ಬಿಹಾರ: ಸಿಡಿಲಬ್ಬರಕ್ಕೆ 46 ಸಾವು, 8 ಗಾಯ

ಪಾಟ್ನಾ, ಜೂ.22: ರಾಜ್ಯದಾದ್ಯಂತ ಮಂಗಳವಾರ ಮುಂಗಾರು ಮಳೆ ಆರಂಭವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಮಿಂಚು-ಸಿಡಿಲಿನ ಹೊಡೆತಕ್ಕೆ ಕನಿಷ್ಠ 46 ಮಂದಿ ಸಾವನ್ನಪ್ಪಿದ್ದರೆ, 8 ಮಂದಿ ಗಾಯಗೊಂಡಿದ್ದಾರೆಂದು ವಿಪತ್ತು ನಿರ್ವಹಣಾ ವಿಭಾಗದ ಕಾರ್ಯದರ್ಶಿ ವ್ಯಾಸಜಿ ತಿಳಿಸಿದ್ದಾರೆ.
ನಳಂದ, ಔರಂಗಬಾದ್, ಪೂರ್ನಿಯಾ ಹಾಗೂ ರೋಹ್ಟಾಸ್ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭಾರೀ ಹಾನಿಯಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ಸರಕಾರದಿಂದ 4 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ವ್ಯಾಸಜಿ ಹೇಳಿದ್ದಾರೆ.
ಮಂಗಳವಾರ ಸಂಜೆಯಿಂದ ಬಿಹಾರದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಗುಡುಗು-ಸಿಡಿಲಿನ ಆರ್ಭಟಕ್ಕೆ ಜೋರಾಗಿತ್ತು.
Next Story





