ಪುತ್ತೂರು: ಕುಸಿದು ಬಿದ್ದು ಸಾವು
ಪುತ್ತೂರು: ಕೃಷಿಕರೊಬ್ಬರು ತೋಟಕ್ಕೆ ಮದ್ದು ಬಿಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಮೇರ್ಲ ಎಂಬಲ್ಲಿ ಶುಕ್ರವಾರ ನಡೆದಿದೆ. ಮೇರ್ಲ ನಿವಾಸಿ ಕರುಣಾಕರ (45) ಮೃತಪಟ್ಟ ವ್ಯಕ್ತಿ. ಕರುಣಾಕರ ಅವರು ಸಮೀಪದ ತೋಟವೊಂದರಲ್ಲಿ ಅಡಕೆಗೆ ಮದ್ದು ಬಿಡುತ್ತಿದ್ದರು. ಸಂಜೆ ವೇಳೆಗೆ ತೋಟದಲ್ಲಿಯೇ ಕುಸಿದು ಬಿದ್ದಿದ್ದು ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಗೆ ಕೊಂಡೊಯ್ಯುವ ಹಾದಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





