ತ್ವಾಕ ಉಸ್ತಾದ್‌ರಿಗೆ ದುಬೈ ಹೋಲಿ ಕುರ್‌ಆನ್ ಅವಾರ್ಡ್ ಪ್ರದಾನ

ದುಬೈ, ಜೂ.20: ಇಂಡಿಯನ್ ಅಕಾಡಮಿ ಸ್ಕೂಲ್ ಕಿಸೈಸ್‌ನಲ್ಲಿ ದುಬೈ ಅಂತಾರಾಷ್ಟ್ರೀಯ ಹೋಲಿ ಕುರ್‌ಆನ್ ಅವಾರ್ಡ್ –2016 ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಖಾಝಿ, ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಇದರ ಶಿಲ್ಪಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿಯವರಿಗೆ ದುಬೈ ಸರಕಾರದ ಹೋಲಿ ಕುರ್‌ಆನ್ ಪ್ರತಿಷ್ಠಿತ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ಮಜ್ಲಿಸುನ್ನೂರ್ ಕಾರ್ಯಕ್ರಮ ಬಳಿಕ ಇಫ್ತಾರ್ ಸಂಗಮ, ಹದ್ದಾದ್ ರಾತೀಬ್ ನಡೆಯಿತು. ಸಭಾ ಕಾರ್ಯಕ್ರಮ ಅಸ್ಸಯ್ಯದ್ ಹಾಮಿದ್ ಕೋಯಮ್ಮ ತಂಙಳ್ರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ದುಬೈ ಹೋಲಿ ಕುರ್ಆನ್ ಅವಾರ್ಡ್‌ನ ಪ್ರತಿನಿಧಿ ಶೈಖ್ ಸಾಲೆಹ್ ಅಲಿ ಅಬ್ದುಲ್ಲಾಹ್ , ಉಸ್ತಾದ್ ಬಹಾವುದ್ದೀನ್ ನದ್ವಿ ಕೂರಿಯಾಡ್, ಯು ಯಂ ಉಸ್ತಾದ್ ಯಂ.ಐ.ಸಿ., ಮುಖ್ಯ ಪ್ರಭಾಷಣಗಾರ ಉಸ್ತಾದ್ ಶಾಜಹಾನ್ ರಹ್ಮಾನಿ ಕಂಬ್ಲಕ್ಕಾಡ್, ಉಸ್ತಾದ್ ಅಬ್ದುಲ್ ಹಮೀದ್ ಫೈಝಿ ಅಂಬ್ಲಕ್ಕಡವು, ಸಲೀಂ ಅಲ್ತಾಫ್ ಫರಂಗಿಪೇಟೆ, ಹಾಜಿ ಯಾಹ್ಯ ತಳಂಗೆರೆ, ಹಾಜಿ ಮೊಹಿದ್ದೀನ್ ಕುಟ್ಟಿ ಕಕ್ಕಿಂಜೆ, ಉಸ್ತಾದ್ ಇಬ್ರಾಹಿಂ ಫೈಝಿ, ಉಸ್ತಾದ್ ಶೌಕತ್ ಅಲಿ ಹುದವಿ , ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಉಸ್ತಾದ್ ಅಬ್ದುಲ್ ಸಲಾಮ್ ಬಾಖವಿ ಸ್ವಾಗತಿಸಿದರು. ಬಳಿಕ ದುಬೈ ಪ್ರತಿನಿಧಿ ಶೈಖ್ ಸಾಲೆಹ್ ಅಲಿ ಅಬ್ದುಲ್ಲಾಹ್ರವರು ಶೈಖುನಾ ತ್ವಾಕಾ ಉಸ್ತಾದರಿಗೆ ದುಬೈ ಸರಕಾರದ ಪ್ರತಿಷ್ಠಿತ ಹೋಲಿ ಕುರ್ಆನ್ ಪ್ರಶಸ್ತಿ ಯನ್ನು ನೀಡಿ ಸನ್ಮಾನಿಸಿದರು.
ದಾರುನ್ನೂರ್ ವತಿಯಿಂದ ಅದ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಶೈಖುನಾರನ್ನು ಸನ್ಮಾನಿಸಿದರು. ಇದೇ ಸಂದರ್ಭ ಉಸ್ತಾದ್ ಬಹಾವುದ್ದೀನ್ ನದ್ವಿ ಮತ್ತು ಶಾಜಹಾನ್ ರಹ್ಮಾನಿಯವರನ್ನು ದುಬೈ ಸುನ್ನಿ ಸೆಂಟರ್ ವತಿಯಿಂದ ಸನ್ಮಾನಿಸಲಾಯಿತು.
ಅಸೈಯದ್ ಹಾಮಿದ್ ಕೋಯಮ್ಮ ತಂಙಳ್, ಉಸ್ತಾದ್ ಶಾಜಹಾನ್ ರಹ್ಮಾನಿ ಕಂಬ್ಲಕ್ಕಾಡ್ ಮಾತನಾಡಿದರು. ಉಸ್ತಾದ್ ಅಲವಿ ಕುಟ್ಟಿ ಹುದವಿ ಕಾರ್ಯಕ್ರಮ ನಿರೂಪಿಸಿದರು. ದಾರುನ್ನೂರಿನ ಯೂತ್ ಟೀಮ್ನ ಸದಸ್ಯರು ಮತ್ತು ಎಸ್ಕೆಎಸ್ಸೆಸ್ಸೆಫ್ ಸದಸ್ಯರು ಸ್ವಯಂಸೇವಕರಾಗಿ ಸಹಕರಿಸಿದರು.







