ಝಿಂಬಾಬ್ವೆ: ಅತ್ಯಾಚಾರ ಆರೋಪದಲ್ಲಿ ಟೀಂ ಇಂಡಿಯಾ ತಂಗಿದ್ದ ಹೊಟೇಲ್‌ನಿಂದ ಭಾರತೀಯನ ಬಂಧನ

ಹರಾರೆ, ಜೂ.19: ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಭಾರತೀಯ ಕ್ರಿಕೆಟ್ ಆಟಗಾರನೊಬ್ಬನನ್ನು ಬಂಧಿಸಲಾಗಿದೆಯೆಂಬ ವರದಿಗಳು ಕಾಣಿಸಿಕೊಂಡ ಕೆಲವೇ ತಾಸುಗಳಲ್ಲಿ, ಈ ವರದಿ ಸುಳ್ಳು. ಪ್ರಕರಣದಲ್ಲಿ ಯಾವ ಕ್ರಿಕೆಟ್ ಆಟಗಾರನೂ ಒಳಗೊಂಡಿಲ್ಲವೆಂದು ಎಎನ್‌ಐ ಸುದ್ದಿಸಂಸ್ಥೆಗೆ ಮೂಲಗಳು ತಿಳಿಸಿವೆ.
ಈ ವರದಿ ಸುಳ್ಳು. ಪ್ರಕರಣದಲ್ಲಿ ಯಾವನೇ ಕ್ರಿಕೆಟಿಗನೂ ಒಳಗೊಂಡಿಲ್ಲ. ಒಬ್ಬ ಪ್ರಾಯೋಜಕರಿಗೆ ಸಂಬಂಧಿಸಿದ ಭಾರತೀಯನೊಬ್ಬನನ್ನು ಬಂಧಿಸಲಾಗಿದೆ.ಆದರೆ, ಆತ ಆರೋಪವನ್ನು ತಳ್ಳಿ ಹಾಕಿದ್ದು, ತನ್ನ ನಿರಪರಾಧಿತ್ವ ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆಗೆ ಸಿದ್ಧನೆಂದು ತಿಳಿಸಿದ್ದಾನೆ. ಝಿಂಬಾಬ್ವೆಯ ಭಾರತೀಯ ರಾಯಭಾರಿ ಈ ವಿಷಯವನ್ನು ನಿಕಟವಾಗಿ ಗಮನಿಸುತ್ತಿದ್ದಾರೆಂದು ಅವು ಹೇಳಿವೆ.
ಭಾರತೀಯ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆಯೆಂದು ಪೊಲೀಸ್ ವಕ್ತಾರ, ಪೊಲೀಸ್ ಉಪಾಯುಕ್ತ ಚಾರಿಟಿ ಚರಂಬ ಖಚಿತಪಡಿಸಿದ್ದಾರೆಂದು ಸುದ್ದಿ ಪೋರ್ಟಲ್ ‘ನ್ಯೂ ಜಿಂಬಾಬ್ವೆ’ ವರದಿ ಮಾಡಿದೆ.
ತಾವು ತನಿಖೆ ನಡೆಸಿ ಪ್ರಕರಣವನ್ನು ನಿರ್ಧಾರಕ್ಕಾಗಿ ನ್ಯಾಯಾಲಯಕ್ಕೆ ಕಳುಹಿಸಿದ್ದೇವೆ.ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಆರೋಪಿ ಇಂದು ನ್ಯಾಯಾಲಯಕ್ಕೆ ಬಂದಿದ್ದನೆಂದು ಅಧಿಕಾರಿಯನ್ನುಲ್ಲೇಖಿಸಿ ಅದು ತಿಳಿಸಿದೆ. ವರದಿಯನ್ನು ತಕ್ಷಣವೇ ಖಚಿತಪಡಿಸಲು ಸಾಧ್ಯವಾಗಿಲ್ಲ.
ಆರೋಪಿ ಭಾರತೀಯನ ಗುರುತನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ. ‘ದಿ ಮೈಕಲ್ಸ್ ಹೊಟೇಲ್‌ನಲ್ಲಿ ಶೋಧ ಕಾರ್ಯ ನಡೆಯುತ್ತಿದೆಯೆಂದು ವರದಿ ಹೇಳಿದೆ.







