ಶಿರ್ವ, ಜೂ.18: ಹೇರೂರು ಗ್ರಾಮದ ಕಲ್ಲುಗುಡ್ಡೆ ಶ್ರೀ ಕೊರಗಜ್ಜ ಕ್ಷೇತ್ರದ ಗುಡಿಯ ಹೊರಗೆ ಕಂಪೌಂಡಿನಲ್ಲಿದ್ದ ದೇವರ ಕಾಣಿಕೆ ಹುಂಡಿಯ ಬೀಗವನ್ನು ಶುಕ್ರವಾರ ರಾತ್ರಿ ಮುರಿದ ಕಳ್ಳರು ಅದರಲ್ಲಿದ್ದ ಅಂದಾಜು ಸುಮಾರು 6,500ರೂ. ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.