ಮೂಡುಬಿದಿರೆ: ಆಳ್ವಾಸ್ ವಿದ್ಯಾರ್ಥಿಗಳಿಂದ ‘ಯೋಗ ಪ್ರದರ್ಶನ’
.jpg)
ಮೂಡುಬಿದಿರೆ, ಜೂ.21: 2ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆ ಪದವಿನಲ್ಲಿರುವ ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಮುಂಜಾನೆ 950 ಮಂದಿ ವಿದ್ಯಾರ್ಥಿಗಳು ‘ಯೋಗ ಪ್ರದರ್ಶನ’ ನಡೆಸಿಕೊಟ್ಟರು.
ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿದರು.
ಆಳ್ವಾಸ್‌ನ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಾದ ಡಾ.ವನಿತಾ ಶೆಟ್ಟಿ (ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ), ಡಾ.ಬಿ.ಎ. ಯತಿ ಕುಮಾರ ಸ್ವಾಮಿ ಗೌಡ (ನರ್ಸಿಂಗ್), ಡಾ.ಕುರಿಯನ್ (ಪದವಿ ಕಾಲೇಜು), ಡಾ.ಇಟಗಿ (ಹೋಮಿಯೋಪತಿ), ಡಾ.ವಿನಯಚಂದ್ರ ಶೆಟ್ಟಿ (ಆಯುರ್ವೇದ), ಪ್ರೌಢಶಾಲಾ ಮುಖ್ಯಶಿಕ್ಷಕರಾದ ವಸಂತಕುಮಾರ್ ನಿಟ್ಟೆ, ಪ್ರಶಾಂತ್ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಉಮಾ ಉಪಸ್ಥಿತರಿದ್ದರು.
ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಲವಿಟಾ ನಿರೂಪಿಸಿದರು.
Next Story





