Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: ಒಂದೇ ಕುಟುಂಬದ ಇಬ್ಬರು...

ಉಡುಪಿ: ಒಂದೇ ಕುಟುಂಬದ ಇಬ್ಬರು ಕಂದಮ್ಮಗಳಿಗೆ ಕಿವಿ ಕೇಳಲ್ಲ ! : ನೆರವಿಗೆ ಮನವಿ

ಚಿಕಿತ್ಸೆಗೆ ಬೇಕು 20ಲಕ್ಷ ರೂ

ವಾರ್ತಾಭಾರತಿವಾರ್ತಾಭಾರತಿ18 Jun 2016 8:31 PM IST
share
ಉಡುಪಿ: ಒಂದೇ ಕುಟುಂಬದ ಇಬ್ಬರು ಕಂದಮ್ಮಗಳಿಗೆ ಕಿವಿ ಕೇಳಲ್ಲ ! : ನೆರವಿಗೆ ಮನವಿ

ಉಡುಪಿ, ಜೂ.18: ಎಲ್ಲರೊಂದಿಗೆ ಬೆರೆತು ಆಡಿ ನಲಿದಾಡಬೇಕಾದ ಎರಡು ಪುಟ್ಟ ಕಂದಮ್ಮಗಳು ಹುಟ್ಟು ಕಿವುಡರಾಗಿ ಮಾತು ಕಳೆದುಕೊಂಡಿ ದ್ದಾರೆ. ಒಂದೇ ಕುಟುಂಬದ ಈ ಇಬ್ಬರು ಹೆಣ್ಣು ಮಕ್ಕಳು ಕಿವಿ ಕೇಳುವಂತಾಗಿ ಎಲ್ಲರಂತೆ ಮಾತು ಕಲಿತುಕೊಳ್ಳಬೇಕಾದರೆ ಇವರ ಚಿಕಿತ್ಸೆಗಾಗಿ 20ಲಕ್ಷ ರೂ. ಹಣ ಬೇಕಾಗಿದೆ. ಅದಕ್ಕಾಗಿ ಪೋಷಕರು ದಾನಿಗಳ ಮುಂದೆ ಕೈಚಾಚಿದ್ದಾರೆ.

ಉದ್ಯಾವರದ ಮಿರ್ಜಾ ಖಲೀಲ್ ಬೇಗ್ ಹಾಗೂ ಮಿರ್ಜಾ ತಬಸ್ಸುಮ್ ವಿವಾಹವಾಗಿ 18 ವರ್ಷಗಳಾಗಿವೆ. ಇವರಿಗೆ ಮೂರು ಮಕ್ಕಳು. ಅವರಲ್ಲಿ ಇಬ್ಬರು ಹೆಣ್ಣು, ಒಬ್ಬ ಗಂಡು. ಮೊದಲ ಮಗಳು ಮಿರ್ಜಾ ಫಾತಿಮಾ ಮೆಹೆಕ್(13) ಹಾಗೂ ಕೊನೆಯ ಮಗಳು ಮಿರ್ಜಾ ಮೈಝಾ ಫಾತಿಮಾ (3) ಹುಟ್ಟು ಕಿವುಡರು. ಇದರಿಂದಾಗಿ ಇವರಿಬ್ಬರು ಕಿವಿ ಕೇಳದೆ ತಮ್ಮ ಮಾತನ್ನು ಕಳೆದುಕೊಂಡು ಮೂಗರಾಗಿದ್ದಾರೆ.

 ಮಿರ್ಜಾ ಫಾತಿಮಾ ಮೆಹೆಕ್ ಒಂದೂವರೆ ವರ್ಷದ ಮಗು ಇರುವಾ ಗಲೇ ಆಕೆಗೆ ಕಿವಿ ಕೇಳದಿರುವ ವಿಚಾರ ತಂದೆತಾಯಿಗೆ ತಿಳಿಯಿತು. ಅದಕ್ಕಾಗಿ ಆ ಮಗುವನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಯಿತು. ಆಕೆಗೆ ಕಿವಿ ಕೇಳುವಂತಾಗಬೇಕಾದರೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದರು. ಅದಕ್ಕಾಗಿ 15ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ವೈದ್ಯರು ಹೇಳಿದ್ದರು. ವಿದೇಶದಲ್ಲಿ ಸೇಲ್ಸ್‌ಮೆನ್ ಆಗಿ ದುಡಿಯುತ್ತಿದ್ದ ಮಿರ್ಜಾ ಖಲೀಲ್ ಬೇಗ್‌ಗೆ ಅಷ್ಟೊಂದು ಹಣ ಹೊಂದಿಸಲಾಗದೆ ಮಗಳಿಗೆ ಚಿಕಿತ್ಸೆ ಕೊಡಿಸುವುದನ್ನೇ ಕೈ ಬಿಟ್ಟರು.

ಚುರುಕು ಬುದ್ದಿಯ ಮೆಹೆಕ್ ಎಲ್ಲವನ್ನೂ ಗ್ರಹಿಸಿ ತುಂಬಾ ಚಟುವಟಿಕೆ ಯಿಂದ ಬೆಳೆದಳು. ಈಗ ಈಕೆ ಉದ್ಯಾವರದ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಏಳನೆ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಪ್ರತಿಭಾವಂತೆಯಾಗಿರುವ ಮೆಹೆಕ್ ಶಿಕ್ಷಕರ ಪಾಠ ಮಾಡುವ ತುಟಿಯ ಚಲನವಲನಗಳನ್ನು ಗ್ರಹಿಸಿ ಪಠ್ಯವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಕಳೆದ ಆರನೆ ತರಗತಿಯಲ್ಲಿ ಉತ್ತಮ ಅಂಕವನ್ನು ಕೂಡ ಪಡೆದಿದ್ದಾಳೆ. ಕ್ರೀಡೆಯಲ್ಲೂ ಈಕೆ ತುಂಬಾ ಮುಂಚೂಣಿ ಯಲ್ಲಿದ್ದಾಳೆ ಎನ್ನುತ್ತಾರೆ ಶಾಲೆಯ ಆಡಳಿತಾಧಿಕಾರಿ ಖಲೀಲ್ ಅಹ್ಮದ್.

ನಂತರ ಹುಟ್ಟಿದ ಮೂರನೆ ಮಗು ಕೂಡ ಅಕ್ಕನಂತೆ ಹುಟ್ಟು ಕಿವುಡಿ ಎಂಬ ವಿಚಾರ ತಿಳಿದು ತಂದೆತಾಯಿಗೆ ಗರ ಸಿಡಿಲು ಬಡಿದಂತಾಯಿತು. ಈ ಮಗು ವನ್ನೂ ಕೂಡ ಮಣಿಪಾಲ ಆಸ್ಪತ್ರೆಯಲ್ಲಿ ಮೂರು ತಿಂಗಳಿಗೊಮ್ಮೆ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಈ ಮಗುವಿಗೆ ಕಿವಿ ಕೇಳದಿದ್ದರೂ ಮಾತನಾಡಲು ಪ್ರಯತ್ನಿಸುತ್ತಿರುವ ದೃಶ್ಯ ಎಲ್ಲರ ಮನ ಕಲಕಿಸುವಂತಿದೆ. ಇದೀಗ ಮಣಿಪಾಲ ಆಸ್ಪತ್ರೆಯವರ ಸೂಚನೆಯಂತೆ ಈ ಇಬ್ಬರು ಮಕ್ಕಳನ್ನು ಬೆಂಗಳೂರಿನ ಭಗ ವಾನ್ ಮಹಾವೀರ್ ಜೈನ್ ಆಸ್ಪತ್ರೆಯ ತಜ್ಞ ವೈದ್ಯೆ ಡಾ.ವಸಂತಿ ಆನಂದ್ ಅವರಲ್ಲಿಗೆ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಲಾಯಿತು.

ಈ ಇಬ್ಬರು ಮಕ್ಕಳನ್ನು ತಪಸಾಣೆಗೆ ಒಳಪಡಿಸಿದ ವೈದ್ಯರು ಮೂರು ವರ್ಷದ ಮಗು ಮೈಝಾ ಫಾತಿಮಾಳಿಗೆ ಎರಡೂ ತಿಂಗಳೊಳಗೆ ಶಸ್ತ್ರಚಿಕಿತ್ಸೆ ಮಾಡಿದರೆ ಶೇ.100ರಷ್ಟು ಕಿವಿ ಕೇಳುವಂತೆ ಮಾಡಬಹುದು ಎಂದು ತಿಳಿಸಿ ದರು. ಅದೇ ರೀತಿ ಫಾತಿಮಾ ಮೆಹೆಕ್‌ಗೂ ಕೂಡ ಶಸ್ತ್ರ ಚಿಕಿತ್ಸೆಯ ಮೂಲಕ ಕಿವಿ ಕೇಳಿಸಬಹುದು. ಇದಕ್ಕೆ ತಲಾ 10ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಡಾ.ವಸಂತಿ ಆನಂದ್ ತಿಳಿಸಿದ್ದಾರೆ.

 ಬಡವರಾಗಿರುವ ಮಿರ್ಜಾ ಖಲೀಲ್ ಬೇಗ್ ಮಕ್ಕಳ ಚಿಕಿತ್ಸೆಗಾಗಿ ವಿದೇಶ ದಿಂದ ಊರಿಗೆ ಬಂದು ನೆಲೆಸಿದ್ದಾರೆ. ಕೆಲಸ ಹಾಗೂ ಕೈಯಲ್ಲಿ ಹಣ ಇಲ್ಲದ ಮಿರ್ಜಾ ಮಕ್ಕಳ ಚಿಕಿತ್ಸೆಗಾಗಿ ದಾನಿಗಳ ಮೊರೆ ಹೋಗಿ, ಹಣ ಸಂಗ್ರಹದಲ್ಲಿ ತೊಡಗಿದ್ದಾರೆ. ಱನನ್ನ ತಂಗಿಯರ ಮದುವೆ ಮಾಡಿಸಿದ ನಾನು ಈಗ ನನ್ನ ಮಕ್ಕಳ ಚಿಕಿತ್ಸೆಗಾಗಿ ಬೇಡುವ ಸ್ಥಿತಿ ಬಂದಿದೆೞಎಂದು ಮಿರ್ಜಾ ಖಲೀಲ್ ಕಣ್ಣೀರಿಟ್ಟರು. ಈ ಇಬ್ಬರು ಕಂದಮ್ಮಗಳ ಶಸ್ತ್ರಚಿಕಿತ್ಸೆಗೆ ಬೇಕಾದ ನೆರವನ್ನು ದಾನಿಗಳು ಒದಗಿಸುತ್ತಾರೆಂಬ ನಿರೀಕ್ಷೆಯಲ್ಲಿ ತಂದೆತಾಯಿ ಇದ್ದಾರೆ.

ಮನೆ ವಿಳಾಸ

ಮನೆ ನಂಬರ್ 5-196, ನಡುಕೇರಿ ಹೌಸ್, ಉದ್ಯಾವರ ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆ, ಕರ್ನಾಟಕ- 574118. ಮೊ- 8197564090, 8495824287. ಮಿರ್ಜಾ ಫಾತಿಮಾ ಮೆಹೆಕ್, ಸಿಂಡಿಕೇಟ್ ಬ್ಯಾಂಕ್ ಉದ್ಯಾವರ ಶಾಖೆ, ಎಸ್‌ಬಿ ಖಾತೆ ಸಂಖ್ಯೆ- 01602210012458, ಐಎಫ್‌ಎಸ್‌ಸಿ ಕೋಡ್- ಎಸ್‌ವೈಎನ್‌ಬಿ 0000160.

                                                           

share
ವಾರ್ತಾಭಾರತಿ
ವಾರ್ತಾಭಾರತಿ
Next Story
X