ಕೋಲ್ಡ್ ಸ್ಟೋರೇಜಿನ ಅದಿಪತಿ

ಕೇವಲ ಅಲಂಕಾರಕ್ಕಾಗಿ ಇದ್ದಂತಹ ಸಚಿವರಿಗೆ ಕೊನೆಗೂ ನಿವೃತ್ತಿ ನೀಡಲಾಗಿದೆ. ಕಂದಾಯ ಸಚಿವರ ಸಂಸದೀಯ ವ್ಯವಹಾರಗಳ ಆಪ್ತ ಕರ್ಯಾದರ್ಶಿಯಾಗಿ ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಓಡಾಡಿ ಜನಸಮಾನ್ಯರಿಂದ ಹೆಚ್ಚೂ ಕಮ್ಮಿ ಪ್ರತಿನಿತ್ಯವೂ ದೂರು ಸ್ವೀಕರಿಸಿ ಪರಿಹಾರ ಒದಗಿಸುತ್ತಿದ್ದ ಪ್ರಮೋದ್ ಮಧ್ವರಾಜ್‌ಗೆ ಸಚಿವ ಸ್ಥಾನ ನೀಡಿರುವುದು ಸ್ವಾಗತಾರ್ಹ.
"ಕಂದಾಯ ಇಲಾಖೆ ಒಂದು ಕೋಲ್ಡ್ ಸ್ಟೋರೇಜ್": ಎಂದು ಪ್ರಮೋದ್ ಹೇಳುತ್ತಿರುತ್ತಾರೆ. ಕಂದಾಯ ಇಲಾಖಾಧಿಕಾರಿಗಳನ್ನು ಮತ್ತು ಭೂ ಮಾಪನ ಇಲಾಖೆಯನ್ನು ಚುರುಕುಗೊಳಿಸುವುದು ಹೇಗೆ ಎನ್ನುವ ಸಾಕಷ್ಟು ಅನುಭವ ಹೊಂದಿರುವ ಪ್ರಮೋದ್‌ಗೆ ಈ "ಕೋಲ್ಡ್ ಸ್ಟೋರೇಜ್" ನಿರ್ವಹಣೆಯ ಹೊಣೆಯನ್ನು ಸರಕಾರ ನೀಡಿದರೆ ಜನರಿಗೆ ನೆಮ್ಮದಿ ದೊರಕಬಹುದಲ್ಲವೇ ? ಅಂತ್ಯ ಸಂಸ್ಕಾರ ಯೋಜನೆ ಫಲಾನುಭವಿಗಳಿಗೆ ಜುಜುಬಿ ಮೊತ್ತ ಪಾವತಿಸಲು ವರ್ಷಗಟ್ಟಲೆ ಸತಾಯಿಸುವ ಕಂದಾಯ ಪ್ಲಂಟಿಂಗ್ ಅರ್ಜಿ ಸಲ್ಲಿಸಿ ಮೂರು ನಾಲ್ಕು ವರ್ಷಗಳಾದರೂ ನಕ್ಷೇ ನೀಡದ ಭೃಷ್ಟಾತಿಭೃಷ್ಟ ಸರ್ವೆ ಇಲಾಖೆಗಳಿಗೆ ಕಾಯಕಲ್ಪ ಕಲ್ಲಿಸಬೇಕಾಗಿದೆ.

ರಾಜೇಂದ್ರ ಪೈ ಮೂಡುಬಿದಿರೆ





