ಟು ವೇ ಮಿರರ್ ಹಾಗೂ ಹಿಡನ್ ಕ್ಯಾಮರಾಗಳನ್ನು ಪತ್ತೆ ಹಚ್ಚುವುದು ಹೇಗೆ?

ಕಾವಲು ಎಂದರೇನು ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಮುಖ್ಯವಾಗಿ ಟುವೇ ಮಿರರ್ ಮತ್ತು ಭದ್ರತಾ ಕ್ಯಾಮರಾಗಳ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಬಹಳಷ್ಟು ಸಾರ್ವಜನಿಕ ಕಟ್ಟಡಗಳಲ್ಲಿ ಜಾಗತಿಕವಾಗಿ ಇದು ಇರುತ್ತದೆ. ವ್ಯಾಪಾರಿ ಮಳಿಗೆ, ಹೊಟೇಲ್, ಬಾರ್ ಮತ್ತು ರೆಸ್ಟೊರೆಂಟುಗಳಲ್ಲೂ ಇರುತ್ತದೆ. ಅಮೆರಿಕದಲ್ಲಿ ಹಿಡನ್ ಕ್ಯಾಮರಾಗಳಿಗೆ ಕಾನೂನೇ ಇದೆ. ಇಂತಹ ಕಾನೂನು ಭಾರತದಲ್ಲಿಲ್ಲ. ಹೀಗಾಗಿ ಮುಂದಿನ ಬಾರಿ ಯಾವುದೇ ಜಾಗಕ್ಕೆ ಖಾಸಗಿ ಭೇಟಿಗೆ ಹೋದಾಗ ಹಿಡನ್ ಕ್ಯಾಮರಾಗಳ ಬಗ್ಗೆ ಎಚ್ಚರವಹಿಸಿ.
ಟು-ವೇ ಮಿರರ್ ಹೇಗೆ ಪರೀಕ್ಷಿಸುವುದು?
1. ಕನ್ನಡಿ ಪರೀಕ್ಷಿಸಿ
ಖಾಸಗಿ ಸ್ಥಳಕ್ಕೆ ಹೋದಾಗ ಕನ್ನಡಿ ಇದ್ದಲ್ಲಿ ಮೊದಲು ಅದನ್ನು ಪರೀಕ್ಷಿಸಿ. ಕನ್ನಡಿ ಹೇಗೆ ಅಳವಡಿಸಲಾಗಿದೆ ನೋಡಿ. ಅದನ್ನು ಗೋಡೆಗೆ ನೇತು ಹಾಕಿದೆಯೇ ಗೋಡೆಗೆ ಅಂಟಿದೆಯೇ ನೋಡಿ. ಟುವೇ ಮಿರರ್ ಗಳು ಗೋಡೆಗೆ ಅಳವಡಿಸಿರುತ್ತದೆ.
2. ಮಿರರ್ ತಟ್ಟಿ ನೋಡಿ.
ಮಿರರ್ ಅನ್ನು ಬೆರಳಿನಿಂದ ತಟ್ಟಿ ನೋಡಿ. ಗೋಡೆಯಲ್ಲಿರುವ ಕಾರಣ ಸಾಮಾನ್ಯ ಮಿರರ್ ಗಳು ಡಲ್ ಮತ್ತು ಫ್ಲಾಟ್ ಆಗಿರುತ್ತದೆ. ಟುವೇ ಮಿರರ್ ಗಳು ಟೊಳ್ಳಾಗಿರುತ್ತವೆ. ಏಕೆಂದರೆ ಮತ್ತೊಂದು ಕಡೆಗೆ ಜಾಗವಿರುತ್ತದೆ.
3. ಒಳತೂರಿ ನೋಡಿ
ಟುವೇ ಮಿರರ್ ಅಲ್ಲಿ ಮತ್ತೊಂದು ಕಡೆಗೆ ನೋಡಲು ಸಾಧ್ಯವಿದೆ. ಮಿರರ್ ಗೆ ಒತ್ತಿ ಮುಖ ಇಡಿ ಮತ್ತು ಬೆಳಕು ಬ್ಲಾಕ್ ಮಾಡಿ ಕಣ್ಣಿನ ಸುತ್ತ ಕೈಗಳನ್ನಿಟ್ಟು ಒಳಗೆ ನೋಡಿ. ಕೋಣೆಯ ಮತ್ತೊಂದು ಕಡೆಗೆ ನೋಡಬಹುದು.
4. ಬೆಳಕು ಬಳಸಿ
ಸ್ವಲ್ಪ ಬೆಳಕನ್ನು ಮಿರರ್ ಮೇಲೆ ಫ್ಲಾಷ್ ಮಾಡಿ. ನಿಮ್ಮ ಫೋನಿನ ಫ್ಲಾಷ್ ಕೂಡ ಸಾಕು. ಮಿರರ್ ಬಳಿ ಇಡಿ. ನೀವಿರುವ ಜಾಗದ ಲೈಟ್ ಆಫ್ ಮಾಡಿ. ಫ್ಲಾಷ್ ಹೊಳೆಯುತ್ತಿದೆಯೇ ನೋಡಿ. ಅತ್ತಕಡೆಗಿರುವ ಕೋಣೆ ಹೊಳೆಯುತ್ತದೆ. ಟುವೇ ಮಿರರ್ ಆದರೆ ಅದು ನಿಮಗೆ ಕಾಣಿಸುತ್ತದೆ.
5. ಬೆರಳಿನ ಪರೀಕ್ಷೆ
ನಿತ್ಯದ ಮಿರರ್ ಸೆಕೆಂಡ್ ಸರ್ಫೇಸ್ ಮಿರರ್ ಆಗಿರುತ್ತವೆ. ಅಂದರೆ ಗಾಜಿನ ಎರಡನೇ ಪದರ ಇರುತ್ತದೆ. ನೀವು ಬೆರಳಿನಿಂದ ಒತ್ತಿದಾಗ ಬೆರಳಿನ ಪ್ರತಿಬಿಂಬ ಬೆರಳನ್ನು ಸ್ಪರ್ಶಿಸುವುದಿಲ್ಲ. ಪ್ರತಿಬಿಂಬವನ್ನು ಬೆರಳು ಸ್ಪರ್ಶಿಸಿದಲ್ಲಿ ಮಿರರ್ ಟುವೇ ಇರುತ್ತದೆ.
ಹಿಡನ್ ಕ್ಯಾಮರಾಗಳನ್ನು ಪರೀಕ್ಷಿಸುವುದು ಹೇಗೆ?
1. ಆ್ಯಪ್ ಬಳಸಿ
ಆಪಲ್ ಮತ್ತು ಆಂಡ್ರಾಯ್ಡಾ ಫೋನ್ ಗಳಿಗೆ ಹಿಡನ್ ಕ್ಯಾಮರಾ ಪತ್ತೆ ಹಚ್ಚಲು ಆ್ಯಪ್ ಸಿಗುತ್ತದೆ.
2. ಸೆಲ್ ಸರ್ವಿಸ್ ಪರೀಕ್ಷೆ
ಭದ್ರತಾ ಕ್ಯಾಮರಾಗಳು ಫೋನಿನ ಸೆಲ್ ಸರ್ವಿಸ್ ಕಟ್ ಮಾಡುವ ಫ್ರೀಕ್ವೆನ್ಸಿ ಹೊಂದಿರುತ್ತವೆ. ನಿಮಗೆ ಒಂದು ಜಾಗದಲ್ಲಿ ಸರ್ವಿಸ್ ಸಿಗದೆ ಇದ್ದಲ್ಲಿ ಮತ್ತು ಭದ್ರತಾ ಕ್ಯಾಮರಾ ಕಾಣದೇ ಇದ್ದಲ್ಲಿ ಹಿಡನ್ ಸೆಕ್ಯುರಿಟಿ ಕ್ಯಾಮರಾ ಇರುವ ಸಾಧ್ಯತೆ ಇದೆ.
3. ಹೊಳೆಯುವ ಬೆಳಕಿಗೆ ಪರೀಕ್ಷಿಸಿ
ಸೆಕ್ಯುರಿಟಿ ಕ್ಯಾಮರಾಗಳಲ್ಲಿ ಇಂಡಿಕೇಟರ್ ಬೆಳಕಿರುತ್ತವೆ. ಅವುಗಳು ಸಾಮಾನ್ಯ ಹಸಿರು ಅಥವಾ ಕೆಂಪು ಬಣ್ಣದಲ್ಲಿರುತ್ತವೆ. ರಹಸ್ಯವಾಗಿ ಇಂತಹ ಬೆಳಕುಗಳು ಬರುತ್ತಿದ್ದಲ್ಲಿ ಹಿಡನ್ ಕ್ಯಾಮರಾ ಇರಬಹುದು. ನಿಮ್ಮ ಸುತ್ತಲ ಬೆಳಕು ಆಫ್ ಮಾಡಿದರೆ ಇದು ಚೆನ್ನಾಗಿ ಕಾಣುತ್ತದೆ.
ಕೃಪೆ: www.ideadigezt.com







