ಸಜಿಪನಡು: ಉಚಿತ ಪುಸ್ತಕ ವಿತರಣಾ ಸಮಾರಂಭ
ಮಂಗಳೂರು, ಜೂ.20: ಸಜೀಪನಡು ಯುವ ಕಾಂಗ್ರೆಸ್ ಹಾಗೂ ಅಬೂಬಕರ್ ಅಭಿಮಾನಿ ಬಳಗದ ವತಿಯಿಂದ ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ಹಾಗೂ ಬಂಟ್ವಾಳ ತಾಲೂಕು ಪಂಚಾಯತ್‌ಗೆ ನೂತನವಾಗಿ ಆಯ್ಕೆಯಾದ ಚಂದ್ರಹಾಸ್ ಕರ್ಕೇರರಿಗೆ ಸನ್ಮಾನ ಸಮಾರಂಭವು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಿರ್ದೇಶಕ ಹಾಜಿ ಎಸ್.ಅಬ್ಬಾಸ್‌ರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಮಾರಂಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ಕೆ ಎಸ್ ಆಮೀರ್ ತುಂಬೆ , ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ, ಸಮೀರ್ ಪಜೀರ್, ಸಜೀಪನಡು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಜಸೀಂ, ನಿಸಾರ್, ಆಸಿಫ್, ಇಕ್ಬಾಲ್, ಉಪಸ್ಥಿತರಿದ್ದರು. ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬೂಬಕ್ಕರ್ ಸಜೀಪ ಸ್ವಾಗತಿಸಿದರು.
Next Story





