ನಿರೀಕ್ಷಿತ ಫಲಿತಾಂಶ ಪಡೆಯದಕ್ಕೆ ಉದ್ಯೋಗಿಗಳ ಪೃಷ್ಠಕ್ಕೆ ಬಾರಿಸಿದ ತರಬೇತುದಾರ ! :ವೈರಲ್ ವೀಡಿಯೊ
ಬೀಜಿಂಗ್ , ಜೂ 21 : ಕೆಲಸದಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಬ್ಯಾಂಕ್ ಉದ್ಯೋಗಿಗಳನ್ನು ವೇದಿಕೆಯಲ್ಲಿ ನಿಲ್ಲಿಸಿ ಹೀನಾಯವಾಗಿ ಪೃಷ್ಠಕ್ಕೆ ಥಳಿಸುವ ಆಘಾತಕಾರಿ ವೀಡಿಯೋವೊಂದು ಚೀನಾದಿಂದ ಬಹಿರಂಗವಾಗಿದೆ. ಈ ವೀಡಿಯೊ ವೈರಲ್ ಆಗಿದ್ದು , ಭಾರೀ ಆಕ್ರೋಶ ವ್ಯಕ್ತವಾಗಿದೆ. ಚಾಂಗ್ ಜೀ ರೂರಲ್ ಕಮರ್ಷಿಯಲ್ ಬ್ಯಾಂಕ್ ನ ತರಬೇತುದಾರನೊಬ್ಬ ಉದ್ಯೋಗಿಗಳ ಬಳಿ ಕೆಲಸದಲ್ಲಿ ನಿರೀಕ್ಷಿತ ಪ್ರದರ್ಶನಕ್ಕೆ ಕಾರಣ ಕೇಳಿ ಬಳಿಕ ದಪ್ಪದ ಕೋಲೊಂದರಿಂದ ಅವರ ಪೃಷ್ಠಕ್ಕೆ ಸತತ ನಾಲ್ಕು ಬಾರಿ ಬಾರಿಸುವ ಆಘಾತಕಾರಿ ವೀಡಿಯೊ ಬಹಿರಂಗವಾಗಿದೆ. ಈ ಉದ್ಯೋಗಿಗಳ ಪೈಕಿ ನಾಲ್ವರು ಮಹಿಳೆಯರು ಎಂಬುದು ಇನ್ನಷ್ಟು ಆತಂಕದ ವಿಷಯವಾಗಿದೆ. ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಲೇ ತರಬೇತುದಾರ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾನೆ. ಬ್ಯಾಂಕ್ ಅಧ್ಯಕ್ಷರನ್ನು ಅಮಾನತು ಮಾಡಲಾಗಿದೆ.
Next Story





