Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಫೋನ್ ಕದ್ದಾಲಿಕೆ ಬಗ್ಗೆ ಪಿಎಂಒಗೆ ದೂರು

ಫೋನ್ ಕದ್ದಾಲಿಕೆ ಬಗ್ಗೆ ಪಿಎಂಒಗೆ ದೂರು

ಪ್ರಧಾನಿ ಕಚೇರಿಗೆ ಕಾರ್ಪೊರೇಟ್ ಕಳ್ಳಗಿವಿ

ವಾರ್ತಾಭಾರತಿವಾರ್ತಾಭಾರತಿ17 Jun 2016 11:56 PM IST
share

ಹೊಸದಿಲ್ಲಿ, ಜೂ.17: ಕಾರ್ಪೊರೇಟ್ ಸಂಸ್ಥೆ ಎಸ್ಸಾರ್ ಗ್ರೂಪ್ 2001ರಿಂದ 2006ರ ನಡುವೆ, ಐದು ವರ್ಷಗಳ ತನಕ, ಎನ್‌ಡಿಎ ಮತ್ತು ಯುಪಿಎ ಆಡಳಿತಾವಧಿಗಳಲ್ಲಿ ಹಲವಾರು ಕ್ಯಾಬಿನೆಟ್ ಸಚಿವರು, ಕಾರ್ಪೊರೇಟ್ ಮುಖ್ಯಸ್ಥರಾದ ಮುಖೇಶ್ ಮತ್ತು ಅನಿಲ್ ಅಂಬಾನಿ, ವಾಜಪೇಯಿ ಪ್ರಧಾನಿಯಾಗಿದ್ದಾಗ ಪಿಎಂಒ ಕಚೇರಿಯ ಅಧಿಕಾರಿಗಳು ಸಹಿತ ಹಲವಾರು ಅಧಿಕಾರಿಗಳು ಸಹಿತ ಗಣ್ಯಾತಿಗಣ್ಯರ ಫೋನುಗಳನ್ನು ಕದ್ದಾಲಿಸಿದೆಯೆಂದು ಆರೋಪಿಸಲಾಗಿದೆಯೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿಯೊಂದು ಹೇಳಿದೆ.

 ಈ ಕದ್ದಾಲಿಸಲಾದ ದೂರವಾಣಿ ಸಂಭಾಷಣೆಗಳಲ್ಲಿ ಅಧಿಕಾರದ ಪ್ರಭಾವ ಬಳಕೆ, ಉದ್ಯಮಿ, ಸರಕಾರಿ ಅಧಿಕಾರಿಗಳ ನಡುವಣ ಒಡಂಬಡಿಕೆ ಬಗೆಗಿನ ವಿಚಾರಗಳು ಚರ್ಚೆಗೆ ಬಂದಿವೆಯೆಂದು ದಿಲ್ಲಿ ಮೂಲದ ಸುಪ್ರೀಂ ಕೋರ್ಟ್ ವಕೀಲ ಸುರೇನ್ ಉಪ್ಪಲ್ ಜೂನ್ 1ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಿರುವ 29 ಪುಟಗಳ ದೂರಿನಲ್ಲಿ ತಿಳಿಸಲಾಗಿದೆ. ಈ ಫೋನುಗಳನ್ನು ಕದ್ದಾಲಿಸಿದ ಎಸ್ಸಾರ್ ಉದ್ಯೋಗಿಯನ್ನು ತಾನು ಪ್ರತಿನಿಧಿಸುತ್ತಿರುವುದಾಗಿಯೂ ಉಪ್ಪಲ್ ಹೇಳಿಕೊಂಡಿದ್ದಾರೆನ್ನಲಾಗಿದೆ.
     ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು, ಮಾಜಿ ಸಚಿವರಾದ ಪ್ರಫುಲ್ ಪಟೇಲ್, ರಾಮ್ ನಾಕ್, ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ, ಅನಿಲ್ ಧೀರೂಬಾಯಿ ಅಂಬಾನಿ ಗುಂಪಿನ ಅನಿಲ್ ಅಂಬಾನಿ, ಅವರ ಪತ್ನಿ ಟೀನಾ ಅಂಬಾನಿ, ದಿವಂಗತ ಸಚಿವ ಪ್ರಮೋದ್ ಮಹಾಜನ್, ಸಂಸದ ಅಮರ್ ಸಿಂಗ್, ಹಾಲಿ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಷಿ, ಐಡಿಬಿಐ ಬ್ಯಾಂಕಿನ ಮಾಜಿ ಅಧ್ಯಕ್ಷ ಪಿ.ಪಿ.ವೋರಾ, ಐಸಿಐಸಿಐ ಬ್ಯಾಂಕಿನ ಮಾಜಿ ಎಂಡಿ ಕೆ.ವಿ.ಕಾಮತ್, ಐಸಿಐಸಿಐ ಬ್ಯಾಂಕಿನ ಆಡಳಿತ ನಿರ್ದೇಶಕ ಲಲಿತಾ ಗುಪ್ತೆ ಮತ್ತಿತರರ ದೂರವಾಣಿಗಳನ್ನು ಕದ್ದಾಲಿಸಲಾಗಿದೆಯೆಂದು ದೂರಲಾಗಿದೆ. ಸಂಭಾಷಣೆಗಳಲ್ಲಿ ಹೆಸರಿಸಲಾದ ಕೆಲವು ಇತರ ಅಧಿಕಾರಿಗಳೆಂದರೆ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಾದ ಬೃಜೇಶ್ ಮಿಶ್ರಾ, ಎನ್.ಕೆ.ಸಿಂಗ್, ರಾಜಕಾರಣಿಗಳಾದ ಸುಧಾಂಶು ಮಿತ್ತಲ್, ಪಿಯೂಶ್ ಗೋಯೆಲ್, ಜಸ್ವಂತ್ ಸಿಂಗ್, ಕಿರಿತ್ ಸೋಮಯ್ಯ, ರಾಮ ನಾಕ್, ಸಹಾರಾ ಮುಖ್ಯಸ್ಥ ಸುಬ್ರೊತೊ ರಾಯ್ ಹಾಗೂ ಬಾಲಿವುಡ್ ನಟ ಅಮಿತಾಭ್ ಬಚ್ಚನ್.
ಎಸ್ಸಾರ್ ಗ್ರೂಪ್ ಹಲವು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಪತ್ರಕರ್ತರೊಂದಿಗೆ ತನ್ನ ಸ್ವಹಿತಾಸಕ್ತಿಗೆ ಹೊಂದಿದೆಯೆನ್ನಲಾದ ಸಂಬಂಧಗಳ ಬಗ್ಗೆ ನ್ಯಾಯಾಲಯದ ನಿರ್ದೇಶನದಡಿಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವ ಸಂದರ್ಭ ಈ ದೂರು ಬಂದಿದೆ. ಈ ನಂಟಿನ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಮೊದಲು ವರದಿ ಮಾಡಿದ್ದರೂ ಕಂಪೆನಿ ಆಗ ತಾನೇನೂ ತಪ್ಪು ಮಾಡಿಲ್ಲವೆಂದು ಹೇಳಿತ್ತು.
 ವಕೀಲ ಉಪ್ಪಲ್ ಎರಡು ತಿಂಗಳ ಹಿಂದೆ ಎಸ್ಸಾರ್ ಗ್ರೂಪಿನ ಹಿರಿಯ ಅಧಿಕಾರಿಗಳಿಗೆ ತನ್ನ ಕಕ್ಷಿದಾರನ ಪರವಾಗಿ ‘ಎಚ್ಚರಿಕೆ ನೋಟಿಸ್’ ನೀಡಿದ್ದರು. ಕಕ್ಷಿದಾರ ಅಲ್ಬಸಿತ್ ಖಾನ್ ಎಸ್ಸಾರ್ ಗ್ರೂಪಿನ ಭದ್ರತಾ ವಿಭಾಗದ ಮಾಜಿ ಮುಖ್ಯಸ್ಥನಾಗಿದ್ದು ಈ ಫೋನ್ ಕದ್ದಾಲಿಕೆ ಅವರ ಉಸ್ತುವಾರಿಯಲ್ಲಿ ನಡೆಯುತ್ತಿತ್ತೆನ್ನಲಾಗಿದೆ.
   ತಮ್ಮ ಕಂಪೆನಿ ಹಚ್ಚಿನ್ಸನ್ ಎಸ್ಸಾರ್ ಅಡಿಯಲ್ಲಿ ಸೆಲ್ಯುಲರ್ ಆಪರೇಶನ್ಸ್‌ಗೆ ಲೈಸನ್ಸ್ ಹೊಂದಿದ್ದರಿಂದ ಕೆಲವೊಂದು ಫೋನ್‌ಗಳನ್ನು ಟ್ಯಾಪ್ ಮಾಡಿ ಸರಕಾರಿ ತನಿಖೆಗೆ ಸಹಕರಿಸುವುದು ಅದರ ಕರ್ತವ್ಯವೆಂದು ಎಸ್ಸಾರ್ ಗುಂಪಿನ ಪ್ರಶಾಂತ್ ರುಯಿಯ ಮತ್ತು ರವಿಕಾಂತ್ ರುಯಿಯ ಖಾನ್‌ಗೆ 2001ರಲ್ಲಿ ತಿಳಿಸಿದ್ದರೆಂದು ಉಪ್ಪಲ್ ಹೇಳುತ್ತಾರಲ್ಲದೆ ಖಾನ್ ಈಗ ಭೂಗತನಾಗಿದ್ದು ಆತನು ಕಂಪೆನಿಯ ಪ್ರಭಾವಕ್ಕೆ ಒಳಗಾಗಿರಬಹುದು ಎಂದಿದ್ದಾರೆ.
ದೂರಿನಲ್ಲಿ ಹಲವಾರು ಎಸ್ಸಾರ್ ಅಧಿಕಾರಿಗಳ ಹೆಸರುಗಳನ್ನು ನಮೂದಿಸಲಾಗಿದ್ದು ಅವರು ‘‘ವಿಶೇಷ ಮೊಬೈಲ್ ಸಿಮ್ ಕಾರ್ಡ್ ಅಥವಾ ಮೊಬೈಲ್ ಇಂಟರ್ ಸೆಪ್ಟರ್ ಸಿಮ್ ಕಾರ್ಡ್ ಗಳನ್ನು ಸೃಷ್ಟಿಸಿ ಅವುಗಳ ಮೂಲಕ ಕೆಲವೊಂದು ಮೊಬೈಲ್ ಫೋನುಗಳನ್ನು ಕದ್ದಾಲಿಸುತ್ತಿದ್ದರು’’ ಎಂದು ಉಪ್ಪಲ್ ಹೇಳುತ್ತಾರೆ. ಖಾನ್ ಎಸ್ಸಾರ್ ಗ್ರೂಪಿಗೆ ರಾಜೀನಾಮೆಯನ್ನು ಮೇ 24, 2011ರಂದು ಅವರು ಕೆಲ ರೆಕಾರ್ಡ್ ಮಾಡಲಾದ ಸಂಭಾಷಣೆಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಕಂಪೆನಿ ಆರೋಪಿಸಿದ ನಂತರ ನೀಡಿದ್ದರೆ ಐದು ವರ್ಷಗಳ ನಂತರ ಈ ವಿಷಯವೇಕೆ ಪ್ರಸ್ತಾಪಿಸಲಾಗಿದೆಯೆಂಬ ಪ್ರಶ್ನೆಗೆ ಉಪ್ಪಲ್ ಉತ್ತರಿಸಲು ನಿರಾಕರಿಸಿದ್ದಾರೆ.
2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಕೂಡ ಎಸ್ಸಾರ್ ಗ್ರೂಪ್ ಕಾನೂನು ಕ್ರಮ ಎದುರಿಸುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X