರಯೋಗಾಲಯವೊಂದರಲ್ಲಿ ಮನುಷ್ಯರೊಂದಿಗೆ ಓಡಾಡಿಕೊಂಡಿದ್ದ ಮಾನವ ಆಕಾರದ ರೋಬಟೊಂದಕ್ಕೆ ಮನುಷ್ಯರ ಸಹವಾಸವೇ ಬೇಡ ಎಂದನಿಸಿತೋ, ಅಥವಾ ಬಂಧನದಿಂದ ಮುಕ್ತಿ ಬೇಕೆನಿಸಿತೋ ಏನೋ!
ಇಂಜಿನಿಯರ್ ಒಬ್ಬರು ಪ್ರಯೋಗಾಲಯದ ಬಾಗಿಲು ಹಾಕಲು ಮರೆತರು. ಅಷ್ಟೇ ಸಾಕಾಯಿತು. ರೋಬಟ್ ಅಲ್ಲಿಂದ ತಪ್ಪಿಸಿಕೊಂಡು ಹೊರಬಂತು.
‘ಪ್ರೊಮೋಬಟ್’ ಎಂಬ ಹೆಸರಿನ ಅದು ಸಮೀಪದ ರಸ್ತೆಯೊಂದರ ಮಧ್ಯ ಭಾಗಕ್ಕೆ ಬಂತು. ಅಲ್ಲಿ ಅದರ ಬ್ಯಾಟರಿ ಖಾಲಿಯಾಯಿತು. ಹಾಗಾಗಿ ಒಂದು ಗಂಟೆ ಕಾಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಬಳಿಕ ಪ್ರಯೋಗಾಲಯದ ಸಿಬ್ಬಂದಿ ಬಂದು ರೋಬಟ್‌ನನ್ನು ಹಿಡಿದುಕೊಂಡು ಹೋದರು.
ಈ ದೃಶ್ಯವನ್ನು ಒಬ್ಬರು ಸೆರೆಹಿಡಿದಿದ್ದು ಯೂಟ್ಯೂಬ್‌ಗೆ ಹಾಕಿದ್ದಾರೆ.
Next Story





