ರೈತರ ಅಭಿವೃದ್ಧಿಗೆ ಶಾಖೆಯಿಂದ 14 ಕೋಟಿ ರೂ. ಸಾಲ: ರಾಜೇಂದ್ರ ಪ್ರಸಾದ್

ಮೂಡಿಗೆರೆ, ಜೂ.20: ಮೂಡಿಗೆರೆ ಶಾಖೆಯಲ್ಲಿ 14 ಕೋಟಿ ರೂ. ಸಾಲವನ್ನು ರೈತರ ಅಭಿವೃದ್ಧಿ ದೃಷ್ಟಿಯಿಂದ ನೀಡಲಾಗಿದ್ದು, ಕಾರ್ಪೊರೇಷನ್ ಬ್ಯಾಂಕ್‌ನಿಂದ ಉತ್ತಮ ಸೇವೆ ಒದಗಿಸಲು ಶ್ರಮಿಸಲಾಗುತ್ತಿದೆ ಎಂದು ಕಾರ್ಪೊರೇಷನ್ ಬ್ಯಾಂಕ್ ವಲಯ ಪ್ರಬಂಧಕ ರಾಜೇಂದ್ರ ಪ್ರಸಾದ್ ತಿಳಿಸಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಕಟ್ಟಡದಲ್ಲಿ ಮೂಡಿಗೆರೆ ಕಾರ್ಪೊರೇಷನ್ ಬ್ಯಾಂಕ್‌ನ 2ನೆ ಎಟಿಎಂ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ಕಾರ್ಪೊರೇಷನ್ ಬ್ಯಾಂಕ್‌ನಿಂದ ಅತೀ ಹೆಚ್ಚು ಎಟಿಎಮ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.
ನಮ್ಮ ಬ್ಯಾಂಕ್ ದೇಶದಲ್ಲಿ 2400ಕ್ಕೂ ಹೆಚ್ಚು ಬ್ರಾಂಚ್‌ಗಳನ್ನು ಹೊಂದಿದೆ. 3400 ಎಟಿಎಮ್‌ಗಳನ್ನು ಸ್ಥಾಪಿಸಲಾಗಿದೆ. ಬಹುತೇಕ ಎಟಿಎಮ್‌ಗಳಲ್ಲಿ ಹಣ ತೆಗೆಯುವ ಜೊತೆಗೆ ಪಾವತಿಸುವ ಯಂತ್ರಗಳನ್ನು ಅಳವಡಿಸಲಾಗಿದೆ. ಮೂಡಿಗೆರೆ ಶಾಖೆ ಉದ್ಘಾಟನೆಗೊಂಡ ಎರಡು ವರ್ಷಗಳಲ್ಲಿ ರೈತರಿಗೆ 14 ಕೋಟಿ ರೂ. ಸಾಲವನ್ನು ನೀಡಲಾಗಿದೆ. 10 ಕೋಟಿ ರೂ. ಠೇವಣಿಯನ್ನು ಸಂಗ್ರಹಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ಉಡುಪಿ ವಲಯದಲ್ಲಿ ನಂ.1 ಸ್ಥಾನದಲ್ಲಿ ಪ್ರಶಸ್ತಿ ಪಡೆದಿದೆ. ಮಲೆನಾಡಿನ ಜನರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿದರು. ಬ್ಯಾಂಕ್‌ನ ವ್ಯವಸ್ಥಾಪಕ ಶರತ್ ಕುಮಾರ್ ಮಾತನಾಡಿ, ಮಲೆನಾಡು ಬಾಗದ ರೈತರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ದ್ರತಾ ಕಪಾಟು ವ್ಯವಸ್ಥೆಯನ್ನು ಅತಿ ಕಡಿಮೆ ಬಾಡಿಗೆಗೆ ನಮ್ಮ ಬ್ಯಾಂಕ್ ಶಾಖೆಯಲ್ಲಿ ನೀಡಲಾಗುತ್ತಿದೆ. ಇದರ ಉಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದು ಮನವಿ ಮಾಡಿದರು.







