ಮಂಜೇಶ್ವರ: ಬಂಡೆಕಲ್ಲು ಕುಸಿದು ಮನೆಗೆ ಹಾನಿ

ಮಂಜೇಶ್ವರ, ಜೂ.20: ಶನಿವಾರದಿಂದ ಬಿರುಸುಗೊಂಡ ಮುಂಗಾರು ಮಳೆಯ ಪರಿಣಾಮ ಬಂಡೆಕಲ್ಲು ಸಹಿತ ಮಣ್ಣು ಕುಸಿದು ಬಿದ್ದು ಮನೆಗೆ ಆಂಶಿಕವಾಗಿ ಹಾನಿಯಾದ ಘಟನೆ ಸೋಮವಾರ ಮುಂಜಾನೆ ಉಪ್ಪಳ ಹಿದಾಯತ್ ನಗರದಲ್ಲಿ ನಡೆದಿದೆ.
ಹಿದಾಯತ್ ನಗರ ರೈಲು ಹಳಿ ಸನಿಹದ ಅಬ್ದುರ್ರಹ್ಮಾನ್ ಎಂಬವರ ಮನೆಯ ಮೇಲೆ ಬಂಡೆಕಲ್ಲು ಸಹಿತ ಮಣ್ಣು ಕುಸಿದು ಬಿದ್ದಿದೆ.
ಕಾಂಕ್ರೀಟ್ ಮನೆಯ ಅಡುಗೆ ಕೋಣೆ ಇರುವಲ್ಲಿಗೆ ಕಲ್ಲು, ಮಣ್ಣು ಕುಸಿದು ಬಿದ್ದಿದ್ದು, ಗೋಡೆ ಬಿರುಕುಬಿಟ್ಟಿದೆ. ಈ ವೇಳೆ ಮನೆಯಲ್ಲಿ ಇಬ್ಬರು ಮಹಿಳೆಯರು ಮಾತ್ರ ಇದ್ದು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.
Next Story





