ಸೂರಿಕುಮೇರು ಹೈಮಾಸ್ಟ್ ದೀಪ ಉದ್ಘಾಟನೆ ಎಂದು..?

ಮಾಣಿ: ರಾಷ್ಟ್ರೀಯ ಹೆದ್ದಾರಿ ಮಾಣಿ ಗ್ರಾಮ ಪಂಚಾಯತ್ ಗೊಳಪಟ್ಟ ಸೂರಿಕುಮೇರು ಎಂಬಲ್ಲಿ ನಾಗರಿಕರ ಬಹುಕಾಲದ ಬೇಡಿಕೆಯಾದ ಹೈಮಾಸ್ಟ್ ದೀಪ ಅಳವಡಿಕೆಯಾಗಿ ಎರಡು ತಿಂಗಳು ಕಳೆದರೂ ಉದ್ಘಾಟನೆಗೊಂಡಿಲ್ಲ. ಹೈಮಾಸ್ಟ್ ದೀಪವೇ ಕತ್ತಲಲ್ಲಿ ದಿನದೂಡುತ್ತಿವೆ.
ಮಳೆಗಾಲದಲ್ಲಾದರೂ ಸೂರಿಕುಮೇರು ಬೆಳಕು ಕಾಣಲಿ ಎಂದು ಆಶಿಸಿದ್ದ ಜನತೆಗೆ ಉದ್ಘಾಟನೆಯಾಗದ ಕಾರಣ ಉರಿಸಲಾಗುತ್ತಿಲ್ಲ.
ಮಾಣಿ ಗ್ರಾಮ ಪಂಚಾಯತ್ ನ ಈ ವಿಳಂಬ ನೀತಿಯಿಂದ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬರುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ರಾತ್ರಿ ವೇಳೆ ಕತ್ತಲಲ್ಲಿರುವ ಸೂರಿಕುಮೇರು ಹೈಮಾಸ್ಟ್ ದೀಪವನ್ನು ಉದ್ಘಾಟನೆ ಮಾಡುವ ಮೂಲಕ ಬೆಳಗಿಸಲಿ.
Next Story





