ಸಕಲೇಶಪುರ: ಕಾಫಿ ತೋಟ ಧ್ವಂಸ ಪ್ರಕರಣ – ಜೂನ್ 20ಕ್ಕೆ ಪ್ರತಿಭಟನೆ
ಸಕಲೇಶಪುರ : ಕಾಫಿ ತೋಟವನ್ನು ಕಡಿದು ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಆಲೂರು ತಾಲ್ಲೂಕು ಸಾಣೇನಹಳ್ಳಿ ಪ್ರಕರಣಕ್ಕೆ ಸಂಬಂದಿಸಿದಂತೆ ಜೂನ್ 20 ರಂದು ಸಾಂಕೇತಿಕ ಧರಣಿ ಸತ್ಯಾಗ್ರಹವನ್ನು ದ ಸಂ ಸ ಹಮ್ಮಿಕೊಂಡಿದೆ.
ನಾಗೇಗೌಡ ಎಂಬುವವರಿಗೆ ಸೇರಿದ 2 ಎಕರೆ ಕಾಫಿತೋಟವನ್ನು ವಿಶ್ವ ಪರಿಸರ ದಿನಾಚರಣೆ ದಿನದಂದು ಕಿಡಿಗೇಡಿಗಳು ಕಡಿದು ಹಾಕಿ ಗ್ರಾಮದಿಂದ ಬಹಿಷ್ಕಾರ ಹಾಕಿದ್ದು, ಆರೋಪಿಗಳನ್ನು ಜಿಲ್ಲಾಡಳಿತ ಬಂದಿಸಲು ಮುದಾಗದಿರುವುದನ್ನು ವಿರೋದಿಸಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ದ ಸಂ ಸ ರಾಜ್ಯ ಸಂಚಾಲಕ ಎಸ್.ಎನ್ ಮಲ್ಲಪ್ಪ ತಿಳಿಸಿದ್ದಾರೆ.
Next Story





