ಉಳ್ಳಾಲ: ಬೀಫ್ ಅಂಗಡಿಗೆ ನುಗ್ಗಿ ತಂಡದಿಂದ ಯುವಕನ ಮೇಲೆ ಹಲ್ಲೆ
ಉಳ್ಳಾಲ, ಜೂ.21: ಉಳ್ಳಾಲದ ಮಾಸ್ತಿ ಕಟ್ಟೆಯಲ್ಲಿ ಬೀಫ್ ಅಂಗಡಿಗೆ ನುಗ್ಗಿದ ನಾಲ್ಕು ಯುವಕರು ಪಾರಿವಾಳಗಳನ್ನು ನಾವು ಕದ್ದಿದ್ದೇವೆಂದು ಎಲ್ಲರಲ್ಲೂ ಪ್ರಚಾರ ಮಾಡುತ್ತೀಯ ಎಂದು ಅವಾಚ್ಯ ಶಬ್ದಗಳಿಂದ ಸ್ಟಾಲ್ ಮಾಲಕನನ್ನು ನಿಂದಿಸಿ ಕೈ ಕಾಲುಗಳಿಂದ ಹಲ್ಲೆಗೈದು ಕುತ್ತಿಗೆಗೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ ಘಟನೆ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಸಂಭವಿಸಿದೆ.
ಮದನಿನಗರ ನಿವಾಸಿ ಮುಹಮ್ಮದ್ ಕಮಲುದ್ದೀನ್(22)ತಂಡದಿಂದ ಹಲ್ಲೆಗೊಳಗಾದ ಯುವಕ. ಕಮಲುದ್ದೀನ್ ಸೋಮವಾರ ಸಂಜೆ ಬೀಫ್ ಸ್ಟಾಲ್‌ನಲ್ಲಿ ಇದ್ದ ವೇಳೆ ಏಕಾಏಕಿ ಒಳನುಗ್ಗಿದ ಮದನಿನಗರದ ನಿವಾಸಿಗಳಾದ ನಿಝಾರ್,ಮುಖ್ತಾರ್, ಜಲ್ದಿ ಅರ್ಫಾನ್, ಜಾಫರ್ ಎಂಬ ನಾಲ್ವರು ಕಮಲುದ್ದೀನ್‌ನಲ್ಲಿ ಸುಂದರಿಬಾಗ್‌ನ ಪಾರಿವಾಳಗಳನ್ನು ನಾವು ಕದ್ದದ್ದೆಂದು ಪ್ರಚಾರ ಮಾಡುತ್ತೀಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕ ಹಲ್ಲೆಗೈದಿದ್ದು, ಅರ್ಫಾನ್ ಎಂಬ ಆರೋಪಿ ತನ್ನ ಬಳಿಯಿದ್ದ ಚೂರಿಯಿಂದ ಕಮಲುದ್ದೀನ್‌ನ ಕತ್ತಿಗೆ ಇರಿಯಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.





