ಜೂನ್‌ನಿಂದ ಸೆಪ್ಟಂಬರ್‌ರವರೆಗೆ ಆದಾಯ ಘೋಷಣೆ ಯೋಜನೆ
ಶಿವಮೊಗ್ಗ, ಜೂ.19: ಆದಾಯ ತೆರಿಗೆ ಇಲಾಖೆಯು 2016ನೆ ಜೂನ್ 1ರಿಂದ ಸೆಪ್ಟಂಬರ್ ಮಾಹೆಯವರೆಗೆ ಆದಾಯ ಘೋಷಣೆ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಈ ಅವಧಿಯಲ್ಲಿ ಆದಾಯ ಘೋಷಣೆ ಮಾಡಿದವರಿಗೆ ಕೆಲವು ವಿನಾಯಿತಿಯನ್ನು ಘೋಷಿಸಿದೆ ಎಂದು ಇಲಾಖೆಯ ಪ್ರಧಾನ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಈ ಯೋಜನೆಯು 2015-16 ಅಥವಾ ಅದಕ್ಕಿಂತ ಹಿಂದಿನ ಆರ್ಥಿಕ ವರ್ಷಗಳಲ್ಲಿ ಬಹಿರಂಗಪಡಿಸದ ಆಸ್ತಿ/ಇತರೆ ಸ್ವರೂಪದ ಆದಾಯಕ್ಕೆ ಅನ್ವಯಿಸುತ್ತದೆ. ಜೂನ್ 2016ರಲ್ಲಿದ್ದಂತೆ ಆಸ್ತಿಯ ನ್ಯಾಯೋಚಿತ ಮಾರುಕಟ್ಟೆಯ ವೌಲ್ಯವನ್ನು ಬಹಿರಂಗಪಡಿಸದ ಆದಾಯ ಎಂದು ಪರಿಗಣಿಸಲಾಗುವುದು. ಯೋಜನೆಯಡಿ ಘೋಷಿಸಿಕೊಂಡ ಆದಾಯಕ್ಕೆ ತೆರಿಗೆ, ಮೇಲ್ತೆರಿಗೆ ಮತ್ತು ದಂಡ ಒಟ್ಟು 45% ಪಾವತಿಸಬೇಕು.
ಘೋಷಿತ ಆಸ್ತಿಗಳಿಗೆ ಸಂಪತ್ತು ತೆರಿಗೆಯಿಂದ ವಿನಾಯಿತಿ ನೀಡಲಾಗುವುದು. ಈ ಘೋಷಣೆಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಕಾಯ್ದೆ ಮತ್ತು ಸಂಪತ್ತು ತೆರಿಗೆ ಕಾಯ್ದೆಯಡಿ ಯಾವುದೇ ಪರಿಶೀಲನೆ ಇರುವುದಿಲ್ಲ ಹಾಗೂ ಕಾನೂನು ಕ್ರಮದಿಂದ ವಿನಾಯಿತಿ ನೀಡಲಾಗಿದೆ. ಕೆಲವು ಷರತ್ತುಗಳಿಗೆ ಒಳಪಟ್ಟು ಬೇನಾಮಿ ವಹಿವಾಟು (ನಿರ್ಬಂಧ) ಕಾಯ್ದೆ 1988ರಡಿ ವಿನಾಯಿತಿ ನೀಡಲಾಗಿದೆ.
www.det.kar.nic.inತೆರಿಗೆ, ಮೇಲ್ತೆರಿಗೆ ಮತ್ತು ದಂಡವನ್ನು 2016ರ ನವೆಂಬರ್ 30ರೊಳಗೆ ಪಾವತಿಸಬೇಕು. ತೆರಿಗೆಯನ್ನು ಆನ್‌ಲೈನ್ ಮೂಲಕ ಘೋಷಣೆ/ಭರ್ತಿ ಮಾಡಬಹುದು. ಅಥವಾ ವ್ಯಾಪ್ತಿಯ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಘೋಷಣೆ/ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ ನ್ನು ಸಂಪರ್ಕಿಸಬಹುದಾಗಿದೆ.







