ರೆಸ್ಟೋರೆಂಟ್‌ನಿಂದ ಹೊರಗೆಳೆದು ಬಾಲಕಿಯ ಅತ್ಯಾಚಾರ, ಇರಿತ
ಲಂಡನ್,ಜೂ.19: ಎದೆನಡುಗಿಸುವಂತಹ ಘಟನೆ ಯೊಂದರಲ್ಲಿ, ಬ್ರಿಟನ್‌ನ ಎಪ್ಸನ್ ನಗರದಲ್ಲಿ 17 ವರ್ಷದ ಬಾಲಕಿಯೊಬ್ಬಳನ್ನು ದುಷ್ಕರ್ಮಿಯೊಬ್ಬನು ರೆಸ್ಟೋರೆಂಟ್‌ನಿಂದ ಹೊರಗೆಳೆದು, ಆಕೆಯ ಮೇಲೆ ಅತ್ಯಾಚಾರಗೈದ ಬಳಿಕ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಹಂತಕನು 32 ವರ್ಷದವನಾಗಿದ್ದು, ಆತ ಕೊಲೆಯಾದ ಬಾಲಕಿಗೆ ಪರಿಚಿತನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಎಪ್ಸಮ್ ನಗರದ ಮಧ್ಯಭಾಗದಲ್ಲಿರುವ ಪಿಝಾ ಅಂಗಡಿಗೆ ನುಗ್ಗಿದ ದುಷ್ಕರ್ಮಿಯು, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಬಾಲಕಿಯನ್ನು ದರದರನೆ ಹೊರಗೆಳೆದೊಯ್ದು,ಅತ್ಯಾಚಾರವೆಸಗಿದ್ದಾನೆ ಆನಂತರ ಆಕೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇರಿತದಿಂದ ಗಂಭೀರ ಗಾಯಗಳಾದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆಯೆಂದು ತಿಳಿದುಬಂದಿದೆ. ಘಟನೆಯ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
Next Story





