ಪುತ್ತೂರು: ಬೈಕ್‌ಗಳ ನಡುವೆ ಢಿಕ್ಕಿ; ಮೂವರಿಗೆ ಗಾಯ
ಪುತ್ತೂರು, ಜೂ.17: ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಸಮೀಪ ಎರಡು ಬೈಕ್‌ಗಳ ನಡುವೆ ಢಿಕ್ಕಿ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ.
ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ನಿತಿನ್, ಪುತ್ತೂರಿನ ಸಿಟಿಗುಡ್ಡೆ ನಿವಾಸಿ ಶ್ರವಣ್ ಮತ್ತು ಸಾಮೆತ್ತಡ್ಕ ನಿವಾಸಿ ವಿಜು ಎಂಬವರು ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿತಿನ್ ಅವರು ತೆರಳುತ್ತಿದ್ದ ಬೈಕ್ ಮತ್ತು ಶ್ರವಣ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಬುಲೆಟ್ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಶ್ರವಣ್ ಅವರ ಬುಲೆಟ್ ಬೈಕಿನಲ್ಲಿದ್ದ ವಿಜು ಅವರು ಕೂಡ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.
Next Story





