ಸಹ್ರಿಯಲ್ಲಿ ಹೀಗೆ ಮಾಡಿ, ದಿನವಿಡೀ ಉಲ್ಲಸಿತರಾಗಿರಿ

ಸಹ್ರಿ ಎಷ್ಟು ಅಗತ್ಯ ಎನ್ನುವುದನ್ನು ವಿವರಿಸುವುದು ಕಷ್ಟ. ಮುಖ್ಯವಾಗಿ ಬಹಳ ಬಿಸಿಯಾಗಿರುವ ಮತ್ತು ವಾತಾವರಣದಲ್ಲಿ ತೇವಾಂಶವಿರುವ ಸ್ಥಳಗಳಲ್ಲಿ ಸಹ್ರಿ ಅಗತ್ಯ. ಅಂತಹ ಸಂದರ್ಭಗಳ್ಲಿ ಸಹ್ರಿ ದಿನವಿಡೀ ಶಕ್ತಿಯನ್ನು ಸಂಗ್ರಹಿಸಿಡುವ ಅತ್ಯುತ್ತಮ ಅವಕಾಶ ನೀಡುತ್ತದೆ. ಸ್ವಲ್ಪ ನಿದ್ದೆ ಸಿಗಲಿ ಎಂದು ಸಹ್ರಿ ತಪ್ಪಿಸಿಕೊಳ್ಳುವುದು ಬಹಳ ಮಂದಿಗೆ ಹಿತಕರವಾಗಿ ಕಾಣಬಹುದು. ಆದರೆ ಇದು ನಿಮಗೆ ಮಾರಕವಾಗಿ ಪರಿಣಮಿಸಲಿದೆ.
1. ಸಹ್ರಿ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಉಪವಾಸ ಸಂದರ್ಭದಲ್ಲಿ ಆಗುವ ವಾಂತಿ ಸಮಸ್ಯೆಯಿಂದ ಕಾಪಾಡುತ್ತದೆ.
2. ಶಕ್ತಿಗಾಗಿ ಕಾರ್ಬೋಹೈಡ್ರೇಟ್ ಅಧಿಕವಿರುವ ಆಹಾರವನ್ನೇ ಸೇವಿಸಲು ಯಾವಾಗಲೂ ಪ್ರಯತ್ನಿಸಿ.
3. ಇಡೀಧಾನ್ಯದ ಬ್ರೆಡ್, ಧಾನ್ಯಗಳು ಮತ್ತು ಬ್ರೌನ್ ರೈಸ್ ಅತ್ಯುತ್ತಮ ಆಯ್ಕೆಯಾಗಲಿವೆ.
4. ಮೊಟ್ಟೆಗಳು, ಮಾಂಸ ಅಥವಾ ಬೀನ್ಸ್ ಮೊದಲಾದ ಹೆಚ್ಚು ಪ್ರೊಟೀನ್ ಇರುವ ಆಹಾರವನ್ನೇ ಸೇವಿಸಿ.
5. ಫೈಬರ್ ಅಧಿಕವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ.
6. ಬಹಳಷ್ಟು ನೀರು ಕುಡಿಯಿರಿ ಮತ್ತು ದಿನವಿಡೀ ಹೆಚ್ಚು ಬಿಸಿಲಿದ್ದಲ್ಲಿ ನೀರು ಕುಡಿದು ಹೈಡ್ರೇಟ್ ಮಾಡಿಕೊಳ್ಳಿ.
ಕೃಪೆ: khaleejtimes.com







