ಐಇಡಿ ಸ್ಫೋಟ:ಸಿಆರ್‌ಪಿಎಫ್ ಕಮಾಂಡೋ ಸಾವು,ಇಬ್ಬರಿಗೆ ಗಾಯ

ಔರಂಗಾಬಾದ್(ಬಿಹಾರ),ಜೂ.19: ಔರಂಗಾಬಾದ್ ಜಿಲ್ಲೆಯ ಬಂಧು ಬಿಗಹ ಗ್ರಾಮದ ಬಳಿ ಅರಣ್ಯಪ್ರದೇಶದಲ್ಲಿ ರವಿವಾರ ಮಧ್ಯಾಹ್ನ ಮಾವೋವಾದಿಗಳು ನಡೆಸಿದ ಸುಧಾರಿತ ಸ್ಫೋಟಕ ಸಾಧನ(ಐಇಡಿ)ದ ಸ್ಫೋಟದಲ್ಲಿ ಓರ್ವ ಸಿಆರ್‌ಪಿಎಫ್ ಕಮಾಂಡೋ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗಯಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಮಾಂಡೋಗಳು ಎರಡು ಬೈಕ್‌ಗಳಲ್ಲಿ ಬಾಲಿ ಪ್ರಹರಿಯಿಂದ ತಮ್ಮ ಶಿಬಿರಕ್ಕೆ ವಾಪಸಾಗುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಬಾಲಿ ಪ್ರಹರಿಯಲ್ಲಿ ಶನಿವಾರ ರಾತ್ರಿಯಿಂದ ಸಿಆರ್‌ಪಿಎಫ್ ಯೋಧರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಕಾಳಗ ನಡೆದಿತ್ತು ಎಂದು ಡಿಎಸ್‌ಪಿ ಪಿ.ಎನ್. ಸಾಹು ತಿಳಿಸಿದರು.
ಎ.ಡೇಕಾ ಮೃತ ಕಮಾಂಡೋ ಆಗಿದ್ದು, ಗಾಯಾಳುಗಳನ್ನು ಎ.ಕೆ.ಯಾದವ ಮತ್ತು ಕೆ.ಕಾಕೋಟಿ ಎಂದು ಹೆಸರಿಸಲಾಗಿದೆ.
Next Story





