ಕನಿಷ್ಠ ಈ 6 ಕಾರಣಗಳಿಗಾಗಿ ನಿಮ್ಮ ಮಕ್ಕಳಿಗೆ ಹೊಡೆಯಬೇಡಿ

ನೀವು ನಿಮ್ಮ ಮಕ್ಕಳಿಗೆ ಹೊಡೆಯುತ್ತೀರಾ? ಹೊಡೆಯುವುದರಿಂದ ಮಕ್ಕಳು ಉತ್ತಮ ವ್ಯಕ್ತಿಯಾಗುತ್ತಾರೆ ಎಂದು ಹೇಳಿದ್ದೂ ಇದೆಯೆ? ಹಾಗಿದ್ದರೆ ನೀವು ಸ್ವತಃ ಬದಲಾಗಬೇಕು. ಸಾಮಾಜಿಕ ಸಾಕ್ಷ್ಯಗಳು ಮಕ್ಕಳಿಗೆ ಹೊಡೆಯುವುದು ಅವರಿಗೆ ಕೆಟ್ಟದನ್ನೇ ಮಾಡುತ್ತದೆ, ಅವರ ದೈಹಿಕ ಮತ್ತು ಮಾನಸಿಕ ಕ್ಷಮತೆ ಇಳಿಯುತ್ತದೆ ಎಂದಿದೆ.
1. ಕೆಟ್ಟ ಸಾಮಾಜಿಕ ಮೌಲ್ಯ ಕಲಿಸುತ್ತದೆ
ಹೊಡೆಯುವುದು ಗೌರವದ ಕೊರತೆ ತೋರಿಸುತ್ತದೆ. ನೀವು ಮಕ್ಕಳನ್ನು ಹೊಡೆಯುವಾಗ ಅವರನ್ನು ಮಾನವರಂತೆ ಕಾಣದೆ ಕೇವಲ ಒಂದು ವಸ್ತುವಾಗಿ ನೋಡುತ್ತೀರಿ. ಇದು ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಮಕ್ಕಳು ಶಿಕ್ಷೆಯನ್ನು ನೋವಿನ ಜೊತೆಗೆ ಹೋಲಿಸಬಹುದು ಮತ್ತು ಪ್ರೀತಿಸುವ ಸಂಬಂಧದಲ್ಲೂ ದೈಹಿಕವಾಗಿ ಶಿಕ್ಷಿಸುವುದು ಸರಿ ಎನ್ನುವ ಪಾಠ ಕಲಿಯುತ್ತಾರೆ.
2. ಬಲಿಷ್ಠವಾಗಿರುವುದೇ ಸರಿ ಎನ್ನುವ ಭಾವನೆ
ನಿಮ್ಮ ಮಗು ಏನಾದರೂ ಅರ್ಥ ಮಾಡಿಕೊಳ್ಳಬೇಕೆಂದರೆ ದೈಹಿಕ ಶಿಕ್ಷೆ ಉತ್ತರವಾಗಲಾರದು. ಮಕ್ಕಳು ತಪ್ಪು ಮಾಡಿದಾಗ ಹೊಡೆದರೆ ಬಲಿಷ್ಠವಾದುದು ಯಾವಾಗಲೂ ಸರಿ ಎನ್ನುವ ಸಂದೇಶ ಅವರಿಗೆ ಹೋಗಿಬಿಡುತ್ತದೆ.
3. ಹಿರಿಯರಿಗೆ ಕಿರಿಯರನ್ನು ಹೊಡೆಯುವ ಹಕ್ಕಿದೆ ಎನ್ನುವ ಸಂದೇಶ
ಮಕ್ಕಳು ತಮ್ಮ ಹಿರಿಯ ಹೆತ್ತವರನ್ನು ಹೊಡೆಯುವುದು ಕೇಳಿರಬಹುದು. ಕ್ರೂರ ಅಲ್ಲವೇ? ನೀವು ನಿಮ್ಮ ಮಗುವಿಗೆ ಹೊಡೆದಾಗ ಅದೇ ಸಂದೇಶ ಅವರಿಗೆ ಹೋಗಿರುತ್ತದೆ. ದೊಡ್ಡ ಮತ್ತು ಬಲಿಷ್ಠ ವ್ಯಕ್ತಿಗಳು ಸಣ್ಣ ಮತ್ತು ದುರ್ಬಲರಿಗೆ ಹೊಡೆಯಬಹುದು ಎನ್ನುವ ಸಂದೇಶ. ಮುಖ್ಯವಾಗಿ ನೀವು ನಿಮ್ಮ ಮಗುವಿಗೆ ಶಿಸ್ತು ಕಲಿಸಲು ಹೊಡೆದರೆ, ಮಗು ನಿಮಗಿಂತ ದೊಡ್ಡದಾಗಿ ಬೆಳೆದಾಗಿನ ಪರಿಣಾಮವನ್ನು ಕಲ್ಪಿಸಿಕೊಳ್ಳಿ.
4. ಉಗ್ರ ಸ್ವಭಾವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು. ಅದು ಸರಿಯಲ್ಲ.
ಹೊಡೆಯುವುದು ಮಕ್ಕಳಲ್ಲಿ ಹಿಂಸೆಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎನ್ನುವ ಸಂದೇಶ ಕೊಡುತ್ತದೆ. ಮಗುವಿಗೆ ಹೊಡೆಯುವುದು ಅವರ ಮೇಲೆ ದೌರ್ಜನ್ಯ ಬೀರುವುದೇ ಆಗಿದೆ. ಯಾವುದೇ ಕೆಲಸವಾಗಬೇಕಾದರೆ ಹಿಂಸೆ ಮಾಡಬೇಕು ಎನ್ನುವ ಸಂದೇಶ ಮಕ್ಕಳಿಗೆ ಹೋಗುತ್ತದೆ.
5. ಆತ್ಮವಿಶ್ವಾಸದ ಪರಿಣಾಮ
ಜೀವನದಲ್ಲಿ ನಿಮ್ಮ ಮಗು ಆತ್ಮವಿಶ್ವಾಸಿಯಾಗಿ ಬೆಳೆಯಬೇಕಾದರೆ ಹೊಡೆಯುವುದು ಉತ್ತಮವಲ್ಲ. ಅವರನ್ನು ರಕ್ಷಿಸಬೇಕಾದ ಜನರೇ ಅವರಿಗೆ ಹೊಡೆದರೆ ಮಗು ತನ್ನದೇ ಗುರುತು ಮತ್ತು ವ್ಯಕ್ತಿತ್ವದ ಬಗ್ಗೆ ಪ್ರಶ್ನಿಸಿಕೊಳ್ಳುವಂತೆ ಆಗುತ್ತದೆ.
6. ಮಾನಸಿಕ ಆರೋಗ್ಯ ಸಮಸ್ಯೆ ಬೆಳೆಯಲು ಕಾರಣವಾಗುತ್ತದೆ
ಹೊಸ ಅಧ್ಯಯನವು ವಯಸ್ಕ ಮಾನಸಿಕ ಆರೋಗ್ಯ ವಿಷಯಗಳಿಗೂ ಮಕ್ಕಳಿಗೆ ಶಿಸ್ತಿಗಾಗಿ ಹೊಡೆಯುವುದರ ನಡುವೆಯೂ ಸಂಬಂಧವಿದೆ ಎಂದು ಹೇಳಿದೆ. ಹೀಗಾಗಿ ಮುಂದಿನ ಬಾರಿ ನಿಮ್ಮ ಮಗುವಿಗೆ ಹೊಡೆಯುವಾಗ ಅದರಿಂದ ದೀರ್ಘ ಕಾಲದಲ್ಲಿ ಆಗಬಹುದಾದ ಮಾನಸಿಕ ಸಮಸ್ಯೆಗಳ ಬಗ್ಗೆ ನೆನಪಿಸಿಕೊಳ್ಳಿ.
ಕೃಪೆ: www.indiatimes.com
ನಮ್ಮ ಪೇಜ್ ಲೈಕ್ ಮಾಡಿ







