ಮುಲ್ಕಿ: ತುಳುನಾಡು ಕೃಷಿ ಜಾನಪದೋತ್ಸವ ಕಾರ್ಯಕ್ರಮ
.jpg)
ಮುಲ್ಕಿ, ಜೂ.18: ಕೃಷಿ ಪ್ರಧಾನ ತುಳುನಾಡಿನಲ್ಲಿ ಯುವಜನತೆ ಐಟಿ ಬಿಟಿಯೆಡೆಗೆ ಆಕರ್ಷಿತರಾಗುತ್ತಿದ್ದು, ಕೃಷಿ ನಾಶದ ಅಂಚಿಗೆ ತಲುಪಿದೆ. ಇಂತಹಾ ಜಾನಪದ ಸೊಗಡಿನ ವೈವಿಧ್ಯಮಯ ಕ್ರೀಡೆ, ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯವಕರನ್ನು ಪುರಾತನ ಕೃಷಿ ಬದುಕಿನತ್ತ ಆಕರ್ಷಿಸುತ್ತಿರುವುದು ಅಭಿನಂದನೀಯ ಎಂದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ ಸಾವಂತರು ಹೇಳಿದರು.
ಅವರು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ದೇವರ ಬಾಕಿಮಾರು ಗದ್ದೆಯಲ್ಲಿ ನಡೆದ ಆರನೆ ವರ್ಷದ ತುಳುನಾಡು ಕೃಷಿ ಜಾನಪದೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಾವಂಜೆಯಕೃಷಿಕವಿಠಲ ದೇವಾಡಿಗ ಕೆಸರು ಗದ್ದೆಗೆ ತೀರ್ಥ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಹಳೆಯಂಗಡಿ ವತಿಯಿಂದ ಜಲ ಸಂರಕ್ಷಣೆ ಬಗ್ಗೆ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ವೇದ ಕೃಷಿಕ ಕೆ. ಎಸ್. ನಿತ್ಯಾನಂ, ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜ ಲಜ, ಕಟೀಲು ದೇವಳದ ಅರ್ಚಕಹರಿನಾರಾಯಣ ದಾಸ ಅಸ್ರಣ್ಣ, ಪಾವಂಜೆ ಜ್ಞಾನ ಶಕ್ತಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿಡಾ. ಯಾಜಿ ನಿರಂಜನ ಭಟ್, ಮಂಗಳೂರು ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಗುರುಪುರ ಗೋಳಿದಡಿಗುತ್ತು ಗುರಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆಶ್ರೀಮತಿ ಪ್ರತಿಭಾ ಕುಳಾಯಿ, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಲಯನ್ಸ್ ಕ್ಲಬ್ ನ ಚಂದ್ರಶೇಖರ ನಾನಿಲ್, ಸತ್ಯಜಿತ್ ಸುರತ್ಕಲ್ ಮತ್ತಿತರರಿದ್ದರು.







