Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹೈದರಾಬಾದ್ ವಿವಿ: ನಿಲ್ಲದ ದಮನ ನೀತಿ

ಹೈದರಾಬಾದ್ ವಿವಿ: ನಿಲ್ಲದ ದಮನ ನೀತಿ

ವಾರ್ತಾಭಾರತಿವಾರ್ತಾಭಾರತಿ17 Jun 2016 11:30 PM IST
share
ಹೈದರಾಬಾದ್ ವಿವಿ: ನಿಲ್ಲದ ದಮನ ನೀತಿ

ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ, ಕನ್ಹಯ್ಯೆ ಹೋರಾಟದ ಬಳಿಕವೂ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಗಳಿಗೆ ನ್ಯಾಯ ಮಾಸಸಸ್ರ ಮರೀಚಿಕೆಯಾಗಿದೆ. ನ್ಯಾಯ ಸಿಗುವುದಿರಲಿ, ವೇಮುಲಾ ಪರವಾಗಿ ನಿಂತ ವಿದ್ಯಾರ್ಥಿಗಳು, ಪ್ರೊಫೆಸರ್‌ಗಳ ವಿರುದ್ಧ ಅನ್ಯಾಯ ಮುಂದುವರಿಯುತ್ತಿದೆ. ರೋಹಿತ್ ಆತ್ಮಹತ್ಯೆಗೆ ಕಾರಣರಾದ ಯಾವುದೇ ಆರೋಪಿಗಳ ಮೇಲೆ ಈವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಅಷ್ಟೇ ಅಲ್ಲ, ಇದೇ ಸಂದರ್ಭದಲ್ಲಿ ರೋಹಿತ್ ಪರವಾಗಿ ನಿಂತವರನ್ನು ಸರ್ವ ರೀತಿಯಲ್ಲಿ ದಮನ ಮಾಡುವ ರಕಾರದ ಕೆಲಸ ಮುಂದುವರಿದಿದೆ.


ರೋಹಿತ್ ವೇಮುಲಾ ಸಾವಿನ ನಂತರ ನಡೆದ ವಿದ್ಯಾರ್ಥಿಗಳ ಚಳವಳಿಗೆ ಸಕ್ರಿಯವಾಗಿ ಬೆಂಬಲ ಸೂಚಿಸಿದ್ದ ಬೋಧನಾ ವರ್ಗದ ಇಬ್ಬರು ಸದಸ್ಯರನ್ನು ಜೂನ್ 13ರಂದು ಹೈದರಾಬಾದ್ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿ ಅಮಾನತುಗೊಳಿಸಿತು. 48 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಅಪರಾಧಿಯಾಗಿ ಪೊಲೀಸ್ ಬಂಧನದಲ್ಲಿರುವವರನ್ನು ಅಮಾನತುಗೊಳಿಸಬೇಕು ಎಂಬ ಕಡ್ಡಾಯ ಕಾನೂನನ್ನು ಇದಕ್ಕೆ ನೆಪವಾಗಿಸಲಾಯಿತು.


 ರಾಜ್ಯಶಾಸ್ತ್ರದ ಸಹಾಯಕ ಉಪನ್ಯಾಸಕರಾಗಿದ್ದ ಡಾ. ಕೆ.ವೈ.ರತ್ನಂ ಮತ್ತು ಗಣಿತದ ಸಹಾಯಕ ಉಪನ್ಯಾಸಕ ಡಾ. ತಥಗತಾ ಸೇನ್‌ಗುಪ್ತಾ ಅವರನ್ನು ಮಾರ್ಚ್ 22ರಂದು 27 ವಿದ್ಯಾರ್ಥಿಗಳ ಜೊತೆಗೆ ಕಾಲೇಜು ಆವರಣದಲ್ಲಿ ಹಿಂಸೆ ಮತ್ತು ಸೊತ್ತುಗಳಿಗೆ ಹಾನಿ ಮಾಡಿದ ಆರೋಪದಡಿ ಬಂಧಿಸಲಾಗಿತ್ತು. ಮಾರ್ಚ್ 28ರಂದು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಈ ಸಮಯದಲ್ಲಿ, ರೋಹಿತ್‌ನ ಆತ್ಮಹತ್ಯೆ ಪ್ರಕರಣದಲ್ಲಿ ಉಪಪಕುಲಪತಿಗಳ ಮೇಲೆ ಎಸ್ಸಿ/ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಆರೋಪಿಯಾಗಿ ಎಫ್‌ಐಆರ್ ದಾಖಲಾಗಿತ್ತು, ಈ ಬಗ್ಗೆ ಇಂದಿನವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅದರ ಬದಲಾಗಿ ರೋಹಿತ್ ದಲಿತನೇ ಎಂಬ ಪ್ರಶ್ನೆಗಳು ಎದ್ದವು. ಬುಧವಾರದ ಪತ್ರಿಕೆಗಳಲ್ಲಿ ಗುಂಟೂರು ಜಿಲ್ಲೆಯ ಕಲೆಕ್ಟರ್ ರೋಹಿತ್ ದಲಿತನಾಗಿದ್ದು, ಮಾಲಾ ಜಾತಿಗೆ ಸೇರಿದವರಾಗಿದ್ದಾರೆ ಎಂದು ಜಿಲ್ಲೆಯ ದಾಖಲೆಗಳು ತಿಳಿಸುವುದಾಗಿ ನೀಡಿದ ಹೇಳಿಕೆ ಪ್ರಕಟವಾದವು. ರೋಹಿತ್ ದಲಿತ ಎನ್ನುವುದನ್ನು ದಾಖಲೆಗಳು ಸಾಬೀತು ಮಾಡಿದ ಬಳಿಕವಾದರೂ ಉಪಕುಲಪತಿಯ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿತ್ತು. ಅವರ ಬಂಧನವಾಗಬೇಕಾಗಿತ್ತು. ಆದರೆ ಅದ್ಯಾವುದೂ ಈವರೆಗೆ ನಡೆದಿಲ್ಲ. ಆದರೆ ರೋಹಿತ್ ವೇಮುಲಾ ಪರವಾಗಿ ಪ್ರತಿಭಟನೆ ಮಾಡಿದ ಪ್ರೊಫೆಸರ್‌ಗಳಿಗೆ ಎಲ್ಲ ಕಾನೂನು ಅನ್ವಯವಾಗಿದೆ. 48 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಅಪರಾಧಿಯಾಗಿ ಪೊಲೀಸ್ ಬಂಧನದಲ್ಲಿರುವವರನ್ನು ಅಮಾನತುಗೊಳಿಸಬೇಕೆನ್ನುವುದೇನೋ ಸರಿ. ಆದರೆ ಇಲ್ಲಿ ಪ್ರೊಫೆಸರ್‌ಗಳು ಯಾವುದೇ ಅಪರಾಧ ಚಟುವಟಿಕೆಗಳನ್ನು ಎಸಗಿ ಪೊಲೀಸರ ಬಂಧನಕ್ಕೊಳಗಾಗಿರುವುದಲ್ಲ. ತಮ್ಮ ವಿದ್ಯಾರ್ಥಿಗಳ ಪರವಾಗಿ ವಿವಿಯಲ್ಲಿ ನಡೆಸಿದ ಪ್ರತಿಭಟನೆಯ ಕಾರಣದಿಂದ, ಸ್ವತಃ ಉಪಕುಲಪತಿಯ ಕುಮ್ಮಕ್ಕಿನಿಂದಲೇ ಅವರನ್ನು ಬಂಧಿಸಲಾಯಿತು. ಅದೇ ಬಂಧನವನ್ನು ಮುಂದಿಟ್ಟು ಅವರನ್ನು ಅಮಾನತು ಗೊಳಿಸಲಾಗಿದೆ. ವಾಸ್ತವವಾಗಿ ಅವರನ್ನು ಅಮಾನತುಗೊಳಿಸಿರುವುದು ರೋಹಿತ್ ವೇಮುಲಾ ಪರವಾಗಿ ಮಾತನಾಡಿರುವುದಕ್ಕೆ.

ಅಮಾನತು, ವಜಾ, ಬಹಿಷ್ಕಾರ ಮತ್ತು ಇತರ ದಂಡನಾತ್ಮಕ ಕ್ರಿಯೆಗಳನ್ನು ತುರ್ತುಸ್ಥಿತಿಯ ಸಮಯದಲ್ಲಿ ಹಲವು ಹಂತಗಳಲ್ಲಿ ಎದುರಿಸಲಾಗಿತ್ತು- ಈಗಿನಂತೆ ಆಗ ಕೂಡಾ ವಿಶ್ವವಿದ್ಯಾನಿಲಯಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಚಳವಳಿಗಳನ್ನು ಮುನ್ನಡೆಸುತ್ತಿದ್ದರು. ಪದೇಪದೇ ಅನಾರೋಗ್ಯಕ್ಕೀಡಾಗುತ್ತಿದ್ದ ಅಮಾನತಿಗೆ ಒಳಗಾಗಿದ್ದ ಚೇರಬಂಡ ರಾಜು ಎಂಬ ಉಪನ್ಯಾಸಕ ಕವಿಯು ತಮ್ಮ ಅಮಾನತನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಬಂಧಿತರಲ್ಲಿ ಎಡಪಂಥೀಯರು ಹೆಚ್ಚಾಗಿದ್ದರೂ ಎಲ್ಲಾ ಸಮುದಾಯ, ಪಕ್ಷಗಳ ಜನರೂ ಇದ್ದರು. ಆದರೆ ಅಲ್ಲಿ ರಾಜಕೀಯದ ತಿರಸ್ಕಾರವಿರಲಿಲ್ಲ-ಬದಲಾಗಿ ರಾಜಕೀಯದ ಹಕ್ಕು, ಭಿನ್ನಮತದ ಹಕ್ಕು ಮತ್ತು ಭಿನ್ನಾಭಿಪ್ರಾಯದ ಮೂಲಕ ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವ ಹಕ್ಕನ್ನು ಪ್ರತಿಪಾದಿಸಲಾಗಿತ್ತು. ವಿಶ್ವವಿದ್ಯಾನಿಲಯವು ಪ್ರಜಾಪ್ರಭುತ್ವದ ಅರ್ಥ ಮತ್ತು ವೈಫಲ್ಯ ಹಾಗೂ ವಿವಿಧ ರಾಜಕೀಯಗಳ ಬಗ್ಗೆ ಚರ್ಚೆ ನಡೆಸುವ ತಾಣವಾಗಿತ್ತು. ತುರ್ತುಪರಿಸ್ಥಿತಿಯನ್ನು ಘೋಷಿಸಿದ ಕರಾಳ ದಿನದ ವರ್ಷಾಚರಣೆ ಸಮೀಪಿಸುತ್ತಿದ್ದಂತೆ ಭಿನ್ನಮತ ಮತ್ತು ವಾಕ್‌ಸ್ವಾತಂತ್ರದ ಹೃದಯ ಮತ್ತು ಆತ್ಮವಾಗಿದ್ದ ಹೈದರಾಬಾದ್ ನಗರದಲ್ಲಿ ಒಂದು ರೀತಿಯ ವಿಚಿತ್ರ ನೋವುಕಾರಕ ಸ್ಥಿತಿ ಸೃಷ್ಟಿಯಾಗಿದೆ. ಇದೇ ಸ್ಥಳದಲ್ಲಿ ನ್ಯಾಯಾಂಗ ಮತ್ತು ನ್ಯಾಯಾಲಯಕ್ಕೆ ಆಗಮಿಸುವ ಜನರಲ್ಲಿ ಜಾಗೃತಿ ಹುಟ್ಟಿಸುವ ಹಾಗೂ ಸರಕಾರ ಮತ್ತು ಆಡಳಿತವರ್ಗವನ್ನು ಜವಾಬ್ದಾರಿಯನ್ನಾಗಿಸುವ ಮೂಲಕ ನಾಲ್ಕು ದಶಕಗಳ ಹಿಂದೆ ಇತಿಹಾಸವನ್ನು ಸೃಷ್ಟಿಸಲಾಗಿತ್ತು. ಆದರೆ ಇವತ್ತು 48 ಗಂಟೆಗಳ ಕಾಲ ಬಂಧನದಲ್ಲಿದ್ದರು ಎಂಬ ಕಾರಣಕ್ಕೆ ಇಬ್ಬರು ಬೋಧಕವರ್ಗದ ಸದಸ್ಯರನ್ನು ಅಮಾನತು ಮಾಡಿರುವ ಘಟನೆ ನಮ್ಮ ಮುಂದಿದೆ.


ಹಲವು ವಿದ್ಯಾರ್ಥಿಗಳು ಮತ್ತು ಇಬ್ಬರು ಉಪನ್ಯಾಸಕರನ್ನು ಸುಮಾರು ಒಂದು ವಾರಗಳ ಕಾಲ ಬಂಧನಕ್ಕೀಡು ಮಾಡಿದ್ದ ಈ ಕ್ರಮ ಸ್ಪಷ್ಟವಾಗಿ ಅನಧಿಕೃತವಾಗಿದೆ. ಪ್ರತಿಷ್ಠಿತ ಕಾನೂನು ತಜ್ಞರು ಈ ಕ್ರಮವು ಪೊಲೀಸರು ಅದ್ಯಾವ ರೀತಿಯಲ್ಲಿ ಸ್ಪಷ್ಟವಾಗಿ ಅಪರಾಧಿ ಪ್ರಕ್ರಿಯೆಯನ್ನು ಉಲ್ಲಂಘಿಸಿದ್ದಾರೆ ಎಂಬುದರ ಬಗ್ಗೆ ಬರೆದಿದ್ದಾರೆ. ರೋಹಿತ್ ಯಾವ ರೀತಿಯಲ್ಲಿ ಮಾನಸಿಕ ದೌರ್ಜನ್ಯಕ್ಕೆ ಒಳಗಾಗಿ ಹತಾಶೆಗೀಡಾಗಿದ್ದಾರೆಯೋ, ಅದೇ ತಂತ್ರವನ್ನು ಉಳಿದ ಉಪನ್ಯಾಸಕರ ಮೇಲೂ ಪ್ರಯೋಗಿಸಿ ಅವರನ್ನು ಬಾಯಿಮುಚ್ಚಿಸುವ ಪ್ರಯತ್ನವೊಂದು ಹೈದರಾಬಾದ್ ವಿವಿಯಲ್ಲಿ ನಡೆಯುತ್ತಿದೆ.

ಈಗ ಬಹಳ ತುರ್ತಾಗಿ ಮತ್ತು ಅಗತ್ಯವಾಗಿ ಆಗಬೇಕಿರುವುದೇನೆಂದರೆ ವಿಶ್ವವಿದ್ಯಾನಿಲಯದ ಉಪನ್ಯಾಸಕರು ಒಂದು ಪ್ರಬಲ ನೈತಿಕ ಶಕ್ತಿಯಾಗಿ ಒಟ್ಟುಗೂಡಬೇಕು. ಕೇವಲ ದಲಿತ ಮತ್ತು ಆದಿವಾಸಿ ಉಪನ್ಯಾಸಕರು ಮಾತ್ರವಲ್ಲ, ಉಳಿದವರೂ ಜೊತೆಗೂಡಬೇಕು. ಇದು ಕೇವಲ ಹೈದರಾಬಾದ್ ವಿ.ವಿ. ಸಮಸ್ಯೆ ಮಾತ್ರವೇ ಅಲ್ಲ. ಎಲ್ಲ ವಿವಿಗಳೂ ಒಂದಲ್ಲ ಒಂದು ರೀತಿಯಲ್ಲಿ ಮೂಲಭೂತವಾದಿ ಮನಸ್ಥಿತಿಯ ಹಸ್ತಕ್ಷೇಪದಿಂದ, ರಾಜಕೀಯ ವ್ಯಕ್ತಿಗಳ ದಬ್ಬಾಳಿಕೆಯಿಂದ ನರಳುತ್ತಿವೆ. ಪ್ರತೀ ವಿವಿಯಲ್ಲೂ ಒಂದೆರಡು ಉಪನ್ಯಾಸಕರು ಇದರ ಬಲಿಪಶುಗಳಾಗಿದ್ದಾರೆ. ಆದುದರಿಂದ ಎಲ್ಲ ವಿವಿಗಳ ಉಪನ್ಯಾಸಕರು ಪರಸ್ಪರ ಕೈಜೋಡಿಸುವ ಸಮಯ ಬಂದಿದೆ. ವಿದ್ಯಾರ್ಥಿಗಳನ್ನು ರೂಪಿಸುವ ಉಪನ್ಯಾಸಕರ ಧ್ವನಿ ಅಡಗುವುದೆಂದರೆ, ಸತ್ಯದಧ್ವನಿ ಅಡಗುವುದಕ್ಕೆ ಸಮ. ಆದುದರಿಂದ, ಉಪನ್ಯಾಸಕರನ್ನು ಸುತ್ತುವರಿಯುತ್ತಿರುವ ಅಘೋಷಿತ ತುರ್ತುಪರಿಸ್ಥಿತಿಯ ವಿರುದ್ಧ ಧ್ವನಿಯೆತ್ತಲೇ ಬೇಕಾದಂತಹ ಸಮಯ. ಅದರ ಭಾಗವಾಗಿ, ಹೈದರಾಬಾದ್‌ನಲ್ಲಿ ಅಮಾನತುಗೊಂಡಿರುವ ಉಪನ್ಯಾಸಕರ ಪರವಾಗಿ ಎಲ್ಲ ವಿವಿಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಒಂದಾಗಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X