ಅಮೆರಿಕ: ಸಿರಿಯದ ಸೇನೆಯ ಮೇಲೆ ದಾಳಿ ನಡೆಸುವ ಇಂಗಿತವಿಲ್ಲ

ವಾಶಿಂಗ್ಟನ್, ಜೂ. 18: ಅಮೆರಿಕದ ಸಿರಿಯ ನೀತಿಯನ್ನು ಟೀಕಿಸುವ ಆಂತರಿಕ ದಾಖಲೆಯೊಂದು ಸೋರಿಕೆಯಾಗಿದ್ದರಿಂದ ಉಂಟಾದ ಪರಿಣಾಮವನ್ನು ನಿಯಂತ್ರಿಸುವ ಪ್ರಯತ್ನವನ್ನು ಅಮೆರಿಕದ ಆಡಳಿತ ಶುಕ್ರವಾರ ಮಾಡಿದೆ. ಆದರೆ, ಹತ್ತಾರು ಅಮೆರಿಕ ರಾಜತಾಂತ್ರಿಕರು ಸಹಿ ಹಾಕಿರುವ ಪತ್ರವೊಂದು ಕರೆ ನೀಡಿರುವಂತೆ, ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್‌ರ ಪಡೆಗಳ ವಿರುದ್ಧ ಸೇನಾ ದಾಳಿ ನಡೆಸುವ ಯಾವುದೇ ಇಂಗಿತವನ್ನು ಅದು ವ್ಯಕ್ತಪಡಿಸಿಲ್ಲ.
ರಾಜತಾಂತ್ರಿಕರ ಭಿನ್ನ ನಿಲುವನ್ನು ಆಲಿಸಲು ಶ್ವೇತಭವನ ಸಿದ್ಧವಿದೆಯಾದರೂ, ಅಧ್ಯಕ್ಷ ಬರಾಕ್ ಒಬಾಮರ ಕೊನೆಯ ಏಳು ತಿಂಗಳ ಆಳ್ವಿಕೆಯ ಅವಧಿಯಲ್ಲಿ ಅವರ ಸಿರಿಯ ನೀತಿಯಲ್ಲಿ ಯಾವುದೇ ಮಹತ್ವದ ಬದಲಾವಣೆ ಇರಲಾರದು ಎಂದು ಅಮೆರಿಕದ ಹಲವಾರು ಅಧಿಕಾರಿಗಳು ಹೇಳಿದ್ದಾರೆ.
Next Story





