2018 ವಿಶ್ವಕಪ್‌ಗೆ ಬ್ರೆಝಿಲ್ ಅರ್ಹತೆ ಪಡೆಯುವುದು ಕಷ್ಟಕರ
ನೂತನ ಕೋಚ್ ಲಿಯೊನಾರ್ಡೊ ಚಿಂತೆ
ರಿಯೋ ಡಿ ಜನೈರೊ, ಜೂ.21: ಬ್ರೆಝಿಲ್ ತಂಡ ರಶ್ಯದಲ್ಲಿ 2018ರಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಬಗ್ಗೆ ನೂತನ ಕೋಚ್ ಆಡೆನಾರ್ ಲಿಯೊನಾರ್ಡೊ ಚಿಂತೆ ವ್ಯಕ್ತಪಡಿಸಿದ್ದಾರೆ.
ರಶ್ಯದಲ್ಲಿ 2018ರಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗುವ ಸಾಧ್ಯತೆಯಿದೆ. ಬ್ರೆಝಿಲ್ ಪ್ರಸ್ತುತ ದಕ್ಷಿಣ ಅಮೆರಿಕದ ಅರ್ಹತಾ ಪಟ್ಟಿಯಲ್ಲಿ ಆರನೆ ಸ್ಥಾನದಲ್ಲಿದೆ. ಇದು ಅರ್ಹತೆ ಗಿಟ್ಟಿಸಲು ಅನುಕೂಲಕರವಾಗಿಲ್ಲ ಎಂದು ‘ಟೈಟ್’ ಎಂದೇ ಖ್ಯಾತಿ ಪಡೆದಿರುವ ಲಿಯೊನಾರ್ಡೊ ಹೇಳಿದ್ದಾರೆ.
‘‘ಬ್ರೆಝಿಲ್ ತಂಡ ವಿಶ್ವಕಪ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುವ ಬಗ್ಗೆ ಹೆಚ್ಚು ಗಮನ ನೀಡಲಾಗುವುದು. ನಮಗೆ ಟೂರ್ನಿಯಿಂದ ಹೊರಗುಳಿಯುವ ಭೀತಿಯೂ ಇದೆ. ಆದರೆ ನಮ್ಮ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವಿದೆ’’ ಎಂದು ಕೋಚ್ ಲಿಯೊನಾರ್ಡೊ ವಿಶ್ವಾಸ ವ್ಯಕ್ತಪಡಿಸಿದರು.
ಬ್ರೆಝಿಲ್ 1930 ರಿಂದ ಪ್ರತಿ ಆವೃತ್ತಿಯ ವಿಶ್ವಕಪ್‌ನಲ್ಲೂ ಸ್ಪರ್ಧಿಸಿದೆ.
ಸೆಪ್ಟಂಬರ್‌ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಅರ್ಹತಾ ಟೂರ್ನಿ ಕೋಚ್ ಆಗಿ ಲಿಯೊನಾರ್ಡೊ ಮುಂದಿರುವ ಮೊದಲ ಸವಾಲಾಗಿದೆ.







