ನಗರದ ಜ್ಯೋತಿ ಟಾಕೀಸ್ ಎದುರು ಕೃತಕ ನೆರೆ ...

ಮಂಗಳೂರು,ಜೂ.18:ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಜ್ಯೋತಿ ಟಾಕೀಸ್ ಬಳಿಯ ಅಂಬೇಡ್ಕರ್ ವೃತ್ತ ,ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ಶನಿವಾರ ಸುರಿದ ಮಳೆ ಪರಿಸರದಲ್ಲಿ ಕೃತಕ ನೆರೆಯ ವಾತವರಣವನ್ನು ಸೃಷ್ಟಿಸಿತ್ತು.ಸಂಜೆಯ ವೇಳೆ ಪಾದಾಚಾರಿಗಳು ನಡೆದಾಡಲು ಕಷ್ಟ ಪಡುತ್ತಿದ್ದ ದೃಶ್ಯ ಕಂಡು ಬಂತು.ಈ ಬಾರಿಯ ಮಳೆಗಾಲದಲ್ಲಿ ನಿರಂತರವಾಗಿ ಅರ್ಧಗಂಟೆ ಮಳೆ ಸುರಿದರೆ ಈ ಪ್ರದೇಶದಲ್ಲಿ ಈ ರೀತಿಯ ವಾತವರಣ ನಿರಂತರವಾಗಿ ಸೃಷ್ಟಿಯಾಗುತ್ತಿದೆ.ಬಾವುಟಗುಡ್ಡೆ,ಜ್ಯೊತಿ ಟಾಕೀಸ್ ಬಳಿಯಲ್ಲಿ ಸಂಗ್ರಹವಾಗುವ ನೀರು ನೇರವಾಗಿ ಮಳೆ ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗಲು ಅಡಚಣೆಯಾಗಿರುವುದರಿಂದ ಇಲ್ಲಿ ಪದೇ ಪದೇ ಈ ರೀತಿಯ ಕೃತಕ ನೆರೆ ಸೃಷ್ಟಿಯಾಗುತ್ತಿದೆ.
Next Story





