Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ20 Jun 2016 11:54 PM IST
share

ವಿದ್ಯುತ್ ಕಂಬ ಸಹಿತ ಬಾವಿ ಕುಸಿತ
ಮಂಜೇಶ್ವರ, ಜೂ.20: ಬೇಕೂರು ಬಳಿ ವಿದ್ಯುತ್ ಕಂಬ ಸಹಿತ ಬಾವಿ ಕುಸಿದು ಬಿದ್ದು ಅಪಾರ ನಷ್ಟವಾದ ಘಟನೆ ನಡೆದಿದೆ.
ಬೇಕೂರು ಶಾಂತಿಗುಡಿಯಲ್ಲಿ ಅಡಿಕೆ ವ್ಯಾಪಾರಿಯಾಗಿರುವ ಅಗರ್ತಿಮೂಲೆ ನಿವಾಸಿ ಅಬುರ್ರಹ್ಮಾನ್‌ರ ಮನೆಯ ಬಾವಿ ರವಿವಾರ ಸಂಜೆ ಕುಸಿದ ಘಟನೆ ನಡೆದಿದೆ.
ಈ ವೇಳೆ ಸನಿಹದ ವಿದ್ಯುತ್ ಕಂಬವೂ ಕುಸಿದು ಬಾವಿಯೊಳಗೆ ಬಿದ್ದಿದೆ.ಬಳಿಕ ವಿದ್ಯುತ್ ಇಲಾಖೆಯ ಅಧಿಕಾರಿಗಳು ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಮೋಟಾರುಪಂಪ್, ಬಾವಿಯ ದಂಡಿಗೆ, ಹಗ್ಗ ಸಹಿತ ಬಾವಿಗೆ ಬಿದ್ದು ಮುಚ್ಚಿಹೋಗಿದೆ. ಸುಮಾರು 1 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ.

ಟ್ಯಾಕ್ಸಿ ವಾಹನ ಪಲ್ಟಿ: 9 ವಿದ್ಯಾರ್ಥಿನಿಯರಿಗೆ ಗಾಯ
ಬ್ರಹ್ಮಾವರ, ಜೂ.20: ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಬೆಳಗ್ಗೆ 7:30ಕ್ಕೆ ಟ್ಯಾಕ್ಸಿ ಕಾರು ಪಲ್ಟಿಯಾದ ಪರಿಣಾಮ ನರ್ಸಿಂಗ್ ಕಾಲೇಜಿನ ಒಂಭತ್ತು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಕೋಟ ಆಶ್ರಿತ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಕೇರಳ ರಾಜ್ಯದ ಶಾನಿ ಮೊಳ್, ಪ್ರಿಟ್ಟಿ ಜಾನ್, ಸಾಂದ್ರಾ ಸಜಿ, ಅಕ್ಷಯ ವಿ.ಎಸ್., ಗೀತು ದೇವಸ್ಯ, ಡೋನಾ ತಂಗಚ್ಚನ್, ಶಮಿ ಎಸ್., ರಂಜನಿ ಬಿ. ಎಂದು ಗುರುತಿ ಸಲಾಗಿದೆ.
ರಜೆ ಮುಗಿಸಿ ಕೇರಳದಿಂದ ಬಂದ ಇವರು ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿ ವಾಹನದಲ್ಲಿ ಕೋಟದ ಕಾಲೇಜು ಕಡೆ ಹೋಗುತ್ತಿದ್ದಾಗ ಟ್ಯಾಕ್ಸಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಇದರಿಂದ ಶಾನಿ ಮೊಳ್, ಪ್ರಿಟ್ಟಿ ಜಾನ್, ಡೋನಾ ತಂಗಚ್ಚನ್ ತೀವ್ರವಾಗಿ ಗಾಯಗೊಂಡರು. ಉಳಿದವರಿಗೆ ಸಣ್ಣಪುಟ್ಟ ಗಾಯಳಾಗಿವೆ. ಗಾಯಳುಗಳು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿನಲ್ಲಿ ಅಕ್ರಮ ಗೋವಾ ಮದ್ಯ ಪತ್ತೆ
ಉಡುಪಿ, ಜೂ.20: ಕೊಂಕಣ ರೈಲ್ವೆಯ ಕಾರವಾರ ರೈಲು ನಿಲ್ಧಾಣದಲ್ಲಿ ಸೋಮವಾರ ಸಿಎಸ್‌ಟಿಎಂ-ಮಂಗಳೂರು ಎಕ್ಸ್‌ಪ್ರೆಸ್‌ನ್ನು ಕಾರವಾರ ಆರ್‌ಪಿಎಫ್ ಸಿಬ್ಬಂದಿತಪಾಸಣೆ ನಡೆಸಿದಾಗ ವಾರಸುದಾರರಿಲ್ಲದ ನಾಲ್ಕು ಬಾಕ್ಸ್‌ಗಳಲ್ಲಿ ಅಕ್ರಮವಾಗಿ ಇರಿಸಿದ 375 ಅಕ್ರಮ ಗೋವಾ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ವೌಲ್ಯ ಸುಮಾರು 11,000ರೂ. ಎಂದು ಅಂದಾಜಿಸಲಾಗಿದೆ. ಕೊಂಕಣ ರೈಲ್ವೆಯ ಸಹಾಯಕ ಭದ್ರತಾ ಕಮಿಷನರ್ ಪ್ರವೀಣ್ ಕುಮಾರ್ ನೇತೃತ್ವ ದಲ್ಲಿ ಈ ತಪಾಸಣೆ ನಡೆಸಲಾಗಿತ್ತು ಎಂದು ಕೊಂಕಣ ರೈಲ್ವೆ ಪ್ರಕಟನೆಯಲ್ಲಿ ತಿಳಿಸಿದೆ.

ಬೆಂಕಿ ಆಕಸ್ಮಿಕ: ಮಹಿಳೆ ಮೃತ್ಯು
ಬ್ರಹ್ಮಾವರ, ಜೂ.20: ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಹೇರೂರು ಗ್ರಾಮದ ಕೊಳಂಬೆಯ ಚನ್ನಯ್ಯರ ಪತ್ನಿ ಪೂರ್ಣಿಮ(46) ಎಂದು ಗುರುತಿಸಲಾಗಿದೆ. ಇವರು ಜೂ.11ರಂದು ರಾತ್ರಿ ವೇಳೆ ಅಡುಗೆ ಕೋಣೆಯಲ್ಲಿ ಚಿಮಿಣಿ ದೀಪ ಉರಿಸುತ್ತಿರುವಾಗ ದೀಪ ಜಾರಿ ಮೈಮೇಲೆ ಬಿದ್ದು ನೈಟಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ರವಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಆತ್ಮಹತ್ಯೆ
ಬ್ರಹ್ಮಾವರ, ಜೂ.20: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಪಡು ನೀಲಾವರ ನಿವಾಸಿ ರಾಧಾ(50) ಜೀವನದಲ್ಲಿ ಜಿಗುಪ್ಸೆಗೊಂಡು ಜೂ.19ರಂದು ರಾತ್ರಿ ನೀಲಾವರ ಗ್ರಾಮದ ರೈಲ್ವೆ ಬ್ರಿಡ್ಜ್‌ನ ಬಳಿ ಇರುವ ಸೀತಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಗ್ನಿಶಾಮಕದಳದ ಚಾಲಕ ಮೃತ್ಯು
ಉಡುಪಿ, ಜೂ.20: ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರದ ಅಗ್ನಿಶಾಮಕದಳದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ ಕೆಳಾರ್ಕಳಬೆಟ್ಟು ನಿವಾಸಿ ಸತೀಶ್ ಮಂಡ್ಯದಲ್ಲಿ ಜೂ.18ರಂದು ಮೃತಪಟ್ಟಿದ್ದಾರೆ.
ಇವರು ತಮ್ಮ ಪತ್ನಿ ಲಕ್ಷ್ಮಿಯವರ ಜೊತೆ ಜಗಳವಾಡಿಕೊಂಡು ಬೇರೆಯಾಗಿ ವಾಸಿಸುತ್ತಿದ್ದರು. ಉಡುಪಿಯಲ್ಲಿದ್ದ ಲಕ್ಷ್ಮಿಯವರಿಗೆ ಸ್ವರ್ಣಸಂದ್ರದ ಅಗ್ನಿಶಾಮಕದಳದ ಸಿಬ್ಬಂದಿ ಕರೆ ಮಾಡಿ ಸತೀಶ್‌ರವರು ವಾಂತಿ ಮಾಡಿಕೊಂಡು ಬಿದ್ದು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅದರಂತೆ ಲಕ್ಷ್ಮೀ ಜೂ.19ರಂದು ಮಂಡ್ಯಕ್ಕೆ ತೆರಳಿ ಮೃತದೇಹವನ್ನು ಉಡುಪಿಗೆ ತಂದು ಅಜ್ಜರಕಾಡು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ.

ಇಂದು ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆ
ಬಂಟ್ವಾಳ, ಜೂ. 20: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಜೂನ್ 21ರಂದು ಬೆಳಗ್ಗೆ 7 ಗಂಟೆಗೆ ಕೈಕಂಬದ ಪಕ್ಷದ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.
  9 ಗಂಟೆಗೆ ಬಿ.ಸಿ.ರೋಡ್‌ನ ಶ್ರೀನಿವಾಸ್ ಹೊಟೇಲ್ ಎದುರಿನ ರಸ್ತೆ ವಿಭಜಕದಿಂದ ಕೈಕಂಬದವರೆಗೆ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದು ಪಕ್ಷದ ಬಂಟ್ವಾಳ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮುಷ್ತ್ತಾಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ: ಮಾನಭಂಗ-ಹಲ್ಲೆ ಆರೋಪಿಗಳಿಗೆ ಜಾಮೀನು
ಉಪ್ಪಿನಂಗಡಿ, ಜೂ.20: ಮಾನಭಂಗ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಮಂಗಳೂರು ಪ್ರಧಾನ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ಆರೋಪಿಗಳಾದ ಉರುವಾಲು, ಕುಪ್ಪೆಟ್ಟಿ ನಿವಾಸಿಗಳಾದ ಮುಹಮ್ಮದ್ ರಫೀಕ್, ನವಾಝ್, ಮುಹಮ್ಮದ್ ರಫೀಕ್, ಯಾಸೀರ್, ಕೆ. ಇಬ್ರಾಹೀಂ ಎಂಬವರಿಗೆ ಜಾಮೀನು ನೀಡಿದೆ. ಉರುವಾಲು ಗ್ರಾಮದ ರೊಹಾರ ನೆಕ್ಕಿಲು ಎಂಬಲ್ಲಿರುವ ತನ್ನ ಸಹೋದರ ಹಂಝನ ಮನೆಗೆ ಹೋಗಿದ್ದಾಗ ಅಲ್ಲಿಗೆ ಬಂದ ಆರೋಪಿಗಳು ಅಲ್ಲಿದ್ದ ಆಟೊ ಚಾಲಕ ಹ್ಯಾರೀಸ್ ಹಾಗೂ ರೊಹಾರರ ತಮ್ಮನ ಮೇಲೆ ಹಲ್ಲೆ ನಡೆಸಿ, ರೊಹಾರ, ಹ್ಯಾರೀಸ್‌ನ ಪತ್ನಿ ಹಾಗೂ ರೊಹಾರರ ತಂಗಿಯ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾರೆ. ಘಟನೆಗೆ ಹಳೆದ್ವೇಷವೇ ಕಾರಣ ಎಂದು ರೊಹಾರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಮೇಲೆ 143, 147, 448, 323, 504, 506, 354, 149 ಐಪಿಸಿ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆನಡೆಸಿದ ನ್ಯಾಯಾಲಯ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದೆ.

ಸುರತ್ಕಲ್: ದೇವಸ್ಥಾನದಲ್ಲಿ ಕಳವು
ಮಂಗಳೂರು, ಜೂ.20: ಶನಿವಾರ ರಾತ್ರಿ ಸುರತ್ಕಲ್‌ನ ಮಾರಿಯಮ್ಮ ದೇವಸ್ಥಾನದ ಬೀಗ ಮುರಿದು ಕಳ್ಳರು ಸುಮಾರು 1 ಲಕ್ಷ ವೌಲ್ಯದ ಸೊತ್ತನ್ನು ಕಳವುಗೈದಿದ್ದಾರೆ. ರವಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಕಳವುಗೈದಿರುವುದು ಬೆಳಕಿಗೆ ಬಂದಿದೆ.ಕಳ್ಳರು ದೇವಸ್ಧಾನದ ದಕ್ಷಿಣ ದಿಕ್ಕಿನಲ್ಲಿ ರುವ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಗರ್ಭಗುಡಿ ಪ್ರವೇಶ ದ್ವಾರ ಬೀಗವನ್ನು ಮುರಿದು 1 ಪಂಚ ಲೋಹದ ದುರ್ಗದೇವಿಯ ವಿಗ್ರಹ, 3 ಬೆಳ್ಳಿಯ ತಂಬಿಗೆ, 3 ಬೆಳ್ಳಿಯ ಮುಖ ವಾಡ, 1 ಬೆಳ್ಳಿಯ ಉದ್ದರಣೆಗಳನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್: ದೇವಸ್ಥಾನದಲ್ಲಿ ಕಳವು
ಮಂಗಳೂರು, ಜೂ.20: ಶನಿವಾರ ರಾತ್ರಿ ಸುರತ್ಕಲ್‌ನ ಮಾರಿಯಮ್ಮ ದೇವಸ್ಥಾನದ ಬೀಗ ಮುರಿದು ಕಳ್ಳರು ಸುಮಾರು 1 ಲಕ್ಷ ವೌಲ್ಯದ ಸೊತ್ತನ್ನು ಕಳವುಗೈದಿದ್ದಾರೆ. ರವಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಕಳವುಗೈದಿರುವುದು ಬೆಳಕಿಗೆ ಬಂದಿದೆ.ಕಳ್ಳರು ದೇವಸ್ಧಾನದ ದಕ್ಷಿಣ ದಿಕ್ಕಿನಲ್ಲಿ ರುವ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಗರ್ಭಗುಡಿ ಪ್ರವೇಶ ದ್ವಾರ ಬೀಗವನ್ನು ಮುರಿದು 1 ಪಂಚ ಲೋಹದ ದುರ್ಗದೇವಿಯ ವಿಗ್ರಹ, 3 ಬೆಳ್ಳಿಯ ತಂಬಿಗೆ, 3 ಬೆಳ್ಳಿಯ ಮುಖ ವಾಡ, 1 ಬೆಳ್ಳಿಯ ಉದ್ದರಣೆಗಳನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಂಗ್ರಹಕ್ಕೆ ದಾಳಿ
 ವಿಟ್ಲ, ಜೂ.20: ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಎಂಬಲ್ಲಿ ಅಕ್ರಮ ವಾಗಿ ಸಂಗ್ರಹಿಸಿಡಲಾಗಿದ್ದ 30 ಲೋಡ್ ಮರಳನ್ನು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಗಿರೀಶ್ ಮೋಹನ್ ನೇತೃತ್ವದ ಅಧಿ ಕಾರಿಗಳ ತಂಡ ಶನಿವಾರ ಸಂಜೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳನ್ನು ವಶಪ ಡಿಸಿಕೊಂಡಿದ್ದಾರೆೆ. ಸಹಾಯಕ ಅಧಿಕಾರಿ ಮಹಾ ದೇವಪ್ಪ, ಪಿಡಬ್ಲುಡಿ ಕಿರಿಯ ಇಂಜಿನಿಯರ್ ಅರುಣ್ ಪ್ರಕಾಶ್ ಡಿಸೋಜ, ಚಾಲಕ ಕೇಶವ ಕಾರ್ಯಾ ಚರಣೆಯಲ್ಲಿದ್ದರು.

ರಸ್ತೆಗೆ ಬಿದ್ದ ಮರ: ಸಂಚಾರಕ್ಕೆ ತೊಡಕುಪುತ್ತೂರು, ಜೂ.20: ರವಿವಾರ ರಾತ್ರಿ ಸುರಿದ ಮಳೆಗೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಗಡಿಪ್ಪಿಲ ಎಂಬಲ್ಲಿ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದು ಸೋಮವಾರ ರಸ್ತೆ ಸಂಚಾರಕ್ಕೆ ತೊಡಕಾಯಿತು. ಈ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು ಪರ್ಯಾಯ ಮಾರ್ಗ ವಾದ ಸರ್ವೇ, ಮುಂಡೂರು, ಪಂಜಳ ಮಾರ್ಗವಾಗಿ ಚಲಿಸಿತು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.

ಕಾಸರಗೋಡು: ದೇವಸ್ಥಾನದ ಕಾಣಿಕೆ ಡಬ್ಬಿ ಕಳವು
 ಕಾಸರಗೋಡು, ಜೂ.20: ಕೊರಕೋಡು ಶ್ರೀ ದುರ್ಗಾ ಪರಮೇಶ್ವರಿ ಮಹಾಕಾಳಿ ಕಾಶಿ ಕಾಳಭೈರವೇಶ್ವರ ಕ್ಷೇತ್ರದಲ್ಲಿ ಶನಿವಾರ ರಾತ್ರಿ ಕಳವು ಮಾಡಿದ ಕಾಣಿಕೆ ಡಬ್ಬಿಗಳು ನಗರದ ಹಳೇ ಬಸ್ ನಿಲ್ದಾಣದ ಬುಕ್ ಡಿಪೋ ಪಕ್ಕದಲ್ಲಿ ಪತ್ತೆಯಾಗಿದೆ. ಕಾಣಿಕೆ ಡಬ್ಬಿಗಳಲ್ಲಿದ್ದ ಹಣವನ್ನೆಲ್ಲಾ ದೋಚಿದ ಕಳ್ಳರು ಬಳಿಕ ಅದನ್ನು ಅಲ್ಲಿ ಬಿಸಾಡಿ ತೆರಳಿದ್ದಾರೆ ಎಂದು ಅಂದಾಜಿಸಲಾಗಿದೆ. ದೇವಸ್ಥಾನದಿಂದ ಕಳವುಗೈಯ್ಯಲ್ಪಟ್ಟ ಒಂದು ಚಾಕು ಕೂಡಾ ಅಲ್ಲಿ ಪತ್ತೆಯಾಗಿದೆ. ಅಲ್ಲದೆ ಪ್ಯಾಂಟೊಂದನ್ನು ಕಳಚಿ ಬಿಸಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಬೆರಳಚ್ಚು ತಜ್ಞರು ನಡೆಸಿದ ತಪಾಸಣೆಯಲ್ಲಿ ಮೂರು ಬೆರಳಚ್ಚುಗಳು ಲಭಿಸಿದೆ. ಅದನ್ನು ಪೊಲೀಸರು ಸಂಗ್ರಹಿಸಿ ಈ ಹಿಂದೆ ಬಂಧಿತರಾದ ಕಳ್ಳರ ಬೆರಳಚ್ಚುಗಳ ಹೋಲಿಸಿ ನೋಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಕ್ಷೇತ್ರದೊಳಗಿನ ಮೂರು ಕಾಣಿಕೆ ಡಬ್ಬಿಗಳನ್ನು ಕಳ್ಳರು ದೋಚಿದ್ದರು. ಕ್ಷೇತ್ರದ ನೌಕರೆ ರಾಧಾ ಎಂಬವರು ರವಿವಾರ ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದಾಗಲೇ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕ್ಷೇತ್ರದ ಹಿಂಭಾಗದಲ್ಲಿ ಕಬ್ಬಿಣದ ಕುರ್ಚಿ ಸಹಾಯದಿಂದ ಛಾವಣಿಗೇರಿ ಹೆಂಚು ತೆಗೆದು ಒಳಗೆ ಪ್ರವೇಶಿಸಿ ಕಳವುಗೈದ ಬಳಿಕ ಕ್ಷೇತ್ರದ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆದರೆ ಕ್ಷೇತ್ರದ ಗರ್ಭಗುಡಿಯೊಳಗೆ ಕಳ್ಳರಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬೆರಳಚ್ಚು ತಜ್ಞರು ಮತ್ತು ಶ್ವಾನದಳದವರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ

ವ್ಯಕ್ತಿಯ ಸೆರೆ
ಕುಂದಾಪುರ, ಜೂ.20: ಬಸ್ರೂರು ಬಸ್ ನಿಲ್ದಾಣದ ಬಳಿ ಜೂ.20ರಂದು ರಾತ್ರಿ ಮೂರು ಗಂಟೆ ಸುಮಾರಿಗೆ ಅನು ಮಾನಾಸ್ಪದವಾಗಿ ತಿರುಗಾಡುತ್ತಿದ್ದ ಉಡುಪಿ ಕಿದಿಯೂರಿನ ವಿಜಯ್ ಕುಮಾರ್ ಪೂಜಾರಿ(25)ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X