Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಮ್‌ದೇವ್‌ಗೆ ಅರಾವಳಿಯಲ್ಲಿ ಸಾವಿರ ಎಕರೆ...

ರಾಮ್‌ದೇವ್‌ಗೆ ಅರಾವಳಿಯಲ್ಲಿ ಸಾವಿರ ಎಕರೆ ನಿವೇಶನ?

ವಾರ್ತಾಭಾರತಿವಾರ್ತಾಭಾರತಿ21 Jun 2016 11:24 PM IST
share
ರಾಮ್‌ದೇವ್‌ಗೆ ಅರಾವಳಿಯಲ್ಲಿ ಸಾವಿರ ಎಕರೆ ನಿವೇಶನ?

ಹೊಸದಿಲ್ಲಿ, ಜೂ.21: ಯೋಗಗುರು ರಾಮ್‌ದೇವ್ 1 ಸಾವಿರ ಎಕರೆ ವಿಸ್ತೀರ್ಣದಲ್ಲಿ ಹರಡಲಿರುವ ದೊಡ್ಡ ಯೋಜನೆಯೊಂದರ ಘೋಷಣೆಯನ್ನು ಮಂಗಳವಾರ ಫರಿದಾಬಾದ್‌ನಲ್ಲಿ ಮಾಡುವ ನಿರೀಕ್ಷೆಯಿದೆ. ಫರಿದಾಬಾದ್‌ನ ಅರಾವಳಿ ಪರ್ವತಗಳಲ್ಲಿರುವ ಕೋಟ್ ಗ್ರಾಮದಲ್ಲಿ ಪತಂಜಲಿ ಗುಂಪಿನ ಸ್ಥಾಪಕ ಭಾರೀ ಪ್ರಮಾಣದ ಭೂಮಿಯನ್ನು ಪಡೆದಿದ್ದಾರೆ. ಅಲ್ಲಿ ಯೋಗದ ಕುರಿತಾದ ಬೃಹತ್ ಸಂಸ್ಥೆ ಅಥವಾ ಆರೋಗ್ಯ ನಿಗಾ ವ್ಯವಸ್ಥೆ ಮೇಲೇಳುವ ಸಾಧ್ಯತೆಯಿದೆ.

ರಾಮ್‌ದೇವ್‌ರ ವಕ್ತಾರ ಈ ಸಂಬಂಧ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
‘‘ಅವಸರವೇನು? ಮಂಗಳವಾರ ಘೋಷಣೆಯಾಗುವವರೆಗೂ ನೀವು ಕಾಯಬೇಕು. ರಾಮ್‌ದೇವ್ ಫರಿದಾಬಾದ್‌ನಲ್ಲಿ ದೊಡ್ಡ ಯೋಗ ಕಾರ್ಯಕ್ರಮವೊಂದನ್ನು ನಡೆಸಲಿದ್ದಾರೆ. ಅದರಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಖ್ಯ ಅಭ್ಯಾಗತರಾಗಲಿದ್ದಾರೆ’’ ಎಂದು ಅವರು ಹೇಳಿದ್ದಾರೆ. ಫರಿದಾಬಾದ್‌ನ ಯೋಗ ಶಿಬಿರದಲ್ಲಿ 7 ವಿಶ್ವ ದಾಖಲೆಗಳನ್ನು ಸ್ಥಾಪಿಸಲಾಗುವುದೆಂದು ಅಧಿಕೃತ ಆಹ್ವಾನಪತ್ರ ತಿಳಿಸಿದೆ.
ಈ ವರ್ಷದ ಆರಂಭದಲ್ಲಿ, ‘ಹ್ಯಾಪನಿಂಗ್ ಹರ್ಯಾಣ’ ಕಾರ್ಯಕ್ರಮದಲ್ಲಿ ಮಾತನಾಡುತ್ತ ರಾಮ್‌ದೇವ್, ರೂ. 5 ಸಾವಿರ ಕೋಟಿ ಬಂಡವಾಳದಲ್ಲಿ ಒಂದು ವಿಶ್ವವಿದ್ಯಾನಿಲಯ ಹಾಗೂ ಒಂದು ಅಂತಾರಾಷ್ಟ್ರೀಯ ಆರೋಗ್ಯ ನಿಗಾ ಕೇಂದ್ರದ ಸ್ಥಾಪನೆಯನ್ನು ಘೋಷಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು.

ಸುಪ್ರೀಂ ಕೋರ್ಟ್ 2012ರಲ್ಲಿ ನೀಡಿದ್ದ ತೀರ್ಪೊಂದರನ್ವಯ ಕೋಟ್ ಹಾಗೂ ಅರಾವಳಿಯ ಇತರ ಗ್ರಾಮಗಳ ರಿಜಿಸ್ಟ್ರಿಯನ್ನು ಜಿಲ್ಲಾಧಿಕಾರಿ ಕೆಲವು ವರ್ಷಗಳಿಗೆ ಅಮಾನತುಗೊಳಿಸಿದ್ದರು. ಆದಾಗ್ಯೂ, 2014-15ರಲ್ಲಿ ಅನೇಕ ಭೂ ನೋಂದಣಿಗಳು ನಡೆದಿರುವುದು ತಿಳಿದುಬಂದಿದೆ. ಕೋಟ್ ಗ್ರಾಮದ ಜಮೀನು ಕ್ರೋಡೀಕರಣವನ್ನು 2012ರಲ್ಲಿ ನಿಲ್ಲಿಸಲಾಗಿತ್ತು. ಅದು 2013ರಲ್ಲಿ ಪುನರಾರಂಭ ಗೊಂಡಿತು ಹಾಗೂ ಬಳಿಕ ಪುನಃ ನಿಂತಿತು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿನ ಪ್ರಕರಣವೊಂದರಲ್ಲಿ ಹರ್ಯಾಣ ಸರಕಾರವು, ಕೋಟ್‌ನಲ್ಲಿ ಜಮೀನು ಕ್ರೋಡೀಕರಣವು 2013ರಲ್ಲಿ ನಿಂತಿದೆಯೆಂದು ತಿಳಿಸಿತ್ತು.
ಗ್ರಾಮದಲ್ಲಿ ಕೃಷಿ ಜಮೀನಿಲ್ಲ. ಆದುದರಿಂದ ಕ್ರೋಡೀಕರಣದ ಅಗತ್ಯವಿಲ್ಲವೆಂದು ಅದು ‘ರೋಜ್ ಕಾ ಗುಜ್ಜರ್’ಗೆ ಅದು ಹೇಳಿತ್ತು. ಬಳಿಕ 2014ರಲ್ಲಿ ಅದನ್ನು ನಿಲ್ಲಿಸಲಾಗಿತ್ತು.
ಯಾವುದಾದರೂ ಯೋಜನೆಗೆ ಅನುಕೂಲ ಕಲ್ಪಿಸಲು ಸರಕಾರವು, ಹೆಚ್ಚಿನದು ಅರಣ್ಯವಾಗಿರುವ ಬೆಟ್ಟಪ್ರದೇಶದ ವಿಭಜನೆಗಾಗಿ ಪುನಃ ಕ್ರೋಡೀಕರಣವನ್ನು ಉಪಯೋಗಿಸಲಿದೆಯೇ ಎಂಬ ಪ್ರಶ್ನೆಯನ್ನು ಇತ್ತೀಚಿನ ವರದಿಗಳು ಎಬ್ಬಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X