ಇರಾಕ್‌ನ್ನು ವಿಭಜಿಸುವುದು ಬೇಡ: ಅಮೆರಿಕ

ವಾಷಿಂಗ್ಟನ್,ಜೂನ್ 20: ಇರಾಕ್ ಅದು ಈಗಿರುವ ಸ್ಥಿತಿಯಲ್ಲಿ ವಿಭಜಿಸಲ್ಪಡದೆ ಮುಂದುವರಿಯಬೇಕೆಂದು ತನ್ನ ನಿಲುವನ್ನು ಅಮೆರಿಕ ಸ್ಪಷ್ಟಪಡಿಸಿದೆ. ಐಸಿಸ್ ಪರಾಭವಗೊಂಡ ಬಳಿಕ ಇರಾಕ್‌ನ್ನು ಮೂರು ಭಾಗಗಳಾಗಿ ವಿಭಜಿಸಬೇಕಾಗಿದೆ ಎಂದು ಕುರ್ದಿಸ್ತಾನ ಪ್ರಾಂತದ ಸುರಕ್ಷಾ ಕೌನ್ಸಿಲ್ ಅಧ್ಯಕ್ಷ ಮಸ್ರೂರ್ ಬರ್ಝಾನಿ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ವಾಷಿಂಗ್ಟನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಇರಾಕ್ ಅಖಂಡತೆಯ ಬಗ್ಗೆ ವಾಷಿಂಗ್ಟನ್ ನಿಲುವಿನಲ್ಲಿ ವ್ಯತ್ಯಾಸ ಇಲ್ಲ ಎಂದು ಅಮೆರಿಕ ವಿದೇಶಾಂಗ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.
ರಕ್ತಚೆಲ್ಲುವುದಕ್ಕೆ ಇತಿಶ್ರೀಹಾಡಲು ಇರಾಕ್‌ನ್ನು ಮೂರು ಭಾಗಗಳಾಗಿ ವಿಭಜಿಸಬೇಕು ಎಂದು ಬರ್ಝಾನಿ ಆಗ್ರಹಿಸಿದ್ದರು. ಕುರ್ದಿಸ್ತಾನ ಪ್ರಾಂತದ ಮುಖಂಡ ಮಸ್‌ಊದ್ ಬರ್ಝಾನಿಯ ಪುತ್ರ ಇವರು. ಫೆಡರಲ್ ವ್ಯವಸ್ಥೆ ದೇಶದಲ್ಲಿ ಯಶಸ್ವಿಯಾಗಲಾರದು. ಒಂದೋ ಮೂರು ಕಾನ್ಫೆಡರಲ್ ರಾಷ್ಟ್ರಗಳನ್ನಾಗಿ ಮಾಡಬೇಕು ಇಲ್ಲದಿದ್ದರೆ ಪೂರ್ಣ ಸ್ವತಂತ್ರ ಮೂರು ರಾಷ್ಟ್ರಗಳಾಗಿ ವಿಭಜಿಸಬೇಕೆಂದು ಅವರು ವಾದಿಸಿದ್ದಾರೆ.
Next Story





