ಟರ್ಕಿಯಿಂದ ಸಿರಿಯ ನಿರಾಶ್ರಿತರ ಮೇಲೆ ಗುಂಡಿನ ದಾಳಿ: 11 ಬಲಿ
ಬೈರೂತ್,ಜೂ.19: ಟರ್ಕಿ ಗಡಿಯನ್ನು ದಾಟಲು ಯತ್ನಿಸಿದ ನಾಲ್ವರು ಮಕ್ಕಳು ಸೇರಿದಂತೆ 11 ಮಂದಿ ಸಿರಿಯ ನಿರಾಶ್ರಿತರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆಗೈದ ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ಸಿರಿಯ ಪ್ರತಿಪಕ್ಷಗಳು ಟರ್ಕಿಯನ್ನು ಆಗ್ರಹಿಸಿದೆ. ವಾಯುವ್ಯ ಸಿರಿಯದಿಂದ ಟರ್ಕಿಯ ಹತಾಯ್ ಪ್ರಾಂತದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ ನಾಗರಿಕರ ಗುಂಪಿನ ಮೇಲೆ ಟರ್ಕಿಯ ಗಡಿಭದ್ರತಾ ಪಡೆಯ ಯೋಧರು ಗುಂಡುಹಾರಿಸಿ, ಹತ್ಯೆಗೈದಿದ್ದಾರೆಂದು ಸಿರಿಯ ಪ್ರತಿಪಕ್ಷ ಪಡೆಗಳ ರಾಷ್ಟ್ರೀಯ ಮೈತ್ರಿಕೂಟ ಆಪಾದಿಸಿದೆ.
Next Story





