ಉತ್ತಮ ಆರೋಗ್ಯಕ್ಕೆ ದಿನಕ್ಕೆಷ್ಟು ಬಾರಿ ಮೂತ್ರ ಮಾಡಬೇಕು?

ಎಷ್ಟು ಬಾರಿಗೊಮ್ಮೆ ಮೂತ್ರ ಮಾಡುತ್ತೇವೆ ಎನ್ನುವುದು ನಮ್ಮ ದೇಹ ಎಷ್ಟು ಹೈಡ್ರೇಟ್ ಆಗಿದೆ ಎನ್ನುವುದನ್ನು ಸೂಚಿಸುತ್ತದೆ. ನೀವು ಇತರರಗಿಂತ ಹೆಚ್ಚು ಮೂತ್ರ ಮಾಡುತ್ತೀರಿ ಅಥವಾ ಬಹಳ ಸಮಯದ ಬಳಿಕ ಬಾತ್ ರೂಂ ಪ್ರವೇಶಿಸುವ ಅಭ್ಯಾಸ ನಿಮಗಿದ್ದಲ್ಲಿ ದಿನಕ್ಕೆ ನೀವೆಷ್ಟು ಮೂತ್ರ ಮಾಡಬೇಕು ಎನ್ನುವುದು ತಿಳಿಯುವುದು ಅಗತ್ಯ. ಹಾಗೆಂದು ನಿರ್ದಿಷ್ಟ ಸಂಖ್ಯೆಗಳೇನೂ ಇಲ್ಲ. ಆದರೆ ನೀವು ದಿನಕ್ಕೆಷ್ಟು ಬಾರಿ ಮೂತ್ರ ಮಾಡುತ್ತೀರಿ ಎನ್ನುವುದು ನಿಮ್ಮ ಆರೋಗ್ಯವನ್ನು ಸೂಚಿಸುತ್ತದೆ. ಮೌಂಟ್ ಸಿನೈ ಆಸ್ಪತ್ರೆಯ ಯೂರಾಲಜಿ ಅಸಿಸ್ಟಂಟ್ ಪ್ರೊಫೆಸರ್ ಡಾ ನೀಲ್ ಗ್ರಾಫ್ಟೈನ್ ಈ ಬಗ್ಗೆ ಮುಖ್ಯ ಮಾಹಿತಿ ಕೊಟ್ಟಿದ್ದಾರೆ.
ನಾವು ದಿನಕ್ಕೆ ಎಷ್ಟು ಬಾರಿ ಮೂತ್ರ ಮಾಡಬೇಕು?
ಉಲ್ಲೇಖಿಸಿರುವಂತೆ ಮೂತ್ರ ಮಾಡುವುದಕ್ಕೆ ಇಂತಿಷ್ಟೇ ಸಂಖ್ಯೆ ಎನ್ನುವುದು ಇಲ್ಲ. ಆದರೆ ಸರಾಸರಿ ಮಂದಿ ಕನಿಷ್ಠ ದಿನಕ್ಕೆ ನಾಲ್ಕು ಬಾರಿ ಮತ್ತು ಗರಿಷ್ಠ ಏಳು ಬಾರಿ ಮೂತ್ರ ಮಾಡುತ್ತಾರೆ. ನೀವು ಏಳು ಬಾರಿಗಿಂತ ಹೆಚ್ಚು ಮೂತ್ರ ಮಾಡಿದರೂ ಭಯಪಡಬೇಕಾಗಿಲ್ಲ. ಮೂತ್ರ ಮಾಡುವ ಪಾಳಿಯ ಮೇಲೆ ಹಲವು ವಿಷಯಗಳು ಪರಿಣಾಮ ಬೀರುತ್ತವೆ. ನಿಮ್ಮ ಹೈಡ್ರೇಶನ್ ಮತ್ತು ನೀವು ಹೇಗೆ ಹೈಡ್ರೇಟ್ ಮಾಡಬೇಕು ಎನ್ನುವುದೂ ಸೇರಿದೆ.
ಉದಾಹರಣೆಗೆ, ನೀವು ಅತಿಯಾಗಿ ನೀರು ಕುಡಿದಲ್ಲಿ ಹೆಚ್ಚು ಮೂತ್ರ ಮಾಡುವಿರಿ. ಹೆಚ್ಚುವರಿಯಾಗಿ ನೀವು ಆಲ್ಕೋಹಾಲ್, ಕಾಫಿ ಮತ್ತು ಇತರ ಮೂತ್ರಕೋಶವನ್ನು ಪ್ರಚೋದಿಸುವ ಪಾನೀಯ ಕುಡಿದರೆ ಹೆಚ್ಚು ಬಾರಿ ಬಾತ್ ರೂಂಗೆ ಹೋಗುತ್ತೀರಿ. ಈ ನಡುವೆ ಕೆಲವರು ತಮ್ಮ ಮೂತ್ರಕೋಶ ಒಡೆದು ಹೋಗುತ್ತದೆ ಎನ್ನುವವರೆಗೂ ಅದನ್ನು ಸಹಿಸಿಕೊಂಡಿರುತ್ತಾರೆ.
ಅಂತಹ ವಿಷಯ ಆಗಾಗ್ಗೆ ಆಗುತ್ತದೆಯೆ?
ದುರದೃಷ್ಟವಶಾತ್ ಹೌದು. ಎರಡು ಲೀಟರ್ ನೀರು ಕುಡಿದು ದಿನಕ್ಕೆ 11ಕ್ಕೂ ಹೆಚ್ಚು ಬಾರಿ ಮೂತ್ರ ಮಾಡಿದಲ್ಲಿ ನಿಮಗೆ ಮೂತ್ರದ ಪಾಳಿಯಲ್ಲಿ ಸಮಸ್ಯೆಯಿದೆ ಎಂದರ್ಥ. ಅತಿಯಾಗಿ ಮೂತ್ರ ಮಾಡುವುದು ಅತಿಯಾಗಿ ಸಕ್ರಿಯವಾಗಿರುವ ಮೂತ್ರಕೋಶದ ಸೂಚನೆ. ಅದು ಅಗತ್ಯಕ್ಕಿಂತ ಹೆಚ್ಚು ಬಾರಿ ಸಂಕುಚಿಸುತ್ತದೆ. ಹೀಗಾಗಿ ಮೂತ್ರ ಆಗಾಗ್ಗೆ ಮಾಡಬೇಕು ಎಂದು ಅನಿಸುತ್ತದೆ. ನಾವು ಮೂತ್ರಕೋಶವನ್ನು ತರಬೇತು ನೀಡಬೇಕು. ಅಂತಹ ಸಮಸ್ಯೆ ಬಾರದಂತೆ ಗಮನಿಸಬೇಕು.
ಇತರ ಮೂತ್ರ ವಿಷಯಗಳು
ನೀವು ತಿಳಿದುಕೊಳ್ಳಬೇಕಾದ ಮೂತ್ರಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಇವೆ.
► ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ತಪ್ಪಲ್ಲ. ಆದರೆ ಅದು ನೋವು ತರುವವರೆಗೆ ಹೋಗಬಾರದು.
► ಪದೇ ಪದೇ ಮೂತ್ರ ಹಿಡಿದಿಟ್ಟುಕೊಳ್ಳುವ ಅಭ್ಯಾಸ ಮೂತ್ರಕೋಶಕ್ಕೆ ಸೋಂಕು ತರಬಹುದು.
► ಸಾಮಾನ್ಯ ಆರೋಗ್ಯಕರ ಮೂತ್ರ ಹಳದಿ ಬಣ್ಣದಲ್ಲಿರುತ್ತದೆ.
► ಕೆಲವು ಆಹಾರಗಳಿಂದ ಮೂತ್ರದ ಬಣ್ಣ ಬದಲಾಗಬಹುದು. ಉದಾಹರಣೆಗೆ ರೂಬರ್ಬ್ ಸೇವಿಸಿದಲ್ಲಿ ಕಂದು ಅಥವಾ ಕಪ್ಪು ಬಣ್ಣಕ್ಕೆ ಹೋಗಬಹುದು. ಬ್ಲಾಕ್ ಬೆರಿ ಸೇವಿಸಿದರೆ ಗುಲಾಬಿ ಬಣ್ಣವಾಗಬಹುದು.
► ಆಸ್ಪರಾಜಸ್ ಆರೋಗ್ಯಕರ. ಆದರೆ ಅದನ್ನು ಸೇವಿಸಿದರೆ ಮೂತ್ರಕ್ಕೆ ಕೆಟ್ಟ ವಾಸನೆ ಬರುತ್ತದೆ.
► ಸಿಹಿಯಾದ ವಾಸನೆ ಮೂತ್ರಕ್ಕೆ ಇದ್ದರೆ ನಿಮಗೆ ಮಧುಮೇಹವಿದೆ.
► ಮೂತ್ರ ಶೇ. 95ರಷ್ಟು ನೀರೇ ಆಗಿರುತ್ತದೆ.
► ಸರಾಸರಿ ಮೂತ್ರದ ಸಮಯ ಏಳು ಸೆಕೆಂಡುಗಳು.
► ನಿಮ್ಮ ಮೂತ್ರದ ಹರಿವು ವಯಸ್ಸಾದಂತೆ ದುರ್ಬಲವಾಗುತ್ತದೆ.
► ವಯಸ್ಸಾದಂತೆ ಹೆಚ್ಚು ಮೂತ್ರ ಮಾಡುತ್ತೀರಿ.
ಮೂತ್ರ ನಿಮ್ಮ ನಿದ್ದೆಗೆ ತೊಂದರೆ ಕೊಡಬಹುದು. ನೀವು ಸೇವಿಸುವ ಪಾನೀಯದಲ್ಲಿ ದ್ರವದಂಶ ಇದ್ದರೆ ಒಳ್ಳೆಯದು. ಮಲಗುವ ಮೊದಲು ಪಾನೀಯ ಸೇವನೆ ಒಳ್ಳೆಯದಲ್ಲ. ಹಾಗಾದಾಗ ರಾತ್ರಿ ಮೂತ್ರಕ್ಕೆ ಹೋಗದೆ ಮಲಗಬಹುದು.
ಕೃಪೆ: http://www.stethnews.com/







