ಟಿ.ವಿ. ಚಾನೆಲ್ ಗಳಲ್ಲಿ "ರಮದಾನ್ ಸೀರೀಸ್" ಪ್ರವಚನ

ಮಂಗಳೂರು,ಜೂ.18 : ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ (ರಿ) ವತಿಯಿಂದ ಪ್ರತೀದಿನ ಟಿ.ವಿ. ಚಾನೆಲ್ ಗಳಲ್ಲಿ "ರಮದಾನ್ ಸೀರೀಸ್" ರಮದಾನ್ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮ ಪ್ರತೀದಿನ ರಾತ್ರಿ 10 ಗಂಟೆಗೆ ಹಾಗೂ ಪ್ರತೀದಿನ ಮರುಪ್ರಸಾರ ಬೆಳಿಗ್ಗೆ 9 ಗಂಟೆಗೆ ಅಬ್ಬಕ್ಕ ಟಿ.ವಿ ಚಾನೆಲ್ ನಲ್ಲಿ , ಪ್ರತೀದಿನ ಸಂಜೆ 5.30ಕ್ಕೆ ಹಾಗೂ ಪ್ರತೀದಿನ ಮಧ್ಯಾಹ್ನ 1 ಗಂಟೆಗೆ V4 ನ್ಯೂಸ್ ಚಾನೆಲ್ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಶೇಕ್ ಅಬ್ದುರ್ರಹೀಮ್ ಸಗ್ರಿ, ಜನಾಬ್ ಎಂ.ಜಿ ಮುಹಮ್ಮದ್, ಮೌಲವಿ ಮುಸ್ತಫಾ ದಾರಿಮಿ, ಮೌಲವಿ ಶರೀಫ್ ಕುಂಜತ್ ಬೈಲ್, ಬ್ರದರ್ ಇಬ್ರಾಹಿಮ್ ಸವ್ಶಾದ್, ಜನಾಬ್ ಅಬೂ ಬಿಲಾಲ್ ಎಸ್.ಎಂ, ಜನಾಬ್ ಹನೀಫ್ ಬಾಳಂತೂರ್, ಜನಾಬ್ ಇಸ್ಮಾಯಿಲ್ ಶಾಫಿ, ಮೌಲವಿ ಚುಯೈಲಿ ಅಬ್ದುಲ್ಲಾ ಮುಸ್ಲಿಯಾರ್, ಎಸ್.ಕೆ.ಎಸ್.ಎಂ ಅಧೀನದ ಸಲಫಿ ಎಜುಕೇಶನ್ ಬೋರ್ಡ್ ಅಧೀನದ ಮದ್ರಸ ವಿದ್ಯಾರ್ಥಿಯಾರು ಹಾಗೂ ವಿವಿಧ ವಿದ್ವಾಂಸರು, ಬ್ಯಾರಿ, ಕನ್ನಡ, ಉರ್ದು, ಮಲಯಾಳಂ, ಇಂಗ್ಲೀಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಎಸ್.ಕೆ.ಎಸ್.ಎಂ ಮೀಡಿಯಾ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.





