ಬಂಟ್ವಾಳ ರೇಂಜ್ ಮದರಸಗಳ ಮುಅಲ್ಲಿಂಗಳಿಗೆ ರಮಝಾನ್ ಕಿಟ್ ವಿತರಣೆ

ಬಂಟ್ವಾಳ, ಜೂ. 19: ದಾನ ಮಾಡುವುದರ ಮೂಲಕ ಬಡವರು, ನಿರ್ಗತಿಕರು, ಅನಾಥರನ್ನು ಸಂರಕ್ಷಿಸುವವರನ್ನು ಅಲ್ಲಾಹನು ಇಷ್ಟಪಡುತ್ತಾನೆ. ಅಲ್ಲದೆ ದಾನ ಮನುಷ್ಯನನ್ನು ವಿಪತ್ತುಗಳಿಂದ ಕಾಪಾಡಿಕೊಳ್ಳುವುದು ಎಂದು ಸಮಸ್ತ ಕೇಂದ್ರ ಮುಶಾವರದ ಸದಸ್ಯ ಹಾಜಿ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಹೇಳಿದರು.
ಬಂಟ್ವಾಳ ರೇಂಜ್ ಮದರಸ ಮ್ಯಾನೇಜ್‌ಮೆಂಟ್ ವತಿಯಿಂದ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ರೇಂಜಿಗೊಳಪಟ್ಟ ಮದರಸಗಳ ಮುಅಲ್ಲಿಂಗಳಿಗೆ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಬಿ.ಎಚ್.ಖಾದರ್ ವಹಿಸಿದ್ದರು. ಬಂಟ್ವಾಳ ಜುಮಾ ಮಸೀದಿಯ ಮುದರ್ರಿಸ್ ಅನ್ಸಾರ್ ಪೈಝಿ, ಅಮೀರ್ ದಾರಿಮಿ ಕೇರಳ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ರೇಂಜ್ ಜಂಇಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಯ್ಯೂಬ್ ಮುಸ್ಲಿಯಾರ್ ಅರಳ, ಹಾಜಿ ಮುಹಮ್ಮದ್ ನೀಮಾ, ಮಸೀದಿ ಅಧ್ಯಕ್ಷ ಇಸ್ಮಾಯೀಲ್ ಅರಬಿ, ಮುಹಮ್ಮದ್ ನೆಲ್ಲಿಗುಡ್ಡೆ, ಎಸ್ಕೆಎಸ್ಸೆಸ್ಸೆಪ್ ಯುನಿಟ್ ಅಧ್ಯಕ್ಷ ರಾಹಿಲ್ ಉಪಸ್ಥಿತರಿದ್ದರು.
ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ಖಾದರ್ ಮಾಸ್ಟರ್ ಪ್ರಾಸ್ತಾವಿಕ ಬಾಷಣ ಮಾಡಿದರು. ಅಬ್ದುಲ್ ಹಮೀದ್ ದಾರಿಮಿ ಕಲ್ಲಗುಡ್ಡೆ ವಂದಿಸಿದರು.







