ಮೂಡುಬಿದಿರೆ: ಮಳೆಗಾಗಿ ಕೋಟೆಬಾಗಿಲು ವೀರಮಾರುತಿಗೆ ಸೀಯಾಳಾಭಿಷೇಕ

ಮೂಡುಬಿದಿರೆ,ಜೂ.18: ಮುಂಗಾರು ಮಳೆಯ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಶನಿವಾರ ಬೆಳಿಗ್ಗೆ ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿ ಬಳಿಕ ನಡೆದ ಸೀಯಾಳಾಭಿಷೇಕದಲ್ಲಿ ಪಾಲ್ಗೊಂಡರು.
ಪೂರ್ವಾಹ್ನ 9 ಗಂಟೆಗೆ ಸಾರ್ವಜನಿಕರು ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು. ನಂತರ ದೇವಸ್ಥಾನದ ಪ್ರಧಾನ ಅರ್ಚಕ ದತ್ತಾತ್ರೇಯ ಭಟ್ ಹನುಂತನಿಗೆ ಸೀಯಾಳಾಭಿಷೇಕ ನಡೆಸಿದರು. ಭಕ್ತರಿಂದ ಸುಮಾರು 500 ಸೀಯಾಳಗಳು ದೇವಸ್ಥಾನಕ್ಕೆ ಸಮರ್ಪಣೆಯಾದವು.
ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭೆ ಸದಸ್ಯರಾದ ರಾಜೇಶ್ ಕೋಟೆಗಾರ್, ರತ್ನಾಕರ ದೇವಾಡಿಗ, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ, ಮಹಿಳಾ ಸಂಘದ ಉಪಾಧ್ಯಕ್ಷೆ ಉಷಾ.ಕೆ. ಹೆಗ್ಡೆ, ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ, ಮುಂಬಯಿ ಹೆಗ್ಗಡೆ ಸಂಘದ ಅಧ್ಯಕ್ಷ ವಿಜಯ್.ಬಿ ಹೆಗ್ಡೆ, ಬೆಂಗಳೂರು ಹೆಗ್ಗಡೆ ಸಂಘದ ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story





