ತಾಲೂಕು ಆರೋಗ್ಯ ಇಲಾಖೆ ಮತ್ತು ಪಟ್ಟಣ ಪಂಚಾಯತ್ ನಿಂದ ಹೋಟಲ್‌ಗಳಿಗೆ ಭೇಟಿ: ಸ್ವಚ್ಚತೆ ಕುರಿತು ಮಾಹಿತಿ

ಮುಂಡಗೋಡ,ಜೂ.18 : ವಿಶೇಷ ಸ್ವಚ್ಚತಾ ಸಪ್ತಾಹ ಅಂಗವಾಗಿ ಶನಿವಾರ ತಾಲೂಕ ಆರೋಗ್ಯ ಶಿಕ್ಷಣ ಮತ್ತು ಪಟ್ಟಣ ಪಂಚಾಯತದಿಂದ ಜಂಟಿಯಾಗಿ ಮಳೆಗಾಲದಲ್ಲಿ ಹರಡುಬಹುದಾದ ಸಂಕ್ರಾಮಿಕ ರೋಗಗಳನ್ನು ನಿಂತ್ರಿಸಲು ಪಟ್ಟಣ ಪಂಚಾಯತ ವ್ಯಾಪ್ತಿಯ ಹೊಟೆಲ್, ಬೇಕರಿ, ವೈನ್ ಶಾಪ್ ಹಾಗೂ ತಂಪು ಪಾನೀಯ ಅಂಗಡಿಗಳಿಗೆ ಭೇಟಿನೀಡಿ ಅಂಗಡಿಕಾರರಿಗೆ ವ್ಯಾಪಾರ ಮಾಡುವ ಸ್ಥಳವನ್ನು ಸ್ವಚ್ಚವಾಗಿಟ್ಟು ಕೊಳ್ಳುವ ಕುರಿತು ಕುಡಿಯುವ ನೀರಿನ ನಿರ್ವಹಣೆ, ಕಸವಿಲೇವಾರಿ, ಪಾತ್ರೆಪಗಡುಗಳ ಸ್ವಚ್ಚತೆ, ಗ್ರಾಹಕರಿಗೆ ಬೀಸಿನೀರಿನ ಕೊಡುವ ಕುರಿತು ತಿಳಿ ಹೇಳಲಾಯಿತು. ಸ್ವಚ್ಚತೆ ವಿಷಯಕ್ಕೆ ಸಂಭಂದಿಸಿದಂತೆ ಕರಪತ್ರಗಳನ್ನು ಹಂಚಲಾಯಿತು. ಲೈಸನ್ಸ ಇಲ್ಲದ ಅಂಗಡಿಗಳಿಗೆ ಪಟ್ಟಣ ಪಂಚಾಯತ ದಿಂದ ಲೈಸನ್ಸ ಪಡೆಯಲು ಸೂಚಿಸಲಾಯಿತು. ಸುಮಾರು 34 ಅಂಗಡಿಗಳಿಗೆ ಭೇಟಿನೀಡಿ ಸ್ವಚ್ಚತೆ ಕುರಿತು ಮಾಹಿತ ನೀಡಲಾಗಿದೆ.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಜೆ. ಪಡ್ತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, , ನಾಗಯ್ಯ ಹಿರೇಮಠ, ಎ.ಎಲ್.ಕರಿಬಸಪ್ಪ, ಬಿ.ಎ. ಭೈರಪ್ಪನವರ ಹಾಗು ಪಟ್ಟಣ ಪಂಚಾಯತ ಕಿರಿಯ ಆರೋಗ್ಯ ನಿರೀಕ್ಷಕ ಎಸ್.ಬಿ.ಅಕ್ಕಿ





