Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈ: ದಾರುನ್ನೂರ್ ಯೂತ್ ಟೀಂನ ಲೋಗೊ...

ದುಬೈ: ದಾರುನ್ನೂರ್ ಯೂತ್ ಟೀಂನ ಲೋಗೊ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ21 Jun 2016 8:22 PM IST
share
ದುಬೈ: ದಾರುನ್ನೂರ್ ಯೂತ್ ಟೀಂನ ಲೋಗೊ ಬಿಡುಗಡೆ

ದುಬೈ, ಜೂ.21: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಮೂಡುಬಿದಿರೆ ಇದರ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ದಾರುನ್ನೂರ್ ಯೂತ್ ಟೀಮ್ನ ನೂತನ ಲೋಗೊ ಬಿಡುಗಡೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಖಾಝಿ, ಸಮಸ್ತ ಕೇಂದ್ರ ಮುಶಾವರ, ದಾರುನ್ನೂರ್ ಎಜುಕೇಷನ್ ಸೆಂಟರ್ನ ಶಿಲ್ಪಿಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿಯವರಿಗೆ ಸನ್ಮಾನ ಸಮಾರಂಭ ದೇರಾದ ರಾಫಿ ಹೋಟೆಲ್ ಆಡಿಟೋರಿಯಂನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸೈಯದ್ ಅಸ್ಕರ್ ಅಲಿ ತಂಙಳ್ ಉದ್ಘಾಟಿಸಿದರು. ಉಸ್ತಾದ್ ಶಾಜಹಾನ್ ರಹ್ಮಾನಿಯವರನ್ನು ದಾರುನ್ನೂರ್ ಯೂತ್ ಟೀಮ್ನ ಅದ್ಯಕ್ಷ ಸಂಶೀರ್ ಬಾಂಬಿಲ, ಗೌರವಾದ್ಯಕ್ಷ ಇಮ್ರಾನ್ ಮಜಿಲೋಡಿ, ಪ್ರಧಾನ ಕಾರ್ಯದರ್ಶಿ ಸಫಾ ಇಸ್ಮಾಯೀಲ್ ಬಜ್ಪೆಮತ್ತಿತರರು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಅವರು, ದಾರುನ್ನೂರ್ ಒಂದು ದೊಡ್ಡ ವಿಶ್ವವಿದ್ಯಾನಿಲಯವಾಗಿ ಶೀಘ್ರವೇ ಮಾರ್ಪಡಲಿ ಎಂದು ಶುಭಹಾರೈಸಿದರು. 

ಬಳಿಕ ದಾರುನ್ನೂರ್ ಯೂತ್ ಟೀಮ್ ಸಮಿತಿಯ ಹೊಸ ಲೋಗೊವನ್ನು ಶೈಖುನ ತ್ವಾಕಾ ಉಸ್ತಾದ್ ಬಿಡುಗಡೆಗೊಳಿಸಿದರು. ವಿನ್ಯಾಸಕ್ಕೆ ಶ್ರಮಿಸಿದ ರಿಯಾಝ್ ಪಟ್ಟಾಡಿಯವರನ್ನು ಶೈಖುನಾ ಉಸ್ತಾದರು ಅಭಿನಂದಿಸಿದರು. ಬಳಿಕ ದಾರುನ್ನೂರ್ ಯುಎಇ ರಾಷ್ಟ್ರೀಯ ಸಮಿತಿ ಮತ್ತು ಕೆಐಸಿ ಕೇಂದ್ರ ಸಮಿತಿ ವತಿಯಿಂದ ಶೈಖುನ ತ್ವಾಕಾ ಉಸ್ತಾದರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶೈಖುನಾ ತ್ವಾಕಾ ಉಸ್ತಾದರು, ದಾರುನ್ನೂರ್ ಯುಎಇಯಲ್ಲಿ ನಡೆಸುತ್ತಿರುವ ಕಾರ್ಯ ವೈಖರಿ ಶ್ಲಾಘನೀಯವಾಗಿದ್ದು ಮಸೀದಿ ಮತ್ತು ವನಿತಾ ವಿದ್ಯಾಲಯ ಕಾರ್ಯರೂಪಕ್ಕೆ ಬರಲು ಯುಎಇ ಸಮಿತಿ ಪ್ರಮುಖ ಪಾತ್ರ ವಹಿಸುತ್ತಿದ್ದು ಇದಕ್ಕೆ ತಕ್ಕ ಪ್ರತಿಫಲವನ್ನು ಅಲ್ಲಾಹು ನೀಡಲಿ ಎಂದು ಪ್ರಾರ್ಥಿಸಿದರು. ದಾರುನ್ನೂರ್ ನನ್ನ ಸ್ವಪ್ರಯತ್ನದ ಫಲವಾಗಿದ್ದು ಇದಕ್ಕಾಗಿ ನಾನು ಎಷ್ಟು ಬೇಕಾದರೂ ಓಡಾಡಲು ಸಿದ್ಧ. ಶಹೀದ್ ಸಿಎಂ ಉಸ್ತಾದ್ ಫೌಂಡೇಶನ್ ವತಿಯಿಂದ ರಾಜ್ಯದಾದ್ಯಂತ ಇಂತಹ ವಿದ್ಯಾಕೇಂದ್ರಗಳ ನಿರ್ಮಾಣಕ್ಕಾಗಿ ಶ್ರಮಿಸುವುದಾಗಿ ಹೇಳಿದರು.

ಅಧ್ಯಕ್ಷ ಸಲೀಂ ಅಲ್ತಾಫ್ ಮಾತನಾಡಿ, ಈ ವರ್ಷ ಕಟ್ಟಡದ ಎರಡನೆ ಸ್ಲಾಬ್ ಕಾರ್ಯ ಪೂರ್ತಿಗೊಳ್ಳಲಿದ್ದು, ಮಸೀದಿ ಕೆಲಸ ನಡೆಯುತ್ತಿದೆ. ರಮಝಾನಿನ ಬಳಿಕ ವನಿತಾ ವಿದ್ಯಾಲಯದ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ಸಲೀಂ ಅಲ್ತಾಫ್ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಸ್ತಾದ್ ಶಾಜಹಾನ್ ರಹ್ಮಾನಿ ಕಂಬ್ಲಕ್ಕಾಡ್, ದಾರುನ್ನೂರ್ ಯುಎಇನ ಪೋಷಕ ಬಶೀರ್ ಬಂಟ್ವಾಳ್, ದಾರುನ್ನೂರ್‌ನ ಗೌರವಾಧ್ಯಕ್ಷ ಹಾಜಿ ಮೊಯ್ದೀನ್ ಕುಟ್ಟಿ ಕಕ್ಕಿಂಜೆ, ಸೈಯದ್ ಅಸ್ಕರ್ ಅಲಿ ತಂಙಳ್, ಉಸ್ತಾದ್ ಶೌಕತ್ ಹುದವಿ, ಉಸ್ತಾದ್ ಸಿದ್ದೀಕ್ ಅಸ್ ಅದಿ, ಕೆಐಸಿ ಕಾರ್ಯಾಧ್ಯಕ್ಷ ಶರೀಫ್ ಕಾವು, ಉಸ್ತಾದ್ ಶರೀಫ್ ಅಶ್ರಫಿ ಮಡಂತ್ಯಾರ್, ಉಸ್ತಾದ್ ಶಂಸುದ್ದೀನ್ ಹನೀಫಿ ಮರ್ಧಾಳ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಸ್ವಾಗತಿಸಿದರು. ಸಮೀರ್ ಇಬ್ರಾಹೀಂ ಕಲ್ಲರೆ ವಂದಿಸಿದರು.

ಅಬ್ದುಲ್ ಸಲಾಂ ಬಪ್ಪಳಿಗೆ, ಮುಹಮ್ಮದ್ ರಫೀಕ್ ಸುರತ್ಕಲ್, ಸಂಶುದ್ದೀನ್ ಸೂರಲ್ಪಾಡಿ, ಅನ್ಸಾಫ್ ಪಾತೂರು, ಉಸ್ಮಾನ್ ಕೆಮ್ಮಿಂಜೆ, ಇಲ್ಯಾಸ್ ಕಡಬ , ಕೆ. ಹನೀಫ್ ಮೂಡುಬಿದಿರೆ, ನವಾಝ್ ಬಿ.ಸಿ ರೋಡ್, ಸಾಜಿದ್ ಬಜ್ಪೆ, ಮುಹಮ್ಮದ್ ಮಾಡಾವು, ಮುಹಮ್ಮದ್ ಮುಶ್ತಾಕ್ ತೋಡಾರು, ಅಬ್ದುರ್ರಹ್ಮಾನ್ ಬಾಳಿಯೂರ್, ಸುಲೈಮಾನ್ ಗಡಿಯಾರ್ ಮತ್ತಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X