ಜೂ. 24ರಂದು ದೇಶಾದ್ಯಂತ ಹೋಮ್ ಸ್ಟೇ ತೆರೆಗೆ

ಮಂಗಳೂರು, ಜೂ.18: ಮಿರ್ಯಾಕಲ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ಮೂಡಿ ಬರುತ್ತಿರುವ ಕನ್ನಡ, ಹಿಂದಿ ಹಾಗೂ ತಮಿಳು ಭಾಷೆಯ ಚಲನಚಿತ್ರ ಹೋಮ್ ಸ್ಟೇ ಜೂನ್ 24ರಂದು ದೇಶಾದ್ಯಂತ ತೆರೆಕಾಣಲಿದೆ ಎಂದು ಚಿತ್ರ ನಿರ್ದೇಶಕ ಸಂತೋಷ್ ಕೊಡಂಕೇರಿ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸಯಾಲಿ ಭಗತ್, ಶೃತಿ, ರವಿ ಕಹಳೆ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರವನ್ನು ಏಕಕಾಲದಲ್ಲಿ 3 ಭಾಷೆಯಲ್ಲಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. ತಮಿಳಿನಲ್ಲಿ ಇದೇ ಚಿತ್ರ ದಿಗಿಲ್ ಎಂಬ ರ್ಶೀಕೆಯಲ್ಲಿ ತೆರೆಗೆ ಬರಲಿದೆ ಎಂದು ಹೇಳಿದರು.
ಜನರಿಗೆ ಕುತೂಹಲ ಹಾಗೂ ಮನೋರಂಜನೆ ನೀಡುವ ನಿಟ್ಟಿನಲ್ಲಿ ಚಿತ್ರೀಕರಿಸಲಾಗಿದ್ದು, ಚಲನಚಿತ್ರವು ನೈಜತೆಯಿಂದ ಕೂಡಿದೆ. ಹೋಮ್‌ಸ್ಟೇ ಒಳಗಡೆ ನಾಯಕಿಯ ಸುತ್ತಮುತ್ತ ನಡೆಯುವ ಘಟನೆಯನ್ನು ಸೆರೆಹಿಡಿಯಲಾಗಿದೆ. ಕನ್ನಡದಲ್ಲಿ 75 ಚಿತ್ರಮಂದಿರ, ಹಿಂದಿಯಲ್ಲಿ 350 ಹಾಗೂ ತಮಿಳಿನಲ್ಲಿ 120 ಚಿತ್ರಮಂದಿರಗಳಲ್ಲಿ ತೆರೆಕಾಣಲು ಎಲ್ಲ ಸಿದ್ದತೆ ಮಾಡಿಕೊಂಡಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮುರುಳಿ ಮಾವಂಜೆ ಉಪಸ್ಥಿತರಿದ್ದರು.





