ಅತ್ಯಾಚಾರ ಕುರಿತ ಸಲ್ಮಾನ್ ಹೇಳಿಕೆ ತಪ್ಪು: ಸಲೀಂ ಖಾನ್

ಮುಂಬೈ: `ಸುಲ್ತಾನ್' ಚಿತ್ರದ ತನ್ನ ಕುಸ್ತಿ ಪಟುವಿನ ಪಾತ್ರದ ಶೂಟಿಂಗ್ ನಲ್ಲಿ ಭಾಗವಹಿಸಿ ಹೊರನಡೆಯುವಾಗ ತನಗೆ `ಅತ್ಯಾಚಾರಕ್ಕೀಡಾದ ಮಹಿಳೆಯ' ಸ್ಥಿತಿ ಅನುಭವಿಸುವಂತೆ ಮಾಡಿದೆಯೆಂಬ ನಟ ಸಲ್ಮಾನ್ ಖಾನ್ ಹೇಳಿಕೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿರುವಂತೆಯೇ ಖ್ಯಾತ ಚಿತ್ರಕಥೆ ರಚನಾಕಾರ ಹಾಗೂ ಸಲ್ಮಾನ್ ತಂದೆ ಸಲೀಂ ಖಾನ್ ಟ್ವಿಟ್ಟರ್ ಮುಖಾಂತರ ತನ್ನ 50 ವರ್ಷದ ಮನಗ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
``ಸಲ್ಮಾನ್ ಹೇಳಿದ್ದು ನಿಸ್ಸಂಶಯವಾಗಿ ತಪ್ಪು. ಅದರ ಉದ್ದೇಶವೂ ತಪ್ಪು,'' ಎಂಬರ್ಥ ನೀಡುವ ಟ್ವೀಟನ್ನು ಸಲೀಂ ಖಾನ್ ಮಾಡಿದ್ದರೆ ಇನ್ನೊಂಡು ಟ್ವೀಟ್ ನಲ್ಲಿ `ಸಲ್ಮಾನ್ ಕುಟುಂಬ, ಅಭಿಮಾನಿಗಳು ಹಾಗೂ ಗೆಳೆಯರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ. ಕ್ಷಮಾಶೀಲತೆ ಅಕ್ಷಮ್ಯವಾದುದನ್ನೂ ಕ್ಷಮಿಸುವಂಥಹದ್ದು ಹಾಗಿಲ್ಲದಿದ್ದಲ್ಲಿ ಅದು ಒಂದು ಉತ್ತಮ ಗುಣ ಅಲ್ಲವೇ ಅಲ್ಲ,'' ಎಂದು ಹೇಳಿ ಇನ್ನೊಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಹೇಳಿಕೆಗಾಗಿ ಸಲ್ಮಾನ್ ಒಂದು ವಾರದೊಳಗೆ ಕ್ಷಮೆಯಾಚಿಸಬೇಕು ಇಲ್ಲವೇ ವಿವರಣೆ ನೀಡಲು ಅವರಿಗೆ ಸಮನ್ಸ್ ಕಳುಹಿಸಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಈಗಾಗಲೇ ಹೇಳಿದೆ.
``ಶೂಟಿಂಗ್ ನಂತರ ರಿಂಗ್ ನಿಂದ ಹೊರ ನಡೆಯುವಾಗ ರೇಪ್ ಮಾಡಲ್ಪಟ್ಟ ಯುವತಿಯಂತೆ ನನಗಾಗುತ್ತದೆ,''ಎಂದು ಶನಿವಾರ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದ್ದರು.
ಪತ್ರಕರ್ತರೊಂದಿಗಿನ ಈ ಸಂವಾದದ ಆಡಿಯೋದಲ್ಲಿ ಸಲ್ಮಾನ್ ಹಾಗೆ ಹೇಳಿದಾಗ ಕೆಲವರು ನಗುವುದು ಕೇಳಿಸುತ್ತದೆ ಹಾಗೂ ನಂತರ ಸಲ್ಮಾನ್ ``ನನಗನಿಸುತ್ತದೆ ನಾನು ಹಾಗೆ...'' ಎಂದು ಹೇಳುತ್ತಿರುವುದು ಕೇಳಿ ಬಂದಿದೆ. ಇಂದು ರಾತ್ರಿ ಮ್ಯಾಡ್ರಿಡ್ ಗೆ ತೆರಳುವ ಮುನ್ನ ಅವರು ಕ್ಷಮೆಯಾಚಿಸಲಿದ್ದಾರೆಂದು ಸಲ್ಮಾನ್ ಹತ್ತಿರದ ಮೂಲಗಳು ತಿಳಿಸಿವೆ.
ಸಲ್ಮಾನ್ ಅವರು ತಮ್ಮ ವಿವಾದಾತ್ಮಕ ಸಂದರ್ಶನದಲ್ಲಿ ತಾವು ಮಹಿಳೆಯರನ್ನು ಬಿಟ್ಟು ಎಲ್ಲಾ ಕೆಟ್ಟ ಹವ್ಯಾಸಗಳನ್ನು ತೊರೆದಿರುವುದಾಗಿ ಹೇಳಿದರು ``ನಾನು ಸಿಗರೇಟ್, ಕಾಫಿ, ಆಲ್ಕೋಹಾಲ್ ತೊರೆದಿದ್ದೇನೆ ಆದರೆ ಮಹಿಳೆಯರ ಗೆಳೆತನವಲ್ಲ. ``ಇನ್ನು ಬಿಟ್ಟು ಬಿಡಲು ಏನೂ ಉಳಿದಿಲ್ಲ,'' ಎಂದು ಹೇಳಿದ್ದರು.
ಸಲ್ಮಾನ್ ಅವರ `ಸುಲ್ತಾನ್' ಈದ್ ಸಂದರ್ಭ ಬಿಡುಗಡೆಯಾಗಲಿದೆ.







