ರಿಕ್ಷಾ ಪಲ್ಟಿ: ಓರ್ವ ಮೃತ್ಯು
ಬೈಂದೂರು, ಜೂ.18: ಯಡ್ತರೆ ಗ್ರಾಮದ ಆಲಂದೂರಿನ ಕನ್ನದ ಬಾಗಿಲು ಎಂಬಲ್ಲಿ ಜೂ.17ರಂದು ರಾತ್ರಿ 8ಗಂಟೆಗೆ ರಿಕ್ಷಾ ಮೋರಿಯ ಕಟ್ಟೆಗೆ ಢಿಕ್ಕಿ ಹೊಡೆದು ತೋಡಿಗೆ ಬಿದ್ದ ಪರಿಣಾಮವಾಗಿ ಒಬ್ಬ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.ಮೃತರನ್ನು ಯಡ್ತರೆಯ ರಾಮ ಮರಾಠಿ ಎಂದು ಗುರುತಿಸಲಾಗಿದೆ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಸಂಕ್ರಪ್ಪ, ಚೇತನ್, ನಾಗರತ್ನಾ, ಸೀತು ಮರಾಠಿ, ವಿಜಯ ಹಾಗೂ ರಿಕ್ಷಾ ಚಾಲಕ ರಾಜು ಗಾಯಗೊಂಡಿದ್ದಾರೆ. ಶಿರೂರಿನಿಂದ ತೂದಳ್ಳಿಗೆ ಹೋಗುವ ರಸ್ತೆಯಲ್ಲಿ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿರಸ್ತೆ ಬದಿಯ ಮೋರಿ ಕಟ್ಟೆಗೆ ಢಿಕ್ಕಿ ಹೊಡೆದು, ಪಲ್ಟಿಯಾಗಿ ನೀರಿನ ತೋಡಿಗೆ ಬಿದ್ದಿದೆ ಎನ್ನಲಾಗಿದೆೆ. ಇದರ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ರಾಮ ಮರಾಠಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





