ಮುಖ್ಯಮಂತ್ರಿ ನಡೆಯನ್ನು ಸ್ವಾಗತಿಸುತ್ತೇನೆ : ಅಭಯಚಂದ್ರ ಜೈನ್

ಮೂಡುಬಿದಿರೆ,ಜೂ.18: ಜನರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯ ರಾಜ್ಯದ ಸಚಿವನಾಗಿ ನೀಡಿರುವ ಹುದ್ದೆಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನಗೆ ವಹಿಸಿದ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಸಚಿವ ಸಂಪುಟದಿಂದ ಕೈಬಿಡಲಿರುವ ಮುಖ್ಯಮಂತ್ರಿಯವರ ನಡೆಯನ್ನು ಸ್ವಾಗತಿಸುತ್ತೇನೆ.
ಮುಖ್ಯಮಂತ್ರಿಯವರನ್ನು ಸದಾ ಬೆಂಬಲಿಸುತ್ತೇನೆ ಎಂದು ಸಿದ್ದರಾಮಯ್ಯ ಸಂಪುಟದಲ್ಲಿ ಮೀನುಗಾರಿಕ, ಯುವಜನಸೇವೆ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಪತ್ರಿಕೆಗೆ ತಿಳಿಸಿದ್ದಾರೆ. ನರು ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಿದ್ದೇನೆ. ನಮ್ಮ ಸರ್ಕಾರದಲ್ಲಿರುವ ಇತರ ಶಾಸಕರಿಗೂ ಸಚಿವರಾಗುವ ಅವಕಾಶ ಸಿಗುತ್ತಿದೆ.
ಸಚಿವನಾಗುವ ಅವಕಾಶ ಇನ್ನು ಮುಂದೆಯೂ ಇದೆ. ಯಾವುದೇ ಹುದ್ದೆಯನ್ನು ನೀಡಿದರೂ ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಮುಂದುವರಿಸುತ್ತೇನೆ ಎಂದು ತಿಳಿಸಿದ ಅವರು ಸಚಿವ ಸ್ಥಾನದಿಂದ ಕೈಬಿಟ್ಟಿರುವ ಬಗ್ಗೆ ತನಗೆ ಮಾಧ್ಯಮಗಳಿಂದ ಮಾತ್ರ ತಿಳಿದು ಬಂದಿದೆ ಹೊರತು ಮುಖ್ಯ ಮಂತ್ರಿಯವರಿಂದ ಅಧಿಕೃತ ಮಾಹಿತಿ ಬಂದಿಲ್ಲವೆಂದು ಅವರು ತಿಳಿಸಿದರು.





