ಇಂಡೋನೇಷ್ಯಾದಲ್ಲಿ ಹಜ್ ಗೆ ಹೋಗಲು ಎಷ್ಟು ವರ್ಷ ಕಾಯಬೇಕು ಗೊತ್ತೇ ?

ಜಿದ್ದಾ , ಜೂ. 22 : ಸುಮಾರು 22 ಕೋಟಿ ಮುಸ್ಲಿಂ ಜನಸಂಖ್ಯೆ ಇರುವ ಇಂಡೋನೇಷ್ಯಾದಲ್ಲಿ 32 ಲಕ್ಷ ಜನರು ಹಜ್ ಯಾತ್ರೆಯ ಕಾಯುತ್ತಿರುವವರ ಪಟ್ಟಿಯಲ್ಲಿದ್ದು ಅಲ್ಲಿನ ಸರಾಸರಿ ಹಜ್ ಸರದಿಗೆ ಕಾಯುವ ಸಮಯ 37 ವರ್ಷಗಳು ಎಂದು ಇಂಡೋನೇಷ್ಯನ್ ಮುಸ್ಲಿಂ ಅಸೋಸಿಯೇಷನ್ ಫಾರ್ ಹಜ್ ಎಂಡ್ ಉಮ್ರಾ ಟ್ರಾವೆಲ್ಸ್ ನ ಅಧ್ಯಕ್ಷ ಜೊಕೊ ಆಸ್ಮೋರೊ ಅವರು ಹೇಳಿದ್ದಾರೆ.
ದೇಶದಲ್ಲಿ 3,500 ಟ್ರಾವೆಲ್ ಏಜೆನ್ಸಿಗಳಿದ್ದು ಇವುಗಳ ಪೈಕಿ 668 ಸಂಸ್ಥೆಗಳು ಉಮ್ರಾಗೆ ಮಾನ್ಯತೆ ಪಡೆದಿವೆ. ಸುಮಾರು 200 ಸಂಸ್ಥೆಗಳು ಸೌದಿ ಹಜ್ ಸಚಿವಾಲಯದಿಂದ ಮಾನ್ಯತೆ ಪಡೆದಿವೆ. ದೇಶದಲ್ಲಿ ಹಜ್ , ಉಮ್ರಾ ಯಾತ್ರಿಕರನ್ನು ಕರೆದೊಯ್ಯಲು ನಾಲ್ಕು ವಿಮಾನ ಸಂಸ್ಥೆಗಳಿವೆ.
Next Story





