ಪ್ರೊ.ಮಹೇಶ್ಚಂದ್ರ ಗುರು ಬಂಧನ
ರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ

ಮೈಸೂರು, ಜೂ.17: ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರೊ.ಮಹೇಶ್ಚಂದ್ರ ಗುರು ಅವರಿಗೆ 4ನೆ ಹೆಚ್ಚುವರಿ ಜೆಎಮ್‌ಎಫ್ ನ್ಯಾಯಾಲಯ ಜೂ.21ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
2015ರಲ್ಲಿ ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರೊ.ಮಹೇಶ್ಚಂದ್ರ ಗುರು ಅವರು ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕರುನಾಡ ಸರ್ವೋದಯ ಸಂಘಟನೆಯ ಅಧ್ಯಕ್ಷ ಸಿ.ವಿ.ರವಿಶಂಕರ್ ಎಂಬವರು ಜಯಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ಪ್ರೊ.ಮಹೇಶ್ಚಂದ್ರ ಗುರು ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಎರಡು ಬಾರಿ ಸಮನ್ಸ್ ಜಾರಿಯಾಗಿದ್ದರೂ ಅವರು ಹಾಜರಾಗಿರಲಿಲ್ಲ. ಇಂದು ನ್ಯಾಯಾಲಯಕ್ಕೆ ಹಾಜರಾದಾಗ ಅವರಿಗೆ ಜೂ.21ರವೆರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story





