Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಾಂಪ್ರದಾಯಿಕ ಸ್ವಾಮಿಗಳ ಅಂತರಂಗ...

ಸಾಂಪ್ರದಾಯಿಕ ಸ್ವಾಮಿಗಳ ಅಂತರಂಗ ಶುದ್ಧಿಯಾಗಬೇಕಿದೆ: ನಿಡುಮಾಮಿಡಿ ಶ್ರೀ

ವಾರ್ತಾಭಾರತಿವಾರ್ತಾಭಾರತಿ21 Jun 2016 11:06 PM IST
share
ಸಾಂಪ್ರದಾಯಿಕ ಸ್ವಾಮಿಗಳ ಅಂತರಂಗ ಶುದ್ಧಿಯಾಗಬೇಕಿದೆ: ನಿಡುಮಾಮಿಡಿ ಶ್ರೀ

ಬೆಂಗಳೂರು, ಜೂ. 21: ಸಂವಿಧಾನವನ್ನು ವಿರೋಧಿಸುವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೌಲ್ಯಗಳಿಲ್ಲ ಎಂದು ಪ್ರತಿ ಪಾದಿಸಿ, ಊಳಿಗಮಾನ್ಯ ಪದ್ಧತಿ ಮತ್ತು ಹಿಂದಿನ ಕಾಲದ ಅನಿಷ್ಟ ಪದ್ಧತಿಗಳಲ್ಲಿ ನಂಬಿಕೆ ಇಟ್ಟಿರುವ ಸಾಂಪ್ರಾದಾಯಿಕ ಸ್ವಾಮಿಗಳ ಅಂತರಂಗ ಶುದ್ಧಿಯಾಗದ ಹೊರತು ಸಮಾಜ ಶುದ್ಧಿಯಾಗದು ಎಂದು ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದ ನಿಡುಮಾಮಿಡಿ ಮಠದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆ ಆಯೋಜಿಸಿದ್ದ ‘ಮಠಾ ಧೀಶರು ವಿಮರ್ಶೆಗೆ ಅತೀತರೇ’ ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 ಮಠಗಳು ಮುಕ್ತವಾದ ಆಲೋಚನೆ ಉದಾರವಾದ ಮನೋಭಾವನೆಗಳನ್ನು ಹೊಂದಿಲ್ಲದ ಕಾರಣ ಸಮಾಜದಲ್ಲಿ ಸುಧಾರಣೆ ತರಲು ಹಿನ್ನೆಡೆಯಾಗುತ್ತಿದೆ. ಕೆಲ ಮಠಗಳು ಆಂತರಿ ಕವಾಗಿ ಅನಿಷ್ಟ ಪದ್ಧತಿಗಳನ್ನು ಈಗಲೂ ಆರಾಧಿಸುತ್ತಿದ್ದಾರೆ. ತೋರಿಕೆಗೆ ಮಾತ್ರ ಸ್ವಚ್ಛಂದ ವ್ಯಕ್ತಿತ್ವ ಹೊಂದಿರುವ ಸ್ವಾಮೀಜಿಗಳು ಎಂದು ಗುರಿತಿಸಿಕೊಳ್ಳುತ್ತಿದ್ದಾರೆ. ಇಂತಹ ಮನೋಭಾವನೆಗಳು ಬದಲಾವಣೆಯಾಗದ ಹೊರತು ಸಮಾಜ ಸುಧಾರಣೆಯು ಮುನ್ನೆಲೆಗೆ ಬರುವುದಿಲ್ಲ ಎಂದರು.
ನಾಲ್ಕು ದಶಕಗಳ ಹಿಂದಿನ ಮಠಗಳು ತ್ಯಾಗ, ಬಲಿದಾನ ಸೇರಿದಂತೆ, ಭಿಕ್ಷೆ ಬೇಡಿ ಸಮಾಜಕ್ಕೆ ತ್ರಿವಿಧ ದಾಸೋಹ ಮಾಡು ತ್ತಿದ್ದರು. ಆದರೆ ಹುಸಿ ವೌಲ್ಯಗಳನ್ನು ಆರಾಧಿಸುವ ಮೂಲಕ ಈಗಿನ ಮಠಗಳು ಆತ್ಮವಂಚನೆ ಮಾಡಿಕೊಳ್ಳುತ್ತಿವೆ. ತ್ಯಾಗದ ಸ್ಥಳದಲ್ಲಿ ಭೋಗ ಕುಳಿತಿದೆ. ಇಂದು ಸಾತ್ವಿಕರು ಸಮಾಜಕ್ಕೆ ಏನಾದ ರೊಂದು ಸಂದೇಶ ಹೇಳಬೇಕೆಂದು ಹೊರಟರೆ ಇಡೀ ಸಮಾ ಜವೇ ತಿರುಗಿ ಬೀಳುತ್ತದೆ. ಹಾಗಾಗಿ ಅಂತಹ ಸಂದೇಶಗಳು ಅವರಲ್ಲೇ ಉಳಿದುಕೊಂಡುಬಿಡುತ್ತವೆ ಎಂದು ಬೇಸರ ವ್ಯಕ್ತಪ ಡಿಸಿದರು.
ದೊಡ್ಡ ಸ್ವಾಮಿಗಳಿಂದ ಕಪ್ಪು ಹಣ ಪೋಷಣೆ: ವೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಮಠಗಳು ಹಣವೆಂಬ ಭೂತದ ಬೆನ್ನ ಹಿಂದೆ ಬಿದ್ದಿವೆ. ಕೆಲವು ದೊಡ್ಡ ದೊಡ್ಡ ಸ್ವಾಮೀಜಿಗಳು ಕಪ್ಪುಹಣ ಪೋಷಣೆಯಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ಈ ಬಂಡವಾಳಶಾಹಿ ಮಠಗಳೇ ಇಂದು ರಾಜಕೀಯ ಮತ್ತು ಓಟ್‌ಬ್ಯಾಂಕ್ ನಿರ್ಧರಿಸುತ್ತಿವೆ ಎಂದು ಆತಂಕಪಟ್ಟರು.
ಎಡೆಯೂರು ತೋಂಟದಾರ್ಯ ಮಠದ ಡಾ.ತೋಂಟ ದಾರ್ಯ ಮಹಾಸ್ವಾಮಿ ಮಾತನಾಡಿ, ಸಾಂಪ್ರದಾಯಿಕ ಮಠ ಗಳಲ್ಲಿ ಸಾಕಷ್ಟು ಬದಲಾವಣೆಯಾ ಗಬೇಕಿದೆ. ಮಠಗಳು ಸಮಾನತೆಯನ್ನು ಎತ್ತಿಹಿಡಿಯುವ ಕೆಲಸ ಆಗಬೇಕಿದೆ. ಪಾದ ಪೂಜೆ ಸೇರಿದಂತೆ ಇತರೆ ಅನಿಷ್ಟ ಆಚರಣೆಗಳ ಕಶ್ಮಲತೆಯನ್ನು ತೊಳೆಯಬೇಕು ಎಂದು ಕರೆ ನೀಡಿದರು.
 ಆಧುನಿಕ ದಿನಮಾನಗಳಲ್ಲಿ ಯುವ ಸ್ವಾಮೀಜಿಗಳಿಗೆ ಅಪ ವಾದ ತಪ್ಪಿದ್ದಲ್ಲ. ಹೀಗಾಗಿ ಯುವ ಸ್ವಾಮೀಜಿಗಳು ಹೆಚ್ಚು ಜಾಗೃತ ರಾಗಿರಬೇಕು. ಮೊದಲು ಕಾಮವನ್ನು ನಿಗ್ರಹಿಸಲು ಕಠಿಣ ಧ್ಯಾನ ಮಾಡಬೇಕಿದೆ. ಈ ಮೂಲಕ ಸ್ವಾಮಿಗಳು ಕಾಮದಲ್ಲಿ ಸಂಶಯಾ ತೀತರಾಗಿರುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಯುವ ಸ್ವಾಮೀಜಿಗಳಿಗೆ ಕಿವಿ ಮಾತು ಹೇಳಿದರು.
ನಾಗಲೂರು ರುದ್ರಾಕ್ಷಿ ಮಠಾಧ್ಯಕ್ಷರಾದ ಸಿದ್ದರಾಮ ಮಹಾ ಸ್ವಾಮೀಜಿ, ಹಿರೇಮಠ ಸಂಸ್ಥಾನ ಮಠಾಧ್ಯಕ್ಷರಾದ ಡಾ. ಬಸವ ಲಿಂಗ ಪಟ್ಟಾಧ್ಯಕ್ಷ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.


ಆಯುರ್ವೇದ ಮತ್ತು ಯೋಗವನ್ನು ದೊಡ್ಡ ಉದ್ಯಮ ಮಾಡಿಕೊಂಡಿರುವ ಬಾಬಾ ರಾಮ್‌ದೇವ್ ಇಂದು 15 ಸಾವಿರ ಕೋಟಿ ರೂ.ಗಳ ಒಡೆಯ. ಅಲ್ಲದೆ, ಸರಕಾರಕ್ಕೆ ಇದುವರೆಗೂ ನಯಾಪೈಸೆ ತೆರಿಗೆಯನ್ನು ಪಾವತಿಸದೆ ವಂಚನೆ ಮಾಡಿದ್ದಾರೆ. ದೊಡ್ಡ ಸ್ವಾಮಿಗಳು ಎಂದು ಗುರುತಿಸಿಕೊಂಡಿರುವವರು ಇಂದು ಉದ್ಯಮಿಗಳು, ದೊಡ್ಡ ಕಾರುಗಳು, ಹೆಲಿಕ್ಯಾಪ್ಟರ್‌ಗಳ ಮಾಲಕರಾಗಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಗಳಿಗೆೆ ಕರೆಯಿಸಿಕೊಂಡು ಮೆರೆಯುತ್ತಿದ್ದಾರೆ. ಸಂವಿಧಾನ ಮತ್ತು ನ್ಯಾಯಾಲಯವನ್ನೇ ನಿಯಂತ್ರಿಸುವ ಮಟ್ಟಕ್ಕೆ ಸ್ವಾಮಿಗಳು ಬೆಳೆದಿದ್ದಾರೆ.

- ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X