ಅಡಿಕೆ, ಶುಂಠಿಗೂ ಬೆಳೆ ವಿಮೆ: ಅಪರ ಡಿಸಿ ಚನ್ನಬಸಪ್ಪ
ಬೆಳೆವಿಮಾಯೋಜನೆ ಅನುಷ್ಠಾನ ಕುರಿತು ಸಭೆ
ಶಿವಮೊಗ್ಗ, ಜೂ.19: ಇದೇ ಮೊದಲ ಬಾರಿಗೆ ತೋಟಗಾರಿಕೆ ಬೆಳೆಗಳಿಗೂ ಬೆಳೆ ವಿಮೆ ಯೋಜನೆ ಜಾರಿಯಲ್ಲಿದ್ದು, ಜೂನ್ 30 ರೊಳಗೆ ರೈತರು ಬೆಳೆ ವಿಮೆ ಪಡೆಯುವ ಮೂಲಕ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಹೇಳಿದ್ದಾರೆ.
ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳಲ್ಲಿ ಬೆಳೆವಿಮಾ ಯೋಜನೆ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆೆ ನಡೆಸಿದ ಅವರು, ಇದೇ ಮೊದಲ ಬಾರಿಗೆ ಹವಾ ಮಾನ ಆಧಾರಿತ ತೋಟಗಾರಿಕೆ ಇಲಾಖೆಯಲ್ಲಿ ಬೆಳೆ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ನೋಂದಾಯಿಸಲು ಕೊನೆಯದಿನವಾದ ಜೂನ್ 30ರೊಳಗೆ ವಿಮೆ ಪಡೆಯುವ ಮೂಲಕ ಜಿಲ್ಲೆಯ ಹೆಚಿ್ಚನ ರೈತರು ಯೋಜನೆ ಸದುಪಯೋಗ ಪಡೆಯಬೇಕೆಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ತೆ
ಟಗಾರಿಕೆ ಬೆಳೆಗಳಾದ ಅಡಿಕೆ ಮತ್ತು ಶುಂಠಿ ಬೆಳೆಗಳಿಗೆ ವಿಮಾ ಸೌಲಭ್ಯವನ್ನು ಅನುಷ್ಠಾ ನಗೊಳಿಸಲಾಗಿದ್ದು, ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ವಿಮಾ ಯೋಜನೆ ಬೆಳೆಗಾರರಿಗೆ ಹೆಚ್ಚಿನ ಅನುಕೂಲವಿದೆ. ವಿಮೆ ಪಡೆಯಲು ಕಾಲಾ ವಧಿ ಕಡಿಮೆ ಇದ್ದು ಜೂನ್ 30ರೊಳಗೆ ವಿಮೆ ಪಡೆಯಲು ಅನುಕೂಲವಾಗುವಂತೆ ಎಲ್ಲ ಗ್ರಾಮ ಪಂಚಾಯತ್ ಮಟ್ಟದಲ್ಲಿ ರೈತರಿಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಜಾರಿಯಲ್ಲಿದ್ದು ಬೆಳೆ ಕಟಾವು ಆಧಾರದ ಮೇಲೆ ವಿಮಾ ಸೌಲಭ್ಯವನ್ನು ಒದಗಿಸಲಾಗುವುದು. ಜುಲೈ 30 ವಿಮಾ ಪಡೆಯಲು ಕೊನೆಯದಿನವಾಗಿದ್ದು, ಯೋಜನೆಯ ಸದುಪಯೋಗಪಡೆದು ಕೊಳ್ಳಬೇಕೆಂದು ಅವರು ತಿಳಿಸಿದರು.
ಜಿ
್ಲೆಯಲ್ಲಿ ಗ್ರಾಮ ಪಂಚಾಯತ್ ಮತ್ತು ಹೋಬಳಿ ಮಟ್ಟದಲ್ಲಿ ಭತ್ತ, ಮೆಕ್ಕೆಜೋಳ, ರಾಗಿ ಮತ್ತು ಬಿಳಿಜೋಳ ಬೆಳೆಗಳಿಗೆ ಬೆಳೆ ವಿಮೆ ಮಾಡಲಾಗಿದ್ದು, ವಿಮೆ ಪಡೆದ ರೈತರು ಕೂಡಲೇ ಅಂಗೀಕೃತ ಬ್ಯಾಂಕ್‌ಗಳಲ್ಲಿ ಬೆಳೆ ವಿಮೆ ಪಡೆಯಬೇಕು. ಈ ಸಂಬಂಧ ರೈತರಲ್ಲಿ ವ್ಯಾಪಕ ಪ್ರಚಾರ ಮಾಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಬ್ಯಾಂಕ್‌ಗಳು ರೈತರು ಬೆಳೆವಿಮೆ ಪಡೆಯಲು ಬಂದಾಗ ಉಡಾಫೆ ತೋರದೆ ಬೆಳೆವಿಮೆ ಮಾಡಿಕೊಡಬೇಕು. ಈ ಮೂಲಕ ಸರಕಾರದ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಬೇಕು ಎಂದರು
ಸಭೆಯಲ್ಲಿ ಶಿವಮೊಗ್ಗ ಉಪ ವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ಕೃಷಿ ಜಂಟಿ ನಿರ್ದೇಶಕ ಕೆ. ಮಧುಸೂದನ್, ತೋಟಗಾರಿಕೆ ಉಪನಿರ್ದೇಶಕ ಡಾ. ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.







